ವರ್ಷದಲ್ಲಿ ಒಂದೇ ಬಾರಿ ಬೆಳೆಯುವ ಈ ಸೊಪ್ಪು ಸಿಕ್ಕರೆ ಬಿಡಲೇಬೇಡಿ... ಇದನ್ನು ಸೇವಿಸಿದರೆ ಕಣ್ಣು ಎಷ್ಟೇ ಮಂಜಾಗುತ್ತಿದ್ದರೂ ಶಾರ್ಪ್ ಆಗುತ್ತೆ! ಕನ್ನಡಕದ ಅವಶ್ಯಕತೆಯೇ ಇರಲ್ಲ
ಮಳೆಗಾಲದಲ್ಲಿ ಮಲಬಾರ್ ಬಸಳೆ ಸೇವಿಸುವುದು ಆರೋಗ್ಯಕ್ಕೆ ಬಹಳಷ್ಟು ಪ್ರಯೋಜನ ಸಿಗುತ್ತದೆ. ಇದು ಮಳೆಗಾಲದಲ್ಲಿ ಮಾತ್ರ ಚೆನ್ನಾಗಿ ಬೆಳೆಯುವ ಸೊಪ್ಪಾಗಿದ್ದು, ಇದನ್ನು ಅನೇಕ ಆರೋಗ್ಯ ಸಮಸ್ಯೆ ನಿವಾರಕವಾಗಿ ಬಳಕೆ ಮಾಡಲಾಗುತ್ತದೆ.
ಪ್ರತಿನಿತ್ಯ 100 ಗ್ರಾಂ ಮಲಬಾರ್ ಬಸಳೆ ತಿನ್ನುವುದರಿಂದ 100 ಪ್ರತಿಶತ ವಿಟಮಿನ್ ಸಿ ಮತ್ತು ವಿಟಮಿನ್ ಎ ದೊರೆಯುತ್ತದೆ ಎನ್ನುತ್ತಾರೆ ಪೌಷ್ಟಿಕತಜ್ಞ ಶೈಲಿ ತೋಮರ್. ಈ ಎರಡೂ ಪೋಷಕಾಂಶಗಳು ಬಲವಾದ ರೋಗನಿರೋಧಕ ಶಕ್ತಿಗೆ ಅವಶ್ಯಕವಾಗಿದೆ.
ಮಲಬಾರ್ ಬಸಳೆಯನ್ನು ಪಾಲಾಕ್ ಎಂದೂ ಸಹ ಕರೆಯುತ್ತಾರೆ. ಆದರೆ ಇದು ಬಳ್ಳಿಯಲ್ಲಿ ಬೆಳೆಯುವ ಸೊಪ್ಪಾಗಿದ್ದು ಹೆಚ್ಚಿನ ಪ್ರಮಾಣದಲ್ಲಿ ಲೋಳೆ ಅಂಶವನ್ನು ಹೊಂದಿರುತ್ತದೆ. ಇದು ದೇಹದಲ್ಲಿನ ರಂಜಕದ ಕೊರತೆಯನ್ನು ಪೂರೈಸುತ್ತದೆ ಮತ್ತು ಉತ್ತಮ ಪ್ರಮಾಣದ ಪೊಟ್ಯಾಸಿಯಮ್ ಅನ್ನು ಹೊಂದಿರುತ್ತದೆ.
ಮಳೆಗಾಲದಲ್ಲಿ ಬರುವ ನೆಗಡಿ, ಕೆಮ್ಮು, ಜ್ವರದಂತಹ ಸಮಸ್ಯೆಗಳೂ ಕೂಡ ಇದನ್ನು ಸೇವಿಸುವುದರಿಂದ ದೂರ ಉಳಿಯುತ್ತವೆ. ಅಲ್ಲದೆ, ಈ ಸೊಪ್ಪನ್ನು ತಿನ್ನುವುದು ಚರ್ಮಕ್ಕೆ ತುಂಬಾ ಪ್ರಯೋಜನಕಾರಿ. ವಿಟಮಿನ್ ಸಿ ಸಮೃದ್ಧವಾಗಿರುವ ಆಹಾರವನ್ನು ಸೇವಿಸುವುದರಿಂದ ದೇಹದಲ್ಲಿ ಕಬ್ಬಿಣವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ.
ಮಲಬಾರ್ ಬಸಳೆಯಲ್ಲಿ ಫೋಲೇಟ್ ಸಮೃದ್ಧವಾಗಿದೆ. ಗರ್ಭಿಣಿಯರಿಗೆ ಈ ಫೋಲೇಟ್ ಅತ್ಯಗತ್ಯ. ಗರ್ಭಾವಸ್ಥೆಯಲ್ಲಿ ಕಡಿಮೆ ಫೋಲೇಟ್ ಮಟ್ಟವು ಭ್ರೂಣದ ಬೆಳವಣಿಗೆಯಲ್ಲಿ ಸಮಸ್ಯೆಗಳನ್ನು ಉಂಟುಮಾಡಬಹುದು. ಹೀಗಾಗಿ ಬಸಳೆ ಸೇವಿಸುವುದರಿಂದ ಮಗುವಿಗ ಆರೋಗ್ಯ ಕಾಪಾಡಲು ಸಹಾಯಕವಾಗಿದೆ.
ಮಲಬಾರ್ ಬಸಳೆಯಲ್ಲಿ ಕಂಡುಬರುವ ಫೋಲೇಟ್ ಹೃದ್ರೋಗಗಳನ್ನು ದೂರವಿಡುತ್ತದೆ. ಫೋಲೇಟ್ ಸೇವನೆಯು ಹೃದಯಾಘಾತ ಮತ್ತು ಪಾರ್ಶ್ವವಾಯು ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.
ಇನ್ನು ಮಲಬಾರ್ ಬಸಳೆಯಲ್ಲಿ ವಿಟಮಿನ್ ಎ ಸಮೃದ್ಧವಾಗಿದೆ. ಇದು ಕಣ್ಣಿನ ಆರೋಗ್ಯ ಮತ್ತು ಉತ್ತಮ ರೋಗನಿರೋಧಕ ಶಕ್ತಿಗೆ ಅವಶ್ಯಕವಾಗಿದೆ. ಉತ್ತಮ ಆರೋಗ್ಯಕ್ಕೆ ವಿಟಮಿನ್ ಎ ಅತ್ಯಗತ್ಯ. ಇದನ್ನು ಸೇವಿಸಿದರೆ ಮಂದದೃಷ್ಟಿ ಸುಧಾರಿಸುವುದಲ್ಲದೆ, ಕಣ್ಣಿನ ಆರೋಗ್ಯವನ್ನು ಕಾಪಾಡುತ್ತದೆ.
ಸೂಚನೆ : ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.zee kannada news ಇದನ್ನು ಖಚಿತಪಡಿಸುವುದಿಲ್ಲ.