ಬಿಗ್ ಬಾಸ್ ಆರಂಭಕ್ಕೂ ಮೊದಲೇ ಸೆಟ್‌ನಲ್ಲಿ ನಡೆಯಿತು ಅವಘಡ
ಬಿಗ್ ಬಾಸ್ ಇನ್ನೇನೂ ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಆದರೆ ಅದಕ್ಕೂ ಮುನ್ನವೇ ಸೆಟ್ ನಲ್ಲಿ ಅವಘಡವೊಂದು ಸಂಭವಿಸಿದೆ.
ಬಿಗ್ ಬಾಸ್ ಜನರನ್ನು ರಂಜಿಸಲು ಸಕಲ ಸಿದ್ಧತೆ ನಡೆಸಿದೆ. ಪ್ರೇಕ್ಷಕರು ಕೂಡ ಕುತೂಹಲದಿಂದ ಕಾಯುತ್ತಿದ್ದಾರೆ.
ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಹೊಸ ಸೀಸನ್ ಸಾಕಷ್ಟು ವಿಶೇಷತಗಳೊಂದಿಗೆ ಶುರುವಾಗಲಿದೆ. ಮುಂಚಿನ ಸೀಸನ್‌ಗಳಿಗಿಂತ ಭಿನ್ನವಾಗಿ ನಡೆಯಲಿದೆ.
ಬಿಗ್ ಬಾಸ್ ಪ್ರೋಮೋಗಳು ಕೂಡ ಎಲ್ಲರ ಕುತೂಹಲವನ್ನು ಹೆಚ್ಚಿಸುತ್ತಿವೆ. ಗ್ರ್ಯಾಂಡ್ ಪ್ರೀಮಿಯರ್ ಗಾಗಿ ಜನರು ಕಾಯುತ್ತಿರುವ ಈ ಸಮಯದಲ್ಲಿ ಬಿಗ್ ಬಾಸ್ ಸೆಟ್‌ನಲ್ಲಿ ಅವಘಡ ನಡೆದಿದೆ.
ಬಿಗ್ ಬಾಸ್ ತಮಿಳು 8 ಅಕ್ಟೋಬರ್ 6 ರಂದು ಪ್ರಸಾರವಾಗಲಿದೆ ಮತ್ತು ವಿಜಯ್ ಟೆಲಿವಿಷನ್‌ನಲ್ಲಿ ಪ್ರಸಾರವಾಗಲಿದೆ.
ಉತ್ತರ ಪ್ರದೇಶದ ಮೊಹಮ್ಮದ್ ಶಾಹೀನ್ ಖಾನ್ ಎಂಬ ವ್ಯಕ್ತಿ ಬಿಗ್ ಬಾಸ್ ಸೆಟ್‌ಗಳನ್ನು ಹೊಂದಿಸುವಾಗ 20 ಅಡಿ ಎತ್ತರದಿಂದ ಬಿದ್ದಿದ್ದಾರೆ.
ಕೈ ಮತ್ತು ಸೊಂಟ ಮುರಿದು ಹೋಗಿವೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಘಟನೆ ಚೆನ್ನೈ ಬಳಿಯ ಇವಿಪಿ ಫಿಲ್ಮ್‌ಸಿಟಿಯಲ್ಲಿ ನಡೆದಿದೆ. ಬಿಗ್ ಬಾಸ್ ತಮಿಳು 8 ರ ಸೆಟ್‌ನಲ್ಲಿ ಈ ಅವಘಡ ಸಂಭವಿಸಿದೆ.
ಬಿಗ್ ಬಾಸ್ ತಮಿಳು 8 ರ ಗ್ರ್ಯಾಂಡ್ ಪ್ರೀಮಿಯರ್‌ಗೆ ದಿನಗಣನೆ ಪ್ರಾರಂಭವಾಗಿದ್ದು ಈ ವರ್ಷ ಸೌತ್ ಸೂಪರ್ ಸ್ಟಾರ್‌ವಿಜಯಗಗ ಸೇತುಪತಿ ನಡೆಸಿಕೊಡಲಿದ್ದಾರೆ.