ಕೊನೆಗೂ ಮಾದಪ್ಪನ ಭಕ್ತರಿಗೆ 4 ಹೊಸ ಬಸ್... ಭಕ್ತರ ಜೀವದೊಟ್ಟಿಗೆ ಚೆಲ್ಲಾಟ ಆಡುತ್ತಿದ್ದ ಪ್ರಾಧಿಕಾರ!!
ಚಾಮರಾಜನಗರ: ರಾಜ್ಯದ ಪ್ರಮುಖ ಯಾತ್ರಸ್ಥಳವಾದ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಪ್ರಾಧಿಕಾರವು ಎಚ್ಚೆತ್ತು ಇಂದು ನೂತನ 4 ಬಸ್ ಗಳಿಗೆ ಚಾಲನೆ ಕೊಟ್ಟಿದೆ.
ಕ್ಷೇತ್ರದ ಆವರಣದಲ್ಲಿ ಇಂದು ನೂತನ 4 ಬಸ್ ಗಳಿಗೆ ಸಾಲೂರು ಮಠದ ಶ್ರೀಗಳು ಹಸಿರು ನಿಶಾನೆ ತೋರುವ ಮೂಲಕ ಬಸ್ ಗಳನ್ನು ಭಕ್ತರ ಸೇವೆಗೆ ಲೋಕಾರ್ಪಣೆ ಮಾಡಿದ್ದಾರೆ.
ಶ್ರೀ ಮಲೆಮಹದೇಶ್ಚರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರವು ತಮಿಳುನಾಡಿನಲ್ಲಿ ಬಸ್ ಚಾಸಿಯನ್ನು ನಿರ್ಮಾಣ ಮಾಡಿ ಇಂದು ಅವುಗಳನ್ನು ತಂದು ಭಕ್ತರ ಸೇವೆಗೆ ಮುಕ್ತಗೊಳಿಸಿದ್ದು ಬೆಂಗಳೂರು, ಚಾಮರಾಜನಗರ ಮಾರ್ಗದಲ್ಲಿನ ಭಕ್ತರನ್ನು ಈ ಬಸ್ ಗಳು ಕರೆತರಲಿವೆ.
ಭಕ್ತರ ಪ್ರಾಣದ ಜೊತೆ ಚೆಲ್ಲಾಟದ ವರದಿ ಬಿತ್ತರಿಸಿದ್ದ ಜೀ ಕನ್ನಡ ನ್ಯೂಸ್ ಸಮರ್ಪಕ ನಿರ್ವಹಣೆ ಇಲ್ಲದ, ಟೈರ್ ಗಳು ಸವೆದು ಹೋಗಿರುವ ಬಸ್ ಗಳನ್ಜು ಓಡಿಸುವ ಮೂಲಕ ಮಾದಪ್ಪನ ಭಕ್ತರ ಜೊತೆ ಪ್ರಾಧಿಕಾರ ಚೆಲ್ಲಾಟ ಆಡುತ್ತಿದ್ದರ ಕುರಿತು ಕಳೆದ ಜೂ. 24 ರಂದು ಜೀ ಕನ್ನಡ ನ್ಯೂಸ್ ವಿಸ್ತ್ರತ ವರದಿ ಬಿತ್ತರಿಸಿತ್ತು.
ಹೊಸ ಬಸ್ ಖರೀದಿ ಮಾಡಿ 4-5 ತಿಂಗಳಾದರೂ ಸೇವೆಗೆ ನೀಡದೇ ಡಕೋಟಾ ಬಸ್ ಗಳನ್ನೇ ಓಡಿಸುತ್ತಿದ್ದರ ಸಂಬಂಧ ಜೀ ಕನ್ನಡ ನ್ಯೂಸ್ ವರದಿ ಬಿತ್ತರಿಸಿ ಗಮನ ಸೆಳೆದಿತ್ತು. ಇದರಿಂದ ಎಚ್ಚೆತ್ತ ಪ್ರಾಧಿಕಾರ ಈಗ ಹೊಸ 4 ಬಸ್ ಗಳನ್ನು ಮಾದಪ್ಪನ ಸೇವೆಗೆ ಬಿಟ್ಟಿದೆ.