ಮಾಲವ್ಯ ಮಹಾಪುರುಷ ರಾಜಯೋಗ ನಿರ್ಮಿಸಿದ ಧನದಾತ, ಧನಲಕ್ಷ್ಮಿ ಕೃಪೆಯಿಂದ ಈ ಜನರ ಜೀವನದಲ್ಲಿ ಶುಕ್ರ ದೆಸೆ ಆರಂಭ!

Sat, 02 Dec 2023-3:23 pm,

ಮೇಷ ರಾಶಿ: ಮಾಲವ್ಯ ಮಹಾಪುರುಷ ರಾಜಯೋಗ ನಿರ್ಮಾಣ ನಿಮ್ಮ ಪಾಲಿಗೆ ವರದಾನ ಸಾಬೀತಾಗಲಿದೆ. ಏಕೆಂದರೆ ಈ ರಾಜಯೋಗ ನಿಮ್ಮ ಗೋಚರ ಜಾತಕದ ಸಪ್ತಮ ಭಾವದಲ್ಲಿ ರೂಪುಗೊಳ್ಳುತ್ತಿದೆ. ಹೀಗಾಗಿ ಈ ಅವಧಿಯಲ್ಲಿ ವಿವಾಹಿತರ ವೈವಾಹಿಕ ಜೀವನ ಸುಮಧುರತೆಯಿಂದ ಕೂಡಿರಲಿದೆ. ಬಾಳಸಂಗಾತಿಯ ಸಂಪೂರ್ಣ ಬೆಂಬಲ ನಿಮಗೆ ಸಿಗಲಿದೆ. ಅವಿವಾಹಿತರಿಗೆ ವಿವಾಹ ಪ್ರಸ್ತಾಪ ಸಿಗುವ ಸಾಧ್ಯತೆ ಇದೆ. ಹೊಸವರ್ಷದಲ್ಲಿ ನಿಮಗೆ ವಿವಾಹದ ಯೋಗ ಗೋಚರಿಸುತ್ತಿದೆ ಮತ್ತು ನಿಮಗೆ ಶುಭಫಲಗಳು ಪ್ರಾಪ್ತಿಯಾಗಲಿವೆ. ಶುಕ್ರ ನಿಮ್ಮ ಜಾತಕದ ಧನಭವಕ್ಕೆ ಅಧಿಪತಿಯಾಗಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ಆಕಸ್ಮಿಕ ಧನಲಾಭ ಉಂಟಾಗುವ ಸಾಧ್ಯತೆ ಇದೆ. ಪ್ರತಿಯೊಂದು ಕ್ಷೇತ್ರದಲ್ಲಿ ಮನಸೋ ಇಚ್ಛೆ ಯಶಸ್ಸು ನಿಮ್ಮದಾಗಲಿದೆ. ನೀವು ಮಾಡುತ್ತಿರುವ ಕೆಲಸದಲ್ಲಿ ನಿಮಗೆ ಲಾಭ ಸಿಗಲಿದೆ ಮತ್ತು ಜೀವನದಲ್ಲಿ ಅದು ಸಕಾರಾತ್ಮಕ ಪ್ರಭಾವ ಬೀರಲಿದೆ.

ಮಿಥುನ ರಾಶಿ:ನಿಮ್ಮ ಗೋಚರ ಜಾತಕದ ಪಂಚಮಭಾವದಲ್ಲಿ ಈ ಯೋಗ ರೂಪುಗೊಂಡಿದೆ. ಹೀಗಾಗಿ ಸಂತಾನ ಭಾಗ್ಯ ಪ್ರಾಪ್ತಿಯಾಗುವ ಸಂಕೇತಗಳಿವೆ. ಲವ್ ಲೈಫ್ ವಿಷಯದಲ್ಲಿ ಈ ಅವಧಿ ಅತ್ಯುತ್ತಮ ಸಾಬೀತಾಗಲಿದೆ. ಅವಿವಾಹಿತರಿಗೆ ವಿವಾಹದ ಪ್ರಸ್ತಾವನೆ ಬರುವ ಸಾಧ್ಯತೆ ಇದೆ. ವಿದ್ಯಾರ್ಥಿಗಳಿಗೆ ಮಾಲವ್ಯ ರಾಜಯೋಗ ಶುಭ ಸಾಬೀತಾಗಲಿದೆ. ಗುರುವಿನ ದೃಷ್ಟಿ ಶುಕ್ರನ ಮೇಲಿರುವ ಕಾರಣ ನಿಮ್ಮ ಜೀವನದಲ್ಲಿ ಸಾಕಷ್ಟು ಖುಷಿಗಳ ಆಗಮನವಾಗಲಿದೆ. ಕಾರ್ಯಸ್ಥಳದಲ್ಲಿ ನಿಮ್ಮ ಕೆಲಸಕ್ಕೆ ಪ್ರಶಂಸೆ ವ್ಯಕ್ತವಾಗಲಿದೆ. ಉನ್ನತಿಯ ಜೊತೆಗೆ ಬಡ್ತಿ ಭಾಗ್ಯ ಪ್ರಾಪ್ತಿಯಾಗುವ ಸಾಧ್ಯತೆ ಇದೆ. ಬಂಧು ಮಿತ್ರರ ಜೊತೆಗೆ ಸುದೀರ್ಘ ಪ್ರಯಾಣ ಕೈಗೊಳ್ಳುವ ಸಾಧ್ಯತೆ ಇದೆ. ಇದರಿಂದ ಖರ್ಚು ಕೂಡ ಹೆಚ್ಚಾಗಲಿದೆ. 

