Mangal Asta: 2024ರ ಜನವರಿವರೆಗೂ ಈ ರಾಶಿಯವರಿಗೆ ತುಂಬಾ ಎಚ್ಚರಿಕೆ ಅಗತ್ಯ
ಜ್ಯೋತಿಷ್ಯ ಶಾಸ್ತ್ರದಲ್ಲಿ, ಮಂಗಳ ಗ್ರಹವನ್ನು ಕಮಾಂಡರ್ ಗ್ರಹ ಎಂದು ಕರೆಯಲಾಗುತ್ತದೆ. 2023ರ ಸೆಪ್ಟೆಂಬರ್ 23ರಂದು ಮಂಗಳ ಗ್ರಹ ಕನ್ಯಾ ರಾಶಿಯಲ್ಲಿ ಅಸ್ತಮಿಸಿದೆ. 2024 ರ ಜನವರಿ 17 ರವರೆಗೆ ಮಂಗಳ ಇದೇ ಸ್ಥಿತಿಯಲ್ಲಿ ಇರಲಿದ್ದಾನೆ. ಈ ಸಮಯವನ್ನು ಕೆಲವು ರಾಶಿಯವರಿಗೆ ತುಂಬಾ ಅಪಾಯಕಾರಿ ಎಂದು ಹೇಳಲಾಗುತ್ತಿದೆ. ಹಾಗಿದ್ದರೆ, ಮುಂದಿನ ಎರಡು ತಿಂಗಳು ಯಾವ ರಾಶಿಯವರು ಎಚ್ಚರಿಕೆಯಿಂದ ಇರಬೇಕು ಎಂದು ತಿಳಿಯೋಣ...
ಮುಂದಿನ ಎರಡು ತಿಂಗಳು ಮೇಷ ರಾಶಿಯವರಿಗೆ ಸವಾಲಿನ ಸಮಯ. ಅದರಲ್ಲೂ, ನೀವು ವ್ಯಾಪಾರಸ್ಥರಾಗಿದ್ದರೆ ವಿಶೇಷವಾಗಿ ಜಾಗರೂಕರಾಗಿರಬೇಕು. ಯಾವುದೇ ನಿರ್ಧಾರ ಕೈಗೊಳ್ಳುವಾಗ ತುಂಬಾ ಎಚ್ಚರಿಕೆಯಿಂದಿರಿ, ಇಲ್ಲವೇ ನಷ್ಟ ಅನುಭವಿಸಬೇಕಾಗಬಹುದು.
ಮಂಗಳ ಗ್ರಹದ ಅಸ್ತಮ ಸ್ಥಿತಿಯು ವೃಷಭ ರಾಶಿಯವರಿಗೆ ಪ್ರತಿಕೂಲ ಫಲಿತಾಂಶಗಳನ್ನು ತರಲಿದೆ. ಈ ಸಮಯದಲ್ಲಿ ವೃಷಭ ರಾಶಿಯವರು ಕಠಿಣ ಪರಿಶ್ರಮದ ಹೊರತಾಗಿಯೂ ನಿರೀಕ್ಷಿತ ಫಲಗಳನ್ನು ತರುವುದಿಲ್ಲ. ಕಚೇರಿಯಲ್ಲಿ ಕೆಲಸದ ಹೊರೆ ಹೆಚ್ಚಾಗುತ್ತದೆ.
ಮಂಗಳ ಸಂಚಾರದ ಪ್ರಭಾವದಿಂದಾಗಿ ಕರ್ಕಾಟಕ ರಾಶಿಯವರು ಕೆಲಸದಲ್ಲಿ ಎಷ್ಟೇ ಪರಿಶ್ರಮ ವಹಿಸಿದರೂ ನಿರ್ದಿಷ್ಟ ಗುರಿ ತಲುಪಲು ಸಾಧ್ಯವಾಗುವುದಿಲ್ಲ. ಯಾವುದೇ ದೂರದ ಪ್ರಯಾಣವನ್ನು ಕೈಗೊಳ್ಳುವಾಗ ತುಂಬಾ ಎಚ್ಚರಿಕೆಯಿಂದ ಮುಂದುವರೆಯಿರಿ.
ಸಿಂಹ ರಾಶಿಯವರಿಗೆ ಇನ್ನೆರಡು ತಿಂಗಳು ಬಹಳ ಸವಾಲಿನ ಸಮಯ ಎಂತಲೇ ಹೇಳಬಹುದು. ಈ ಸಮಯದಲ್ಲಿ ಉದ್ಯೋಗ ಕ್ಷೇತ್ರದಲ್ಲಿ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ವ್ಯಾಪಾರ ಉದ್ಯಮದಲ್ಲಿ ನಷ್ಟವನ್ನು ಅನುಭವಿಸಬೇಕಾಗಬಹುದು.
ಮಂಗಳ ಅಸ್ತದ ಪರಿಣಾಮವಾಗಿ ಧನು ರಾಶಿಯವರು ಕೆಲಸದ ಸ್ಥಳದಲ್ಲಿ ಪ್ರತಿಕೂಲ ಪರಿಣಾಮವನ್ನು ಎದುರಿಸಬೇಕಾಗಬಹುದು. ಯಾವುದೇ ಕೆಲಸದಲ್ಲಿ ಯಶಸ್ಸನ್ನು ಸಾಧಿಸಲು ಹೆಚ್ಚು ಪರಿಶ್ರಮ ವಹಿಸಬೇಕಾಗುತ್ತದೆ. ವ್ಯಾಪಾರ-ವ್ಯವಹಾರದಲ್ಲಿ ಯಾವುದೇ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವುದನ್ನು ತಪ್ಪಿಸಿ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.