Malavya Yoga 2024: ಮಾಲವ್ಯ ಯೋಗದಿಂದ ಈ 3 ರಾಶಿಯವರಿಗೆ ಹಣ & ಅದೃಷ್ಟ ಪ್ರಾಪ್ತಿಯಾಗಲಿದೆ!
)
ಈ ಅವಧಿಯಲ್ಲಿ ಶುಕ್ರನು ತುಲಾ ರಾಶಿಯ ೭ನೇ ಮನೆಗೆ ಪ್ರವೇಶಿಸುತ್ತಾನೆ. ಮೇಷ ರಾಶಿಯವರ ಈ ಮನೆಯಲ್ಲಿ ಮಾಲವ್ಯ ಯೋಗವು ರೂಪುಗೊಳ್ಳುತ್ತದೆ. ಮೇಷ ರಾಶಿಯವರಿಗೆ ಕೆಲಸದಲ್ಲಿ ಅಪಾರ ಲಾಭಗಳು ಸಿಗುತ್ತವೆ. ವ್ಯಾಪಾರಿಗಳು ವಿವಿಧ ರೀತಿಯ ಲಾಭವನ್ನು ನಿರೀಕ್ಷಿಸಬಹುದು. ಈ ರಾಶಿಯವರು ಕೆಲಸದಲ್ಲಿ ತಮ್ಮ ಮೇಲಧಿಕಾರಿಗಳಿಂದ ಮೆಚ್ಚುಗೆ ಪಡೆಯುತ್ತಾರೆ. ಬಡ್ತಿ ಮತ್ತು ಸಂಬಳ ಹೆಚ್ಚಳ ಸಾಧ್ಯತೆಯಿದೆ. ಹೊಸ ಉದ್ಯೋಗ ಹುಡುಕುತ್ತಿರುವ ಮೇಷ ರಾಶಿಯ ಸ್ಥಳೀಯರು ಈ ಸಂಚಾರದಿಂದ ಯಶಸ್ಸು ಪಡೆಯುತ್ತಾರೆ. ವಾಹನ ಖರೀದಿ ಅಥವಾ ಪೂರ್ವಜರ ಆಸ್ತಿಯಿಂದ ಪ್ರಯೋಜನ ಪಡೆಯುತ್ತಾರೆ. ಈ ಅವಧಿಯಲ್ಲಿ ಅವರು ತಮ್ಮ ಆರೋಗ್ಯದ ಬಗ್ಗೆ ಚಿಂತಿಸಬೇಕಾಗಿಲ್ಲ. ವೈವಾಹಿಕ ಜೀವನ ಪ್ರೀತಿ, ಶಾಂತಿ ಮತ್ತು ಸಂತೋಷದಿಂದ ತುಂಬಿರುತ್ತದೆ.
)
ತುಲಾ ರಾಶಿಯವರ ಲಗ್ನ ಮನೆಯಲ್ಲಿ ಮಾಲವ್ಯ ಯೋಗ ರೂಪಗೊಳ್ಳುತ್ತದೆ. ಶುಕ್ರನು ತನ್ನದೇಯಾದ ರಾಶಿಯಲ್ಲಿ ಸಾಗಿದಾಗ ಅದರ ಬಲವು ಅನೇಕ ಪಟ್ಟು ಹೆಚ್ಚಾಗಲಿದೆ. ಹೀಗಾಗಿ ತುಲಾ ರಾಶಿಯವರು ಈ ಅವಧಿಯಲ್ಲಿ ಉತ್ತಮ ಫಲಿತಾಂಶ ಪಡೆಯುವ ಸಾಧ್ಯತೆಯಿದೆ. ತುಲಾ ರಾಶಿಯವರು ಎಲ್ಲಾ ಹಣಕಾಸಿನ ಸಮಸ್ಯೆಗಳಿಗೆ ತ್ವರಿತ ಪರಿಹಾರ ಪಡೆಯಬಹುದು. ಈ ಯೋಗದಿಂದ ತುಲಾ ರಾಶಿಯವರಿಗೆ ಆರ್ಥಿಕ ಸ್ಥಿತಿ ಬಲಗೊಳ್ಳುವುದಲ್ಲದೆ ಆದಾಯವೂ ವೃದ್ಧಿಯಾಗಲಿದೆ. ಪದಾಧಿಕಾರಿಗಳಿಗೆ ಬಡ್ತಿ ಸಿಗುವ ಸಾಧ್ಯತೆಯಿದೆ. ತುಲಾ ರಾಶಿಯವರಿಗೆ ಹಣ ಹೂಡಿಕೆ ಮಾಡಲು ಮತ್ತು ಹೆಚ್ಚಿನ ಆದಾಯ ನಿರೀಕ್ಷಿಸಲು ಇದು ಶುಭ ಸಮಯ. ನಿಮ್ಮ ಪ್ರೇಮ ಜೀವನದಲ್ಲಿ ಸಂತೋಷ ಮತ್ತು ಪ್ರೀತಿ ಇರುತ್ತದೆ. ಪತಿ-ಪತ್ನಿಯರ ನಡುವೆ ಒಗ್ಗಟ್ಟು ಸಹ ಹೆಚ್ಚಾಗಲಿದೆ.
ಶುಕ್ರ ಗ್ರಹವು ಧನು ರಾಶಿಯ 11ನೇ ಮನೆಯಲ್ಲಿ ಚಲಿಸುತ್ತದೆ. ಮಾಲವ್ಯ ಯೋಗ ಧನು ರಾಶಿಯವರಿಗೆ ಅನೇಕ ಪ್ರಯೋಜನ ನೀಡುತ್ತದೆ. ಈ ಅವಧಿಯಲ್ಲಿ ಧನು ರಾಶಿಯವರು ಅಪಾರ ಸಂಪತ್ತು ಪಡೆಯುತ್ತಾರೆ. ಇದು ಕುಟುಂಬ ಜೀವನಕ್ಕೆ ಅನುಕೂಲಕರ ಅವಧಿಯಾಗಿರುತ್ತದೆ. ನೀವು ಕುಟುಂಬ ಸದಸ್ಯರೊಂದಿಗೆ ಸಂತೋಷವಾಗಿ ಸಮಯ ಕಳೆಯುವ ಅವಕಾಶ ಸಿಗಲಿದೆ. ಉದ್ಯೋಗಿಗಳು ತಮ್ಮ ಮೇಲಧಿಕಾರಿಗಳನ್ನು ಮೆಚ್ಚಿಸಬಹುದು. ಬಡ್ತಿ ಏರಿಕೆಯೊಂದಿಗೆ ಭರ್ಜರಿ ಲಾಭ ಪಡೆಯಬಹುದು. ಏಕಾಂಗಿಯಾಗಿರುವವರಿಗೆ ಮಾಲವ್ಯ ಯೋಗವು ವಿವಾಹದ ಅವಕಾಶ ನೀಡುತ್ತದೆ. ವೈವಾಹಿಕ ಜೀವನದಲ್ಲಿ ಶಾಂತಿ-ಸಂತೋಷ ಸಿಗಲಿದೆ.