ನತಾಶ ಜೊತೆ ವಿಚ್ಛೇದನ ವದಂತಿ ನಡುವೆಯೇ ಹಾಟ್ ಬ್ಯೂಟಿ ಜೊತೆ ಹಾರ್ದಿಕ್ ಪಾಂಡ್ಯ! ಈ ಚೆಲುವೆ ಬೇರಾರು ಅಲ್ಲ…

Thu, 11 Jul 2024-2:37 pm,

ಟೀಂ ಇಂಡಿಯಾದ ಸ್ಟಾರ್ ಆಲ್-ರೌಂಡರ್ ಹಾರ್ದಿಕ್ ಪಾಂಡ್ಯ ಮತ್ತು ಅವರ ಪತ್ನಿ ನತಾಶಾ ಸ್ಟಾಂಕೋವಿಕ್ ಬೇರೆಯಾಗಿದ್ದಾರೆ. ಶೀಘ್ರದಲ್ಲೇ ವಿಚ್ಛೇದನ ಪಡೆದುಕೊಳ್ಳಲಿದ್ದಾರೆ ಎಂಬೆಲ್ಲಾ ವದಂತಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಆದರೆ ಈ ಬಗ್ಗೆ ನತಾಶಾ ಸ್ಟ್ಯಾಂಕೋವಿಕ್  ಆಗಲಿ, ಹಾರ್ದಿಕ್ ಆಗಲಿ ಒಂದೇ ಒಂದು ಮಾತನ್ನೂ ಮಾತನಾಡದಿರುವುದು ಇನ್ನಷ್ಟು ಆಶ್ಚರ್ಯಕರವಾಗಿದೆ. ಇನ್ನು ಈ ವದಂತಿಗಳೊಂದಿಗೆ ಹಾರ್ದಿಕ್ ಪಾಂಡ್ಯ ಫೋಟೋ ವೈರಲ್ ಆಗುತ್ತಿದ್ದು ಬಿಸಿಬಿಸಿ ಚರ್ಚೆಯ ವಿಷಯವಾಗಿದೆ.

ಅಂದಹಾಗೆ ವೈರಲ್ ಆಗುತ್ತಿರುವ ಫೋಟೋದಲ್ಲಿ ಹಾರ್ದಿಕ್ ಜೊತೆ ಓರ್ವ ಮಹಿಳೆಯೂ ಇದ್ದಾಳೆ, ಅಷ್ಟಕ್ಕೂ ಆಕೆ ಯಾರು ಎಂಬುದು ಸದ್ಯಕ್ಕೆ ನೆಟ್ಟಿಗರ ಕುತೂಹಲ.

ಈ ಯುವತಿ ಹಾರ್ದಿಕ್ ಪಾಂಡ್ಯ ಜೊತೆ ಕಾಣಿಸಿಕೊಂಡಿದಷ್ಟೇ ಅಲ್ಲದೆ, ಕರ್ನಾಲ್ ಪಾಂಡ್ಯ ಕುಟುಂಬದ ಜೊತೆಯೂ ಕ್ಲೋಸ್ ಆಗಿರುವುದು ಕಂಡುಬಂದಿದೆ. ಈ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.

ಈ ಫೋಟೋಗಳಲ್ಲಿ ಹಾರ್ದಿಕ್ ಪಾಂಡ್ಯ ಮತ್ತು ಪ್ರಾಚಿ ಸೋಲಂಕಿ ಕಾಣಿಸಿಕೊಂಡಿದ್ದಾರೆ. ಅಂದಹಾಗೆ ಪ್ರಾಚಿ ಸೋಲಂಕಿ ಪ್ರಸಿದ್ಧ ಮೇಕಪ್ ಆರ್ಟಿಸ್ಟ್. ಇನ್‌ಸ್ಟಾಗ್ರಾಂನಲ್ಲಿ ಸುಮಾರು 546K ಫಾಲೋವರ್ಸ್ ಹೊಂದಿದ್ದಾಳೆ.

ಪ್ರಾಚಿ ಸೋಲಂಕಿ ಹಾರ್ದಿಕ್ ಅವರ ಸಹೋದರ ಕೃನಾಲ್ ಪಾಂಡ್ಯ ಮತ್ತು ಅವರ ಪತ್ನಿ ಪಂಖೂರಿ ಜೊತೆಯೂ ಫೋಟೋಗಳನ್ನು ತೆಗೆಸಿಕೊಂಡಿದ್ದಾರೆ. ಇಡೀ ಪಾಂಡ್ಯ ಕುಟುಂಬವು ಪ್ರಾಚಿಗೆ ಬಹಳ ಹತ್ತಿರವಾಗಿದ್ದು, ಸದ್ಯ ಡೇಟಿಂಗ್ ವದಂತಿಗಳಿಗೆ ಉತ್ತೇಜನ ನೀಡಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link