43ನೇ ವಯಸ್ಸಿನಲ್ಲೂ ಯಂಗ್ ಆಗಿ ಕಾಣುವ ಮಲ್ಲಿಕಾ FITNESS ಗುಟ್ಟು
43 ವರ್ಷದ ನಟಿ, "ನಾನು ಕಳೆದ ಐದಾರು ವರ್ಷಗಳಿಂದ ಅಯ್ಯಂಗಾರ್ ಯೋಗವನ್ನು ಅಭ್ಯಾಸ ಮಾಡುತ್ತಿದ್ದೇನೆ. ಇದು ನನಗೆ ಬಹಳ ಸಂತಸ ತಂದಿದೆ. ಏಕೆಂದರೆ ಇದು ಶರೀರದ ಜೋಡಣೆ(Alignment)ಗೆ ಸಹಕಾರಿಯಾಗಿದೆ. ಅಷ್ಟೇ ಅಲ್ಲ ಇದು ನಿಮ್ಮ ಮಾನಸಿಕ ಆರೋಗ್ಯಕ್ಕೂ ಒಳ್ಳೆಯದು. ಇದು ಒಂದು ಒಂದು ರೀತಿಯ ಧ್ಯಾನ, ಇದು ಒತ್ತಡವನ್ನು ನಿವಾರಿಸುತ್ತದೆ ಮತ್ತು ದೇಹದಲ್ಲಿ ಸಕಾರಾತ್ಮಕ ಶಕ್ತಿಯನ್ನು ನೀಡುತ್ತದೆ. ಅಯ್ಯಂಗಾರ್ ಯೋಗ ಮಾಡಲು ಇದು ಮುಖ್ಯ ಕಾರಣವಾಗಿದೆ" ಎಂದು ತಿಳಿಸಿದ್ದಾರೆ.
ಅಯ್ಯಂಗಾರ್ ಯೋಗದ ಪ್ರಯೋಜನಗಳ ಬಗ್ಗೆ ವಿವರಿಸಿರುವ ಮಲ್ಲಿಕಾ, "ನಾನು ಸಮಾಧಾನದಿಂದಿದ್ದೇನೆ, ಅದು ನಿಮ್ಮನ್ನು ಮಾನಸಿಕವಾಗಿ ಸಬಲಗೊಳಿಸುತ್ತದೆ. ನೀವು ಏನು ಬೇಕಾದರೂ ಎದುರಿಸಬಹುದು. ನಾನು ಆಗಾಗ್ಗೆ ಪ್ರಯಾಣಿಸುತ್ತೇನೆ ಮತ್ತು ನಾನು ದೂರದ ಪ್ರಯಾಣಗಳನ್ನು ಇಷ್ಟಪಡುತ್ತೇನೆ. ಆ ವೇಳೆ ನಾನು ಹತ್ತು ಗಂಟೆಗಳ ಸುದೀರ್ಘ ಹಾರಾಟವನ್ನು ತೆಗೆದುಕೊಳ್ಳುವಾಗಲೆಲ್ಲಾ ನಾನು ತುಂಬಾ ಅಸಮಾಧಾನಗೊಳ್ಳುತ್ತೇನೆ, ಆದರೆ ಅಯ್ಯಂಗಾರ್ ಯೋಗ ನನಗೆ ಇದರಲ್ಲಿ ಸಹಾಯ ಮಾಡಿದೆ ಎಂದು ನಾನು ಅರಿತುಕೊಂಡೆ " ಎಂದು ತಿಳಿಸಿದ್ದಾರೆ.
ಅಯ್ಯಂಗಾರ್ ಯೋಗ, "ನನ್ನ ತಿನ್ನಬೇಕೆಂಬ ತೀವ್ರ ಆಸೆಯನ್ನು ನಿಗ್ರಹಿಸಲು ಸಹ ಸಹಾಯ ಮಾಡಿದೆ. ನಾನು ಸಿಹಿ ತುಂಬಾ ಇಷ್ಟಪಡುತ್ತಿದ್ದೆ. ಆದರೆ ನಾನು ಅಯ್ಯಂಗಾರ್ ಯೋಗವನ್ನು ಪ್ರಾರಂಭಿಸಿದಾಗಿನಿಂದ, ಅದನ್ನು ತಿನ್ನುವ ಬಯಕೆ ಕೂಡ ದೂರವಾಗಿದೆ. ಅಷ್ಟೇ ಅಲ್ಲ ಈ ಯೋಗದ ಅಭ್ಯಾಸದಿಂದಾಗಿ ನನ್ನ ನಿದ್ರೆಯಲ್ಲಿಯೂ ಬದಲಾವಣೆ ಆಗಿದೆ. ನಾನು ಕಣ್ತುಂಬ ನಿದ್ರೆ ಮಾಡುತ್ತೇನೆ. ಈ ಸಣ್ಣ ವಿಷಯಗಳು ನನ್ನ ದೈನಂದಿನ ಜೀವನದಲ್ಲಿ ಸಾಕಷ್ಟು ಸಹಾಯ ಮಾಡಿವೆ" ಎಂದು ಮಲ್ಲಿಕಾ ಫಿಟ್ನೆಸ್ ಮಂತ್ರವನ್ನು ತಿಳಿಸಿದ್ದಾರೆ.
