ಸಿನಿಮಾ ಇಂಡಸ್ಟರಿಯನ್ನೆ ಶೇಕ್ ಮಾಡಿದ್ದ ಸುಂದರಿ..47 ವರ್ಷ ವಯಸ್ಸಾದರೂ ಒಂಟಿಯಾಗಿ ಉಳಿದ ನಟಿ! ಅಷ್ಟಕ್ಕೂ ಈಕೆ ವೈಟ್ ಮಾಡ್ತಿರೋದು ಎಂತಹ ಹುಡುಗನಿಗಾಗಿ ಗೊತ್ತಾ..?
'ಮರ್ಡರ್' ಸಿನಿಮಾ ಮೂಲಕ ಬಾಲಿವುಡ್ ಗೆ ಪದಾರ್ಪಣೆ ಮಾಡಿ 2004ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ಇಮ್ರಾನ್ ಹಶ್ಮಿ ನಟಿಸಿ ಸೈ ಎನಿಸಿಕೊಂಡ ನಟಿ ಮಲ್ಲಿಕಾ ಶೆರಾವತ್.
ತಮ್ಮ ಚೊಚ್ಚಲ ಸಿನಿಮಾದಲ್ಲೇ ಖ್ಯಾತಿ ಗಳಿಸಿದ ಈಕೆ 47ರ ಹರೆಯದಲ್ಲೂ ಒಂಟಿಯಾಗಿದ್ದು ಈ ಬಗ್ಗೆ ಬಹಳ ಮುಕ್ತವಾಗಿ ಮಾತನಾಡಿದ್ದಾರೆ.
ಇತ್ತೀಚೆಗಷ್ಟೇ ಯೂಟ್ಯೂಬ್ ಚಾನೆಲ್ ಒಂದಕ್ಕೆ ಸಂದರ್ಶನ ನೀಡಿದ್ದ ಮಲ್ಲಿಕಾ ಶೆರಾವತ್, "ನಾನು ಹೆಚ್ಚು ಗಮನ ಸೆಳೆಯುತ್ತೇನೆ, ಅದೆಂದರೆ ನನಗೆ ತುಂಬಾ ಇಷ್ಟ" ಎಂದಿದ್ದಾರೆ.
ಮದುವೆ ಬಗ್ಗೆಯೂ ಮುಕ್ತವಾಗಿ ಮಾತನಾಡಿದ ಮಲ್ಲಿಕಾ ಶೆರಾವತ್, ಎಲ್ಲಾದರೂ ಹೋಗಬೇಕೆನಿಸಿದರೆ "ಸೂಟ್‌ಕೇಸ್ ಪ್ಯಾಕ್ ಮಾಡಿ ಹೊರಡುತ್ತೇನೆ". ನಾನು ನನ್ನ ಸಿಂಗಲ್ ಸ್ಟೇಟಸ್ ಅನ್ನು ಆನಂದಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.
47ರ ಹರೆಯದಲ್ಲೂ ಒಂಟಿಯಾಗಿರುವ ಬಗ್ಗೆ ಪ್ರತಿಕ್ರಿಯಿಸುತ್ತಾ, ನಾನು ಬಹುಶಃ ತುಂಬಾ ನಿರೀಕ್ಷಿಸುತ್ತಿದ್ದೇನೆ. ನಾವು ಯಾರಿಗಾದರೂ ಸಮಯ, ಭಾವನೆಗಳನ್ನೂ ಹೂಡಿಕೆ ಮಾಡುತ್ತೇವೆ ಎಂದರೆ ಆ ವ್ಯಕ್ತಿ (ಸಂಗಾತಿ) ಅದಕ್ಕೆ ಅರ್ಹರಾಗಿರಬೇಕು. ಕಳೆದ ಕೆಲವು ವರ್ಷಗಳಿಂದ ಅಂತಹ ವ್ಯಕ್ತಿಗಾಗಿ ಕಾಯುತ್ತಿದ್ದೇನೆ ಎಂದು ಮಲ್ಲಿಕಾ ಶೆರಾವತ್ ಹೇಳಿದ್ದಾರೆ.