16 ಪತ್ನಿಯರು 151 ಮಕ್ಕಳಿರುವ ಈ ವ್ಯಕ್ತಿ 17ನೇ ಮದುವೆಯ ಸಿದ್ದತೆಯಲ್ಲಿದ್ದಾನೆ..!
ಜಿಂಬಾಬ್ವೆಯಲ್ಲಿ ವ್ಯಕ್ತಿಯೊಬ್ಬ 16 ಮದುವೆಯಾಗಿದ್ದಾನೆ. 16 ಮದುವೆಯಲ್ಲಿ 151 ಮಕ್ಕಳಿದ್ದಾರೆ. ಆದರೆ ಈ ವ್ಯಕ್ತಿ ಇನ್ನೂ ಹೆಚ್ಚು ಮಕ್ಕಳನ್ನು ಹೊಂದುವ ಬಯಕೆಯಲ್ಲಿದ್ದಾನೆ.
ಈ ವ್ಯಕ್ತಿ ವಿಚಿತ್ರ ನಂಬಿಕೆ ಮೇಲೆ ವಿಶ್ವಾಸ ಇಟ್ಟುಕೊಂಡಿದ್ದಾರೆ. ಮಿಶೆಕ್ ನ್ಯಾನ್ ದೋರ್ ಎಂಬ ಹೆಸರಿನ ಈ ವ್ಯಕ್ತಿಯ, ಪ್ರಕಾರ ಇವರ ಜೀವನದ ಉದ್ದೇಶವೇ ತನ್ನ ಪತ್ನಿಯರನ್ನು ಸಂತೋಷದಿಂದ ನೋಡಿಕೊಳ್ಳುವುದಂತೆ.
66 ವರ್ಷದ ಈ ವ್ಯಕ್ತಿ ಇನ್ನೂ ಸಣ್ಣ ವಯಸ್ಸಿನ ಯುವತಿಯರನ್ನು ಮದುವೆಯಾಗುವ ಇಚ್ಛೆಯಲ್ಲಿದ್ದಾರೆ. ಪ್ರಸ್ತುತ ಇರುವ ಪತ್ನಿಯರು, ಈಗಾಗಲೇ ಬಹಳಷ್ಟು ಮಕ್ಕಳನ್ನು ಹೆತ್ತಿದ್ದು, ಇನ್ನು ಹೆಚ್ಚಿನ ಮಕ್ಕಳನ್ನು ಹೆರಲು ಶಕ್ತರಲ್ಲದ ಕಾರಣ, ಈ ವ್ಯಕ್ತಿ ಈಗ 17ನೇ ಮದುವೆಯ ಸಿದ್ದತೆಯಲ್ಲಿದ್ದಾರೆ.
16 ಪತ್ನಿ 151 ಮಕ್ಕಳನ್ನು ಹೊಂದಿರುವ ಈ ವ್ಯಕ್ತಿ, 100 ಪತ್ನಿಯರನ್ನು ಮತ್ತು ಸಾವಿರ ಮಕ್ಕಳನ್ನು ಹೊಂದುವ ಇರಾದೆ ಇಟ್ಟುಕೊಂಡಿದ್ದಾನಂತೆ. ಅಲ್ಲದೆ, ತಾನು ಸಾಯುವವರೆಗೂ ಈ ಕಾರ್ಯವನ್ನು ಮುಂದುವರೆಸುವುದಾಗಿಯೂ ಹೇಳಿದ್ದಾನೆ.