ಮಲ್ಲಿಕಾ ಶೆರಾವತ್ ರೂಂಗೆ ಎಂಟ್ರಿ ಕೊಟ್ಟಿದ್ದ ಆ ಸ್ಟಾರ್ ನಟ ಮಾಡಿದ್ದೇನು ಗೊತ್ತಾ? ನಟಿಯಿಂದಲೇ ಬಯಲಾಯ್ತು ಆ ರಾತ್ರಿಯ ಕರಾಳ ಸತ್ಯ!
Mallika Sherawat: ಮಾದಕ ನಟಿ ಮಲ್ಲಿಕಾ ಶೆರಾವತ್ ತಮ್ಮ ಅಂದ ಹಾಗೂ ತಮ್ಮ ಮೈಮಾಟದಿಂದ ಸಿನಿಮಾ ಇಂಡಸ್ಟ್ರಿಯಲ್ಲಿ ಬಿರುಗಾಳಿ ಎಬ್ಬಿಸಿದ್ದ ನಟಿ, ನಟಿ ಸಡನ್ ಆಗಿ ಸಿನಿಮಾ ರಂಗವನ್ನು ತ್ಯಜಿಸಿದ್ದರು, ಆದರೆ ಇದೀಗ ನಟಿ ಶಾಕಿಂಗ್ ಸತ್ಯ ಒಂದನ್ನು ಬಿಚ್ಚಿಟ್ಟಿದ್ದಾರೆ.
ಮರ್ಡರ್ ಸಿನಿಮಾದಲ್ಲಿ ತಮ್ಮ ನಟನೆಯಿಂದ ಹುಡುಗರ ಬೆವರಿಳಿಸಿದ್ದ ನಟಿ ತಮ್ಮ ಬೋಲ್ಡ್ ಪಾತ್ರಗಳ ಮೂಲಕ ಹುಡುಗರನ್ನು ಹುಚ್ಚೆಬ್ಬಿಸಿದ್ದರು. ಸಖತ್ ಹಾಟ್ ಪಾತ್ರದಲ್ಲಿ ಬಣ್ಣ ಹಚ್ಚುತ್ತಿದ್ದ ನಟಿ ಸಡನ್ ಆಗಿ ಸಿನಿಮಾದಿಂದ ದೂರವಾಗಿದ್ದರು.
ನಟಿ ಸಿನಿಮಾಗಳಿಂದ ದೂರವಾದುದ್ದನ್ನು ಕಂಡು ಫ್ಯಾನ್ಸ್ ಬೇಸರಗೊಂಡಿದ್ದರು. ಆದರೆ ನಡಿ ಇದೀಗ ಸಿನಿಮಾ ರಂಗದ ಕುರಿತು ಶಾಕಿಂಗ್ ಸತ್ಯವನ್ನು ಬಚ್ಚಿಟ್ಟಿದ್ದಾರೆ.
ನಟಿ ಮಲ್ಲಿಕಾ ಶೆರಾವತ್ ನಟಿಸಿರುವ ವಿಕ್ಕಿ ವಿದ್ಯಾ ಕಾ ವೋ ವಾಲಾ ಸಿನಿಮಾ ತೆರೆ ಕಾನಲು ಸಜ್ಜಾಗುತ್ತಿದೆ, ಈ ಸಿನಿಮಾದ ಕುರಿತಾದ ಸಂದರ್ಶನವೊಂದರಲ್ಲಿ ಮಾತನಾಡಿದ ನಟಿ, ಸಿನಿಮಾದ ಶೂಟಿಂಗ್‌ನ ವೇಳೆ ತನಗಾದ ಕರಾಳ ಘಟನೆಯ ಕುರಿತು ಶಾಕಿಂಗ್ ಸತ್ಯವೊಂದನ್ನು ಬಿಚ್ಚಿಟ್ಟಿದ್ದಾರೆ.