ವೃಷಭ ರಾಶಿ: ಹಾಗೆ ನೋಡಿದರೆ ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶುಕ್ರ ತುಲಾ ರಾಶಿಗೆ ಅಧಿಪತಿಯಾಗುವುದರ ಜೊತೆಗೆ ನಿಮ್ಮ ರಾಶಿಯ ಅಧಿಪತಿಯೂ ಆಗಿದ್ದಾನೆ. ಈ ಅವಧಿಯಲ್ಲಿ ಶುಕ್ರ ನಿಮ್ಮ ಗೋಚರ ಜಾತಕದ ಆರನೇ ಮನೆಯಲ್ಲಿ ಸಂಚರಿಸಲಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನಿಮ್ಮ ವ್ಯಕ್ತಿತ್ವದಲ್ಲಿ ಹೊಸ ಹೊಳಪು ಕಾಣಲು ಸಿಗಲಿದೆ. ಅಷ್ಟೇ ಅಲ್ಲ ನಿಮಗೆ ಆಕಸ್ಮಿಕ ಧನಪ್ರಾಪ್ತಿ ಕೂಡ ಆಗಲಿದೆ. ಕೌಟುಂಬಿಕ ಸಂಬಂಧಗಳಲ್ಲಿ ಸುಧಾರಣೆ, ವ್ಯಾಪಾರದಲ್ಲಿ ಬಾಳಸಂಗಾತಿಯ ಸಲಹೆಯಿಂದ ಮಾಡುವ ನಿಮ್ಮ ಎಲ್ಲಾ ಕೆಲಸಗಳು ಯಶಸ್ವಿಯಾಗಲಿವೆ. ಕೋರ್ಟ್ ಕಚೇರಿ ವ್ಯವಹಾರಗಳಲ್ಲಿ ನಿಮಗೆ ಅಪಾರ ಯಶಸ್ಸು ಸಿಗಲಿದೆ. ಪಾಟ್ನರ್ಶಿಪ್ ಕೆಲಸದಲ್ಲಿ ನಿಮಗೆ ಉತ್ತಮ ಲಾಭ ಸಿಗಲಿದೆ.     

ತುಲಾ ರಾಶಿ: ಮಾಲವ್ಯ ರಾಜಯೋಗ ನಿಮ್ಮ ಪಾಲಿಗೆ ಶುಭ ಫಲಗಳನ್ನು ನೀಡಲಿದೆ. ಏಕೆಂದರೆ ಒಂದೆಡೆ ಶುಕ್ರ ನಿಮ್ಮ ರಾಶಿಗೆ ಅಧಿಪತಿಯಾಗಿದ್ದಾನೆ ಮತ್ತು ಸ್ವರಾಶಿಯಲ್ಲಿಯೇ ಸಂಚರಿಸಲಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನಿಮ್ಮ ವ್ಯಕ್ತಿತ್ವದಲ್ಲಿ ಭಾರಿ ಮೆರಗು ನಿಮಗೆ ಕಾಣುವ ಸಾಧ್ಯತೆ ಇದೆ. ವಿವಾಹಿತರ ವೈವಾಹಿಕ ಜೀವನ ಆನಂದದಿಂದ ಕೂಡಿರಲಿದೆ. ಇದು ನಿಮ್ಮ ಜೀವನದ ಮೇಲೆ ಸಕಾರಾತ್ಮಕ ಪ್ರಭಾವವನ್ನುಂಟು ಮಾಡಲಿದೆ. ಕುಟುಂಬ ಸದಸ್ಯರು ಎಲ್ಲಾ ವಿಧಗಳಲ್ಲಿ ನಿಮಗೆ ಸಹಾಯವನ್ನು ಮಾಡಲಿದ್ದಾರೆ. ಸಮಾಜದಲ್ಲಿ ನಿಮ್ಮ ಸಮ್ಮಾನ ಹೆಚ್ಚಾಗಲಿದೆ. ಇದಲ್ಲದೆ ಅವಿವಾಹಿತರಿಗೆ ವಿವಾಹ ಪ್ರಸ್ತಾವನೆ ಬರುವ ಎಲ್ಲ ಸಾಧ್ಯತೆಗಳಿವೆ. 

