Malala Yousafzai: ನೊಬೆಲ್ ಪ್ರಶಸ್ತಿ ಪುರಸ್ಕೃತೆ ಮಲಾಲಾ ಯೂಸುಫ್‌ಜಾಯ್ ಮದುವೆ ಚಿತ್ರಗಳು
ಟ್ವಿಟರ್ ಖಾತೆಯಲ್ಲಿ ತಮ್ಮ ವಿವಾಹದ ಸುದ್ದಿಯನ್ನು ಹಂಚಿಕೊಂಡಿರುವ ಶಿಕ್ಷಣ ಕಾರ್ಯಕರ್ತೆ ಮಲಾಲಾ ಯೂಸುಫ್‌ಜಾಯ್, ‘ತಾವು ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಸಣ್ಣ ಸಮಾರಂಭದಲ್ಲಿ ವಿವಾಹವಾಗಿದ್ದೇವೆ’ ಎಂದು ತಿಳಿಸಿದ್ದಾರೆ. ‘ಇಂದು ನನ್ನ ಜೀವನದಲ್ಲಿ ಅಮೂಲ್ಯವಾದ ದಿನ. ಅಸ್ಸರ್ ಮಲಿಕ್ ಮತ್ತು ನಾನು ದಾಂಪತ್ಯ ಜೀವನಕ್ಕೆ ಕಾಲಿಟ್ಟೆದ್ದೇವೆ’ ಅಂತಾ ಅವರು ಟ್ವೀಟ್ ಮಾಡಿದ್ದಾರೆ.
ನೊಬೆಲ್ ಪ್ರಶಸ್ತಿ ಪುರಸ್ಕೃತೆ ಮಲಾಲಾ ಯೂಸುಫ್‌ಜಾಯ್ ವಿವಾಹವಾಗಿರುವುದು ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ)ಯ ಹೈಪರ್ಫಾರ್ಮೆನ್ಸ್ ಸೆಂಟರ್‌ನ ಜನರಲ್ ಮ್ಯಾನೇಜರ್ ‘ಅಸ್ಸರ್ ಮಲಿಕ್’ ಎಂದು ಮಾಧ್ಯಮಗಳು ವರದಿ ಮಾಡಿವೆ. ಅಸ್ಸರ್ ಅವರ ಲಿಂಕ್ಡ್‌ಇನ್ ಪ್ರೊಫೈಲ್‌ನ ಪ್ರಕಾರ ಮೇ 2020 ರಲ್ಲಿ ಸಂಸ್ಥೆಯನ್ನು ಸೇರಿಕೊಂಡಿದ್ದಾರೆ. ಅವರ Instagram ಖಾತೆಯಲ್ಲಿ ವಿವಿಧ ಕ್ರಿಕೆಟ್ ಈವೆಂಟ್‌ಗಳ ಅನೇಕ ಫೋಟೋಗಳನ್ನು ಕಾಣಬಹುದು.
ಹೆಣ್ಣುಮಕ್ಕಳು ಶಾಲೆಗೆ ಹೋಗುವುದನ್ನು ತಡೆಯುವ ತಾಲಿಬಾನ್ ಪ್ರಯತ್ನಗಳ ವಿರುದ್ಧ 24ರ ಹರೆಯದ ಮಲಾಲಾ ಯೂಸುಫ್‌ಜಾಯ್ ಹೋರಾಟ ನಡೆಸುತ್ತಿದ್ದಾರೆ. ಹೆಣ್ಣುಮಕ್ಕಳು ಮತ್ತು ಮಹಿಳೆಯರ ಹಕ್ಕುಗಳಿಗಾಗಿ ಹೋರಾಟ ತಮ್ಮ ಮುಂದುವರಿಸಿದ್ದಾರೆ. ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಪಾಕಿಸ್ತಾನದ ಸ್ವಾತ್ ಕಣಿವೆಯಲ್ಲಿ ಪ್ರಚಾರ ನಡೆಸುತ್ತಿದ್ದ ವೇಳೆ 2012ರಲ್ಲಿ ಭಯೋತ್ಪಾದಕರು ಅವರ ತಲೆಗೆ ಗುಂಡು ಹಾರಿಸಿದ್ದರು. ಆಗ ಅವರಿಗೆ ಕೇವಲ 15 ವರ್ಷವಾಗಿತ್ತು. ನಂತರ ಚಿಕಿತ್ಸೆಗಾಗಿ ಮಲಾಲಾ ಅವರನ್ನು ಇಂಗ್ಲೆಂಡ್‌ಗೆ ಕರೆದೊಯ್ಯಲಾಗಿತ್ತು.
ಈ ಚಿತ್ರದಲ್ಲಿ ಮಲಾಲಾ ಯೂಸುಫ್‌ಜಾಯ್ ಅವರ ಪತಿ ಅಸ್ಸರ್ ಮಲಿಕ್ ಮತ್ತು ಅವರ ಪೋಷಕರಾದ ಜಿಯಾವುದ್ದೀನ್ ಹಾಗೂ ತೂರ್ ಪೆಕೈ ಯೂಸುಫ್‌ಜಾಯ್ ಅವರನ್ನು ಕಾಣಬಹುದು. ಸರಳವಾಗಿ ನಡೆದ ಮದುವೆ ಸಮಾರಂಭದಲ್ಲಿ ಚಿನ್ನದ ಕಸೂತಿಯೊಂದಿಗೆ ಗುಲಾಬಿ ಬಣ್ಣದ ಸಾಂಪ್ರದಾಯಿಕ ಉಡುಪನ್ನು ಮಲಾಲಾ ಧರಿಸಿದ್ದರು.