ಸಿಂಹ ರಾಶಿಯಲ್ಲಿ ