Malavya Mahapurush Rajyog 2024: ಶೀಘ್ರದಲ್ಲೆ ಧನದಾತ ಶುಕ್ರನಿಂದ ಮಾಲವ್ಯ ರಾಜಯೋಗ ರಚನೆ, ಲಕ್ಷ್ಮಿ ಕೃಪೆಯಿಂದ ಈ ಜನರ ಮೇಲೆ ಭಾರಿ ಧನವೃಷ್ಟಿ!
Malavya Mahapurush Rajyog 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲಿಯೇ ಧನ-ಸಂಪತ್ತು ಕರುಣಿಸುವಾತ ಶುಕ್ರ ಮಾಲವ್ಯ ರಾಜಯೋಗವನ್ನು ರಚಿಸಲಿದ್ದಾನೆ. ಇದರಿಂದ ಮೂರು ರಾಶಿಗಳ ಜನರ ಮೇಲೆ ತಾಯಿ ಲಕ್ಷ್ಮಿ ಕೃಪೆಯಿಂದ ಅಪಾರ ಧನವೃಷ್ಟಿಯಾಗಿ, ಜೀವನದಲ್ಲಿ ಒಳ್ಳೆಯ ದಿನಗಳು ಆರಂಭಗೊಳ್ಳಲಿವೆ.
ವೃಶ್ಚಿಕ ರಾಶಿ: ಇದು ನಿಮ್ಮ ಜಾತಕದ ಪಂಚಮ ಭಾವದಲ್ಲಿ ರೂಪುಗೊಳ್ಳುತ್ತಿದೆ. ಇದರಿಂದ ಮಕ್ಕಳಿಗೆ ಸಂಬಂಧಿಸಿದಂತೆ ಒಳ್ಳೆಯ ಸುದ್ದಿ ನಿಮಗೆ ಸಿಗಲಿದೆ. ಅರ್ಥಾತ್ ಮಕ್ಕಳ ನೌಕರಿ ಅಥವಾ ವಿವಾಹಕ್ಕೆ ಸಂಬಂಧಿಸಿದ ಸಿಹಿಸುದ್ದಿ ನಿಮಗೆ ಸಿಗುವ ಸಾಧ್ಯತೆ ಇದೆ. ಪ್ರೇಮ ಸಂಬಂಧದಲ್ಲಿರುವವಾರ ವಿವಾಹ ನಿಶ್ಚಿತಾರ್ಥ ನೆರವೇರುವ ಸಾಧ್ಯತೆಯೂ ಇದೆ. ಇದಲ್ಲದೆ ಈ ಅವಧಿಯಲ್ಲಿ ನಿಮಗೆ ಆಕಸ್ಮಿಕ ಧನಲಾಭ ಕೂಡ ಉಂಟಾಗಲಿದೆ. ಧನ ಪ್ರಾಪ್ತಿಯ ನಿಮ್ಮ ಆಸೆ ಈಡೇರಲಿದೆ. ವ್ಯಾಪಾರದಲ್ಲಿ ಧನಲಾಭ ಉಂಟಾಗಲಿದೆ. ಯಾವುದಾದರೊಂದು ಸ್ಥಿರಾಸ್ತಿ ಅಥವಾ ಚರಾಸ್ತಿಯನ್ನು ನೀವು ಖರೀದಿಸುವ ಸಾಧ್ಯತೆ ಇದೆ. ಶುಕ್ರ ನಿಮ್ಮ ರಾಶಿಯ ರಾಶ್ಯಾಧಿಪನಾಗಿದ್ದಾನೆ. ಹೀಗಾಗಿ ಮಾಲವ್ಯ ರಾಜಯೋಗ ನಿಮ್ಮ ಪಾಲಿಗೆ ಒಂದು ವರದಾನ ಎಂದರೆ ತಪ್ಪಾಗಲಾರದು,
ಕುಂಭ ರಾಶಿ: ಈ ಯೋಗ ನಿಮ್ಮ ಗೋಚರ ಜಾತಕದ ಧನಭಾವದಲ್ಲಿ ರಚನೆಯಾಗುತ್ತಿದೆ. ಹೀಗಾಗಿ ಈ ಅವಧಿಯಲ್ಲಿ ನೀವು ಆಕಸ್ಮಿಕ ಧನಲಾಭವನ್ನು ನಿರೀಕ್ಷಿಸಬಹುದು ಈ ಅವಧಿಯಲ್ಲಿ ನಿಮ್ಮ ತಿಜೋರಿಗೆ ಹಣದ ಒಳಹರಿವು ಹೆಚ್ಚಾಗಲಿದೆ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗಿ, ಆರ್ಥಿಕ ಸ್ಥಿತಿ ಬಲಿಷ್ಠಗೊಳ್ಳಲಿದೆ. . ಶುಕ್ರ ನಿಮ್ಮ ಜಾತಕದ ಚತುರ್ಥ ಹಾಗೂ ನವಮ ಭಾವಕ್ಕೆ ಅಧಿಪತಿ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ಆಸ್ತಿಪಾಸ್ತಿ-ವಾಹನ ಸುಖ ಪ್ರಾಪ್ತಿಯಾಗಲಿದೆ. ಆದಾಯ ದ್ವಿಗುಣಗೊಳ್ಳಲಿದೆ ಆದಾಯದ ಹೊಸ ಮೂಲಗಳು ನಿಮ್ಮ ಪಾಲಿಗೆ ತೆರೆದುಕೊಳ್ಳಲಿವೆ. ಕೆಲಸ ಕಾರ್ಯಗಳ ನಿಮಿತ್ತ ಯಾತ್ರೆ ಸಂಭವಿಸಲಿದೆ.
ಕನ್ಯಾ ರಾಶಿ: ನಿಮ್ಮ ಗೋಚರ ಜಾತಕದ ಸಪ್ತಮ ಭಾವದಲ್ಲಿ ಈ ರಾಜಯೋಗ ರಚನೆಯಾಗುತ್ತಿದೆ. ಹೀಗಾಗಿ ಈ ಅವಧಿಯಲ್ಲಿ ವಿವಾಹಿತರ ವೈವಾಹಿಕ ಜೀವನ ಉತ್ತಮವಾಗಿರಲಿದೆ. ಬಾಳಸಂಗಾತಿಯ ಜೊತೆಗೆ ಉತ್ತಮ ಹೊಂದಾಣಿಕೆ ಇರಲಿದೆ. ಅವಿವಾಹಿತರ ವಿವಾಹ ನಿಶ್ಚಿತಾರ್ಥ ನೆರವೇರುವ ಸಾಧ್ಯತೆ ಇದೆ. ಈ ಅವಧಿಯಲ್ಲಿ ನೀವು ಮಾಡುವ ಹೂಡಿಕೆಗೆ ಉತ್ತಮ ರೀಟರ್ನ್ ಸಿಗಲಿದೆ. ಆರ್ಥಿಕ ಸ್ಥಿತಿ ಗಟ್ಟಿಗೊಳ್ಳಲಿದೆ. ಪ್ರೇಮಸಂಬಂಧದಲ್ಲಿ ಪ್ರೇಮ ಉಕ್ಕಿ ಹರಿಯಲಿದೆ. ಪಾರ್ಟ್ನರ್ಶಿಪ್ ವ್ಯವಹಾರದಲ್ಲಿ ಉತ್ತಮ ಲಾಭ ನಿಮ್ಮದಾಗಲಿದೆ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)