ಸಿನಿಮಾ ಶೂಟಿಂಗ್ ಸಮಯದಲ್ಲಿ ತನ್ನ ಚಿತ್ರದಲ್ಲಿ ನಟಿಸಿದ್ದ ಸಹನಟನೊಬ್ಬ ತನಗೆ ಕೊಟ್ಟ ಚಿತ್ರಹಿಂಸೆಯ ಕುರಿತು ನಟಿ ಮನಬಿಚ್ಚಿ ಮಾತನಾಡಿ ಸಂದರ್ಶನದಲ್ಲಿ ತಮ್ಮ ನೋವು ತೋಡಿಕೊಂಡಿದ್ದಾರೆ.
ದುಬೈನಲ್ಲಿ ನನ್ನ ಸಿನಿಮಾದ ಶೂಟಿಂಗ್ ನಡೆಯುತ್ತಿತ್ತು, ಆ ಸಿನಿಮಾದಲ್ಲಿ ನನ್ನದೊಂದು ಕಾಮಿಡಿ ಪಾತ್ರ, ಸಿನಿಮಾ ಹಿಟ್ ಆಗಿತ್ತು, ಪ್ರೇಕ್ಷಕರು ಕೂಡ ಸಿನಿಮಾವನ್ನು ಸಿಕ್ಕಾಪಟ್ಟೆ ಇಷ್ಟ ಪಟ್ಟಿದ್ದರು. ಆದರೆ ಈ ಸಿನಿಮಾದ ವೇಳೆ ನಡೆದ ಘಟನೆಯೊಂದು ನನಗೆ ತುಂಬಾ ಕೆಟ್ಟ ನೆನಪು ಎಂದು ಹೇಳಿದ್ದಾರೆ.
ಸಿನಿಮಾದ ನಾಯಕ ರಾತ್ರಿ 12 ಗಂಟೆಯಲ್ಲಿ ನಟಿಯ ಕೋಣೆಯ ಬಾಗಿಲು ಬಡಿಯುತ್ತಿದ್ದರಂತೆ, ನಟಿ ಆ ನಟನ ಹೆಸರನ್ನು ಹೇಳಲು ಬಯಸಿಲ್ಲವಾದರೂ, ಆ ನಟ ಬಲವಂತವಾಗಿ ಬಾಗಿಲನ್ನು ನಡಿದು ನಟಿಯ ಕೋಣೆಯೊಳಗೆ ಹೋಗಲು ಪ್ರಯತ್ನಿಸಿದ್ದರಂತೆ, ನಂತರ ನಟಿ ನಾನು ಆ ರೀತಿಯ ಹೆಣ್ಣಲ್ಲ ಎಂದು ಆತನ ಬಯಕೆಯನ್ನು ನಿರಾಕರಿಸಿದ್ದಕ್ಕೆ ಆ ನಟ ಮಲ್ಲಿಕಾ ಅವರೊಂದಿಗೆ ಸಿನಿಮಾವನ್ನು ಮಾಡಲೆ ಇಲ್ಲವಂತೆ, ಈ ಕುರಿತ ಕಹಿ ಘಟನೆಯನ್ನು ನಟಿ ಇದೀಗ ಬಿಚ್ಚಿಟ್ಟಿದ್ದಾರೆ.
ಎರಡು ವರ್ಷಗಳ ಕಾಲ ಸಿನಿಮಾಗಳಿಂದ ಸುದೀರ್ಘ ಬ್ರೇಕ್ ತೆಗೆದುಕೊಂಡಿದ್ದ ನಟಿ, ಇದೀಗ ವಿಕ್ಕಿ ವಿದ್ಯಾ ಕಾ ವೋ ವಾಲಾ ಸಿನಿಮಾದ ಮೂಲಕ ಇಂಡಸ್ಟ್ರಿಗೆ ರೀ ಎಂಟ್ರಿ ಕೊಟ್ಟಿದ್ದಾರೆ. ಈ ಸಂದರ್ಶನದ ವೇಳೆ ನಟಿ ನೀಡಿರುವ ಈ ಹೇಳಿಕೆ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ, ಸಾಮಾಜಿಕ ಜಾಲತಾಣದಲ್ಲಿ ಈ ಕುರಿತ ಚರ್ಚೆಗಳು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.