ಮಕರ ರಾಶಿ: ಮಾಲವ್ಯ ರಾಜಯೋಗದ ರಚನೆ ನಿಮ್ಮ ವೃತ್ತಿ ಹಾಗೂ ವ್ಯಾಪಾರದ ದೃಷ್ಟಿಕೊನದಿಂದ ಸಾಕಷ್ಟು ಲಾಭದಾಯಕವಾಗಿದೆ. ಏಕೆಂದರೆ ಶುಕ್ರ ಈ ಅವಧಿಯಲ್ಲಿ ನಿಮ್ಮ ಗೋಚರ ಜಾತಕದ ದಶಮ ಭಾವದಲ್ಲಿ ಸಂಚರಿಸಲಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ಕೆಲಸ ಕಾರ್ಯಗಳಲ್ಲಿ ಅಪಾರ ಯಶಸ್ಸು ಸಿಗಲಿದೆ. ಇನ್ನೊಂದೆಡೆ ಈ ಅವಧಿಯಲ್ಲಿ ನಿಮ್ಮ ಆದಾಯದ ಮೂಲಗಳು ಹೆಚ್ಚಾಗಲಿವೆ ಮತ್ತು ನಿಮಗೆ ಉತ್ತಮ ಆರ್ಥಿಕ ಲಾಭ ಉಂಟಾಗಲಿದೆ. ಕಾರ್ಯಕ್ಷೇತ್ರದಲ್ಲಿ ಉನ್ನತಿಯ ಯೋಗಗಳು ಕೂಡ ನಿರ್ಮಾಣಗೊಳ್ಳುತ್ತಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಭಾಗ್ಯ ಪ್ರಾಪ್ತಿಯಾಗುವ ಸಾಧ್ಯತೆ ಇದೆ. ನೌಕರ ವರ್ಗದ ಜನರಿಗೆ ಕಾರ್ಯಸ್ಥಳದಲ್ಲಿ ಹಿರಿಯರ-ಕಿರಿಯರ ಬೆಂಬಲ ಸಿಗಲಿದೆ.  

ಕುಂಭ ರಾಶಿ: ಮಾಲವ್ಯ ರಾಜಯೋಗದ ಅವಧಿಯಲ್ಲಿ ಶುಕ್ರ ನಿಮ್ಮ ಗೋಚರ  ಜಾತಕದ ನವಮ ಭಾವದಲ್ಲಿ ಸಂಚರಿಸಲಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ನಿಮ್ಮ ಭಾಗ್ಯದ ಸಂಪೂರ್ಣ ಬೆಂಬಲ ಸಿಗಲಿದೆ. ಈ ಅವಧಿಯಲ್ಲಿ ಸಣ್ಣಪುಟ್ಟ ಯಾತ್ರೆಗಳು ಸಂಭವಿಸುವ ಸಾಧ್ಯತೆ ಇದೆ. ಅವುಗಳಿಂದ ನಿಮಗೆ ಸಾಕಷ್ಟು ಲಾಭ ಸಿಗಲಿದೆ. ನೌಕರಿಯಲ್ಲಿ ಮನಸ್ಸಿಗೆ ಮುದ ನೀಡುವ ಫಲಿತಾಂಶಗಳು ಸಿಗಳಿವೆ. ವ್ಯಾಪಾರದಲ್ಲಿ ದೊಡ್ಡ ಮಟ್ಟದಲ್ಲಿ ಹಣ ಬಂದು ನಿಮ್ಮ ಕೈಸೇರುವುದರಿಂದ ನಿಮಗೆ ಸಂತೋಷ ಸಿಗಲಿದೆ. ವೈವಾಹಿಕ ಜೀವನ ಪ್ರೇಮ ಸಂಬಂಧಗಳಲ್ಲಿ ಸುಮಧುರತೆ ಇರಲಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಈ ಸಮಯ ಅತ್ಯಂತ ಅದ್ಭುತವಾಗಿರಲಿದೆ.  

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)   

ZEENEWS TRENDING STORIES

By continuing to use the site, you agree to the use of cookies. You can find out more by Tapping this link