ಜನವರಿ 2024ರವರೆಗೆ ಅಸ್ತ ಭಾವದಲ್ಲಿನ ಮಂಗಳ, ಈ ರಾಶಿಗಳ ಧನರಿಗೆ ಧನಕುಬೇರ ನಿಧಿ ಪ್ರಾಪ್ತಿಯ ಯೋಗ!
Mangal Ast In Kanya 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ಸೇನಾಪತಿ ಎಂದೇ ಕರೆಯಲಾಗುವ ಮಂಗಳ ಜನವರಿ 2024ರವರೆಗೆ ಅಸ್ತಮಿಸಿದ್ದಾನೆ. ಮಂಗಳನ ಈ ಸ್ಥಿತಿ ಹಲವು ರಾಶಿಗಳ ಜನರ ಪಾಲಿಗೆ ವಿಶೇಷವಾಗಿರಲಿದೆ. Spiritual News In Kannada
ವೃಷಭ ರಾಶಿ: ಮಂಗಳನ ಅಸ್ತ ಸ್ಥಿತಿ ನಿಮ್ಮ ಪಾಲಿಗೆ ಭಾರಿ ಲಾಭದಾಯದ ಸಿದ್ಧ ಸಾಬೀತಾಗಲಿದೆ. ನಿಮ್ಮ ಕಠಿಣ ಪರಿಶ್ರಮಕ್ಕೆ ಸಂಪೂರ್ಣ ಫಲ ಪ್ರಾಪ್ತಿಯಾಗಲಿದೆ. ನಿಮ್ಮ ಕೆಲಸಕ್ಕೆ ಪ್ರಶಂಸೆ ವ್ಯಕ್ತವಾಗಲಿದೆ. ಉತ್ತಮ ನೌಕರಿಯ ಹುಡುಕಾಟದಲ್ಲಿರುವವರಿಗೆ ಯಶಸ್ಸು ಪ್ರಾಪ್ತಿಯಾಗಲಿದೆ. ವಿದೇಶದಲ್ಲಿ ನೌಕರಿ ಮಾಡಲು ಬಯಸುವ ನಿಮ್ಮ ಆಸೆ ಈಡೇರಲಿದೆ. ವ್ಯಾಪಾರಿಗಳ ಕುರಿತು ಹೇಳುವುದಾದರೆ ಅವರಿಗೆ ಸರಾಸರಿ ಫಲಿತಾಂಶಗಳು ಪ್ರಾಪ್ತಿಯಾಗಲಿವೆ. ಉತ್ತಮ ಫಲಿತಾಂಶಕ್ಕಾಗಿ ಶಿವನನ್ನು ಆರಾಧಿಸಿ.
ಮೀನ ರಾಶಿ: ಮಂಗಳನ ಅಸ್ತ ಭಾವ ಮೀನ ಜಾತಕದ ವ್ಯಾಪಾರಿಗಳಿಗೆ ಸಾಕಷ್ಟು ಲಾಭದಾಯಕ ಸಾಬೀತಾಗಲಿದೆ. ವೃತ್ತಿ ಜೀವನದ ಪ್ರತಿಯೊಂದು ಕ್ಷೇತ್ರದಲ್ಲಿ ಯಶಸ್ಸು ನಿಮ್ಮದಾಗಲಿದೆ. ಎದುರಾಳಿಗಳಿಗೆ ಉತ್ತಮ ಪೈಪೋಟಿ ನೀಡುವಲ್ಲಿ ನೀವು ಯಶಸ್ವಿಯಾಗುವಿರಿ. ಭಾಗ್ಯದ ಸಂಪೂರ್ಣ ಬೆಂಬಲ ದೊರೆತು ನಿಮಗೆ ಅಪಾರ ಆರ್ಥಿಕ ಲಾಭ ಸಿಗಲಿದೆ. ಆರೋಗ್ಯದ ಬಗ್ಗೆ ಕಾಳಜಿವಹಿಸಿ. ಏಕೆಂದರೆ ನಿಮ್ಮ ರಾಶಿಯ ಮೇಲೆ ಶನಿಯ ಸಾಡೇಸಾತಿ ನಡೆಯುತ್ತಿದೆ.
ಧನು ರಾಶಿ: ಮಂಗಳನ ಅಸ್ತ ಸ್ಥಿತಿ ಧನು ರಾಶಿಯ ಜಾತಕದವರ ವೃತ್ತಿ ಜೀವನದ ಮೇಲೆ ಭಾರಿ ಸಕಾರಾತ್ಮಕ ಪ್ರಭಾವ ಬೀರಲಿದೆ. ಆರ್ಥಿಕ ಸ್ಥಿತಿ ಬಲವಾಗಿ, ಧನ-ಧಾನ್ಯ ವೃದ್ಧಿಯಾಗಲಿದೆ. ಕುಟುಂಬ ಸದಸ್ಯರ ಜೊತೆಗೆ ಒಳ್ಳೆಯ ಕಾಲ ಕಳೆಯುವಲ್ಲಿ ಯಶಸ್ವಿಯಾಗುವಿರಿ. ಸಂಗಾತಿಯೊಂದಿಗೆ ರೊಮ್ಯಾಂಟಿಕ್ ಕಾಲ ಕಳೆಯುವಿರಿ. ಬಿಸ್ನೆಸ್ ಮಾಡುವವರಿಗೆ ಯಶಸ್ಸು ಸಿಗಲಿದೆ. ಹಲವು ಮಹತ್ವದ ಮತ್ತು ಲಾಭ ಕೊಡುವ ಒಪ್ಪಂದಗಳನ್ನು ಮಾಡಿಕೊಳ್ಳುವಿರಿ. ಆರೋಗ್ಯದ ಬಗ್ಗೆ ಕಾಳಜಿವಹಿಸಿ. ನಕಾರಾತ್ಮಕ ಫಲಿತಾಂಶಗಳನ್ನು ದೂರಮಾಡಲು ಶ್ರೀಆಂಜನೇಯನಿಗೆ ವಿಧಿ-ವಿಧಾನಗಳ ಮೂಲಕ ಪೂಜೆ ಸಲ್ಲಿಸಿ ಆರಾಧಿಸಿ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)