ಈ ತರಕಾರಿಯನ್ನು ಅರೆದು ಪೇಸ್ಟ್ ಮಾಡಿ ಹಚ್ಚಿದರೆ ಬೋಳುತಲೆಯಲ್ಲೂ ದಷ್ಟಪುಷ್ಟವಾದ ಕಡುಕಪ್ಪು ಕೂದಲು ಬೆಳೆಯುತ್ತದೆ! ಒಮ್ಮೆ ಟ್ರೈ ಮಾಡಿ ನೋಡಿ
ಹಾಗಲಕಾಯಿ... ರುಚಿಯಲ್ಲಿ ಕಹಿಯಾದರೂ, ಆರೋಗ್ಯಕ್ಕೆ ಸಿಹಿಯನ್ನೀಡುವ ತರಕಾರಿ. ಇದು ಶಿಲೀಂಧ್ರ ನಿವಾರಕ ಗುಣಗಳು ಹೇರಳವಾಗಿದ್ದು, ತಲೆಹೊಟ್ಟು ಉಂಟುಮಾಡುವ ಶಿಲೀಂಧ್ರವನ್ನು ಕೊಲ್ಲುತ್ತದೆ. ಅಂತೆಯೇ ಅರಿಶಿನ ರಸವು ನೆತ್ತಿಯಲ್ಲಿ ತೇವಾಂಶವನ್ನು ಕಡಿಮೆ ಮಾಡುತ್ತದೆ. ಇವೆರೆಡರ ಮಿಶ್ರಣ ಕೂದಲನ್ನು ಸೊಂಪಾಗಿ ಬೆಳೆಯುವಂತೆ ಮಾಡುತ್ತದೆ.
ಅರಿಶಿನದಲ್ಲಿರುವ ಜೀವಕೋಶಗಳು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಎಂದು ಅಧ್ಯಯನವು ತೋರಿಸಿದೆ. ನೆತ್ತಿಯನ್ನು ಪೋಷಿಸುವ ಕೂದಲಿನ ಕಿರುಚೀಲಗಳನ್ನು ಬಲಪಡಿಸುತ್ತದೆ ಎಂದು ತಜ್ಞರು ಹೇಳುತ್ತಾರೆ.
ತಾಜಾ ಹಾಗಲಕಾಯಿಯನ್ನು ತೆಗೆದುಕೊಂಡು ಚೆನ್ನಾಗಿ ತೊಳೆಯಿರಿ. ನಂತರ ಸಣ್ಣ ತುಂಡುಗಳಾಗಿ ಕತ್ತರಿಸಿ ಬೀಜಗಳನ್ನು ತೆಗೆದುಹಾಕಿ. ಅದನ್ನು ಬ್ಲೆಂಡರ್ ಜಾರ್‌ನಲ್ಲಿ ಹಾಕಿ ಹಾಲಿನೊಂದಿಗೆ ಮಿಶ್ರಣ ಮಾಡಿ.
ಹಾಗೆಯೇ ಹಾಗಲಕಾಯಿ ಎಣ್ಣೆಯನ್ನು ತಯಾರಿಸಬಹುದು. ತೆಂಗಿನೆಣ್ಣೆ ಅಥವಾ ಆಲಿವ್ ಎಣ್ಣೆಯಲ್ಲಿ ಹಾಗಲಕಾಯಿ ತುಂಡುಗಳನ್ನು ಹಾಕಿ ಕೆಲವು ದಿನಗಳವರೆಗೆ ಹಾಗೇ ಬಿಡಿ. ನಂತರ ಆ ತುಂಡುಗಳನ್ನು ಪುಡಿಮಾಡಿ ಎಣ್ಣೆ ಜೊತೆ ಸೇರಿಸಿ ಕೂದಲಿಗೆ ಹಚ್ಚಿ. ಇದು ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.
ಹಾಗಲಕಾಯಿ ಆ್ಯಂಟಿಮೈಕ್ರೊಬಿಯಲ್ ಮತ್ತು ಆ್ಯಂಟಿ ಆಕ್ಸಿಡೆಂಟ್ ಗುಣಗಳಿಂದ ಸಮೃದ್ಧವಾಗಿದೆ. ಇದು ನೆತ್ತಿಯ ಮೇಲಿನ ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುತ್ತದೆ. ಹಾಗೆಯೇ ಕೂದಲು ಉದುರುವುದನ್ನು ತಡೆಯುತ್ತದೆ.
ಇದಲ್ಲಿರುವ ವಿಟಮಿನ್‌ಗಳು ಕೂದಲನ್ನು ಸುಂದರವಾಗಿ ಮತ್ತು ಉದ್ದವಾಗಿ ಬೆಳೆಯುವಂತೆ ಮಾಡುತ್ತದೆ. ನಿಮ್ಮ ಕೂದಲಿಗೆ ನೈಸರ್ಗಿಕ ಕಂಡೀಷನರ್ ಆಗಿಯೂ ಕಾರ್ಯ ನಿರ್ವಹಿಸುತ್ತದೆ. ಕೂದಲು ಒಡೆಯುವುದನ್ನು ಕೂಡ ತಡೆಯುತ್ತದೆ.
ಸೂಚನೆ: ಲೇಖನದಲ್ಲಿ ಬರೆದ ಸಲಹೆಗಳು ಸಾಮಾನ್ಯ ಮಾಹಿತಿ ಮಾತ್ರ. ಯಾವುದೇ ರೀತಿಯ ಸಮಸ್ಯೆ ಅಥವಾ ಪ್ರಶ್ನೆಗೆ, ಖಂಡಿತವಾಗಿಯೂ ವೈದ್ಯರನ್ನು ಸಂಪರ್ಕಿಸಿ. ಇದನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