`ಸಾರಾ ನನ್ನ ಹೆಂಡತಿ`- ಸಚಿನ್ ತೆಂಡೂಲ್ಕರ್ ಮಗಳಿಗೆ ಮದ್ವೆ ಆಗಿದ್ಯಾ? ಪತ್ನಿ ಅಂತಿರೋ ʼಆʼ ವ್ಯಕ್ತಿ ಯಾರು?
ಕ್ರಿಕೆಟ್ ದೇವರು ಎಂದೇ ಖ್ಯಾತಿ ಪಡೆದ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಅಂದದಲ್ಲಿ ನಟಿಯರನ್ನೂ ಮೀರಿಸುತ್ತಾರೆ. ಇವರ ಅಂದಕ್ಕೆ ಎಂಥವರೂ ಮನಸೋಲದೆ ಇರಲಾರರು.
ಅಂದಹಾಗೆ ಸಾರಾ ಮತ್ತು ಕ್ರಿಕೆಟಿಗ ಶುಭ್ಮನ್ ಗಿಲ್ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿ ಹರಿದಾಡುತ್ತಿದೆ. ಈ ಮಧ್ಯೆ ಓರ್ವ ವ್ಯಕ್ತಿ ಸಾರಾ ನನ್ನ ಹೆಂಡತಿ ಎನ್ನುತ್ತಾ ರಾದ್ಧಾಂತ ಸೃಷ್ಟಿಸಿರುವ ವಿಚಾರ ಬೆಳಕಿಗೆ ಬಂದಿದೆ.
ಈ ಸುದ್ದಿ ಹಳೆಯದಾದರೂ ಸದ್ಯ ವೈರಲ್ ಆಗುತ್ತಿದೆ. ಪಶ್ಚಿಮ ಬಂಗಾಳದ 32 ವರ್ಷದ ನಿವಾಸಿ ಪದೇ ಪದೇ ಕರೆ ಮಾಡಿ ಸಾರಾಗೆ ಕಿರುಕುಳ ನೀಡುತ್ತಿದ್ದ. ಈ ಕಾರಣದಿಂದ ಆತನನ್ನು ಕೋಲ್ಕತ್ತಾದಲ್ಲಿ ಪೊಲೀಸರು ಬಂಧಿಸಿದ್ದರು. ಅಂದಹಾಗೆ ಆರೋಪಿಯ ಹೆಸರು ದೇವ್ ಕುಮಾರ್ ಮೈತಿ.
ಈತನಿಗೆ ಸಾರಾ ಎಂದರೆ ಎಲ್ಲಿಲ್ಲದ ಪ್ರೀತಿಯಂತೆ. ಅಷ್ಟೇ ಅಲ್ಲದೆ, ದಿನಕ್ಕೆ 20 ಸರಿ ಕರೆ ಮಾಡಿ ಸಾರಾ ತೆಂಡೂಲ್ಕರ್ʼಗೆ ಮದುವೆಗೆ ಒಪ್ಪಿಸುವಂತೆ ಹಿಂಸಿಸುತ್ತಿದ್ದ ಎಂದು ಹೇಳಲಾಗಿದೆ. ಕಡೆಗೆ ತೆಂಡೂಲ್ಕರ್ ಕುಟುಂಬ ಮುಂಬೈನ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ಆತನ ವಿರುದ್ಧ ದೂರು ದಾಖಲಿಸಿತ್ತು.
ಇನ್ನು ದೇವ್ ಕುಮಾರ್ ಮೈತಿಯನ್ನು ಬಂಧಿಸಿದ ಪೊಲೀಸರು ವಿಚಾರಣೆ ನಡೆಸಿದ್ದರು. ಈ ಸಂದರ್ಭದಲ್ಲಿ ಹೇಳಿಕೆ ನೀಡಿದ್ದು ಹೀಗೆ.
"ನಾನು ಸಾರಾಳನ್ನು ಪಂದ್ಯದ ಸಮಯದಲ್ಲಿ ಪೆವಿಲಿಯನ್‌ನಲ್ಲಿ ಕುಳಿತಿದ್ದನ್ನು ನೋಡಿದೆ. ಟಿವಿಯಲ್ಲಿ ನೋಡಿದ ತಕ್ಷಣ ಆಕೆಯ ಮೇಲೆ ಪ್ರೀತಿಯಾಗಿತ್ತು. ಅದೇ ಕಾರಣದಿಂದ ನಾನು ಅವಳನ್ನು ಮದುವೆಯಾಗಲು ಬಯಸಿದ್ದೆ. ನಂತರ ನಾನು ತೆಂಡೂಲ್ಕರ್ ಅವರ ಲ್ಯಾಂಡ್ ಲೈನ್ ನಂಬರ್ ತೆಗೆದುಕೊಂಡು ಅವಳಿಗೆ ಸುಮಾರು 20 ಬಾರಿ ಕರೆ ಮಾಡಿದ್ದೇನೆ. ವೈಯಕ್ತಿಕವಾಗಿ ನೋಡಿಲ್ಲ. ಆಕೆ ನನ್ನ ಹೆಂಡತಿ" ಎಂದು ಹೇಳಿಕೆ ನೀಡಿದ್ದಾನೆ.
ಇನ್ನು ಈ ಬಗ್ಗೆ ಆತನ ಕುಟುಂಬಸ್ಥರು ಹೇಳಿಕೆ ನೀಡಿದ್ದು ಕಳೆದ 8 ವರ್ಷಗಳಿಂದ ಆತನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆತ ಮಾನಸಿಕವಾಗಿ ಅಸ್ವಸ್ಥನಾಗಿದ್ದಾನೆ ಎಂದು ಹೇಳಿದ್ದರು.