Malavya Rajyog: ಶೀಘ್ರದಲ್ಲೇ ಶುಕ್ರನ ಕೃಪೆಯಿಂದ ಮಾಲವ್ಯ ರಾಜಯೋಗ ರಚನೆ, ಈ ಜನರ ಮನೆಗೆ ಸಾಕ್ಷಾತ್ ಲಕ್ಷ್ಮಿ ಪ್ರವೇಶ!
ಮಿಥುನ ರಾಶಿ: ನಿಮ್ಮ ಪಾಲಿಗೆ ಮಾಲವ್ಯ ರಾಜಯೋಗ ಸಾಕಷ್ಟು ಲಾಭದಾಯಕವಾಗಿದೆ. ಇದು ನಿಮ್ಮ ಜಾತಕದ ಕರ್ಮ ಭಾವದಲ್ಲಿ ರೂಪುಗೊಳ್ಳುತ್ತಿದೆ. ಶುಕ್ರ ನಿಮ್ಮ ಜಾತಕದ ಐದನೇ ಮನೆಗೆ ಅಧಿಪತಿಯಾಗಿದ್ದಾನೆ. ಹೀಗಾಗಿ ಒಂದು ವೇಳೆ ನೀವು ಕಲೆ, ಸಂಗೀತ, ಚಿತ್ರೋದ್ಯಮಕ್ಕೆ, ನಟನಾ ವೃತ್ತಿಗೆ ಸಂಬಂಧಿಸಿದ್ದರೆ, ನಿಮಗೆ ಉತ್ತಮ ಲಾಭವಾಗಲಿದೆ
ಮಿಥುನ ರಾಶಿಯ ಜನರ ವೃತ್ತಿ ವ್ಯಾಪಾರದ ಕುರಿತು ಹೇಳುವುದಾದರೆ, ವೃತ್ತಿ ವ್ಯಾಪಾರ ಹೊಳೆಯಲಿದ್ದು, ನೌಕರ ವರ್ಗದ ಜನರಿಗೆ ಕಾರ್ಯಸ್ಥಳದಲ್ಲಿ ಹೊಸ ಜವಾಬ್ದಾರಿ ಸಿಗಲಿದೆ. ಇದರ ಜೊತೆಗೆ ಪ್ರಮೋಷನ್, ಇಂಕ್ರಿಮೆಂಟ್ ಸಿಗಲಿದೆ. ವ್ಯಾಪಾರಿಗಳಿಗೆ ಈ ಅವಧಿಯಲ್ಲಿ ಉತ್ತಮ ಧನಲಾಭವಾಗಲಿದೆ.
ಕನ್ಯಾ ರಾಶಿ: ಮಾಲವ್ಯ ರಾಜಯೋಗ ನಿಮ್ಮ ಪಾಲಿಗೆ ಸಾಕಷ್ಟು ಅನುಕೂಲಕರ ಸಾಬೀತಾಗಲಿದೆ. ಏಕೆಂದರೆ ಈ ಯೋಗ ನಿಮ್ಮ ಜಾತಕದ ಏಳನೇ ಮನೆಯಲ್ಲಿ ರಚನೆಯಾಗಲಿದೆ. ಶುಕ್ರ ನಿಮ್ಮ ಜಾತಕದ ಧನ ಹಾಗೂ ಭಾಗ್ಯ ಸ್ಥಾನಕ್ಕೆ ಅಧಿಪತಿಯಾಗಿದ್ದಾನೆ. ಇದರಿಂದ ನಿಮಗೆ ಭಾಗ್ಯದ ಸಂಪೂರ್ಣ ಬೆಂಬಲ ಸಿಗಲಿದೆ.
ಕನ್ಯಾ ರಾಶಿಯ ಜನರಿಗೆ ಈ ಯೋಗ ರಚನೆಯ ಅವಧಿಯಲ್ಲಿ ಬಾಳಸಂಗಾತಿಯ ಸಂಪೂರ್ಣ ಬೆಂಬಲ ಸಿಡಲಿದೆ. ದಾಂಪತ್ಯ ಜೀವನ ಸಾಕಷ್ಟು ಖುಷಿಗಳಿಂದ ಕೂಡಿರಲಿದೆ. ಇದರ ಜೊತೆಗೆ ಕಾಲಕಾಲಕ್ಕೆ ನಿಮಗೆ ಧನಲಾಭ ಉಂಟಾಗಲಿದೆ. ಪಾರ್ಟ್ನರ್ಶಿಪ್ ನಲ್ಲಿ ವ್ಯಾಪಾರ ಮಾಡುವ ಜನರಿಗೆ ಅತ್ಯುತ್ತಮ ಲಾಭ ಸಿಗಲಿದೆ.
ಧನು ರಾಶಿ: ನಿಮ್ಮ ಪಾಲಿಗೆ ಮಾಲವ್ಯ ರಾಜಯೋಗ ಲಾಭದಾಯಕ ಸಾಬೀತಾಗಲಿದೆ. ಇದು ನಿಮ್ಮ ಜಾತಕದ ಚತುರ್ಥ ಭಾವದಲ್ಲಿ ರಚನೆಯಾಗುತ್ತಿದೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ಭೌತಿಕ ಸುಖಗಳು ಪ್ರಾಪ್ತಿಯಾಗಲಿವೆ. ಈ ಅವಧಿಯಲ್ಲಿ ನಿಮಗೆ ವಾಹನ, ಆಸ್ತಿಪಾಸ್ತಿ ಸುಖ ಪ್ರಾಪ್ತಿಯಾಗಲಿದೆ.
ಧನು ರಾಶಿಯ ಜನರ ಲವ್ ಲೈಫ್ ಕುರಿತು ಹೇಳುವುದಾದರೆ, ಲವ್ ಲೈಫ್ ಉತ್ತಮವಾಗಿರಲಿದೆ. ಈ ಅವಧಿಯಲ್ಲಿ ನೀವು ಸುತ್ತಾಡಲು ಪ್ಲಾನ್ ಮಾಡಬಹುದು, ಆತ್ಮವಿಶ್ವಾಸ ಹೆಚ್ಚಾಗಲಿದ್ದು, ತಾಯಿಯ ಜೊತೆಗೆ ವಾಗ್ವಾದ ನಡೆಸದೆ ಇರುವುದು ಉತ್ತಮ (malavya rajyog forming in meen rashi will be giving lot of propserity to these zodiac signs astrology).