ತನ್ನ ಆಹಾರದ ಬಗ್ಗೆ ಮಾತನಾಡುತ್ತಾ, "ನಾನು ಕಳೆದ ಹತ್ತು ವರ್ಷಗಳಿಂದ ನಾನು ಸಸ್ಯಾಹಾರಿ ಆಗಿದ್ದೇನೆ. ನಾನು ಡೈರಿ ಉತ್ಪನ್ನಗಳನ್ನು ಸಹ ಬಳಸುವುದಿಲ್ಲ. ನನ್ನ ಆಹಾರ ಶೈಲಿಯು ತುಂಬಾ ಸರಳವಾಗಿದೆ, ಹೆಚ್ಚಾಗಿ ನಾನು 'ಮನೆಯಲ್ಲಿ ತಯಾರಿಸಿದ ಆಹಾರ' ತಿನ್ನುತ್ತೇನೆ. ಇದು ಅತ್ಯಂತ ಆರೋಗ್ಯಕರ ವಿಷಯ ಎಂದು ನಾನು ಭಾವಿಸುತ್ತೇನೆ. ನಮ್ಮ ಅಜ್ಜಿ ಅಥವಾ ಹಿರಿಯರು ಸಾಕಷ್ಟು ಪೌಷ್ಠಿಕಾಂಶಯುಕ್ತ ಆಹಾರ ಪದ್ಧತಿ ಮೈಗೂಡಿಸಿಕೊಂಡಿದ್ದರು. ಇತ್ತೀಚಿನ ದಿನಗಳಲ್ಲಿ ನಾವೆಲ್ಲರೂ ಫಾಸ್ಟ್ ಫುಡ್ ಇಷ್ಟಪಡುತ್ತೇವೆ. ಅಲ್ಲದೆ ಆಹಾರ ಪದಾರ್ಥಗಳು ಮಾಲಿನ್ಯಯುಕ್ತ ಮತ್ತು ಕೀಟನಾಶಕವಾಗಿದೆ, ಆಹಾರದ ಗುಣಮಟ್ಟವೂ ಕಡಿಮೆಯಾಗಿದೆ, ಆದ್ದರಿಂದ ನಾವು ತಿನ್ನುವ ವಿಷಯದಲ್ಲಿ ಜಾಗರೂಕರಾಗಿರಬೇಕು" ಎಂದವರು ಸಲಹೆ ನೀಡಿದ್ದಾರೆ.
ಕೊನೆಯಲ್ಲಿ, ಆರೋಗ್ಯಕರ ದೇಹ ಮತ್ತು ಮನಸ್ಸಿಗೆ ವ್ಯಾಯಾಮ ಬಹಳ ಮುಖ್ಯ ಎಂದು ಮಲ್ಲಿಕಾ ತಮ್ಮ ಅಭಿಮಾನಿಗಳಿಗೆ ತಿಳಿಸಿದರು. ನೀವು ಅದನ್ನು ಯಾವಾಗ ಬೇಕಾದರೂ ಪ್ರಾರಂಭಿಸಬಹುದು. ನಾಳೆಯಿಂದ ಇದನ್ನು ಮಾಡಲು ನೀವು ಯೋಚಿಸುತ್ತಿದ್ದರೆ, ಇಂದೇ ಅದನ್ನು ಮಾಡಲು ಪ್ರಾರಂಭಿಸಿ. (ಫೋಟೊ ಕೃಪೆ: ಎಲ್ಲಾ ಫೋಟೋಗಳನ್ನು ಮಲ್ಲಿಕಾ ಶೆರಾವತ್ ಅವರ ಇನ್‌ಸ್ಟಾಗ್ರಾಮ್ ಖಾತೆಯಿಂದ ತೆಗೆದುಕೊಳ್ಳಲಾಗಿದೆ)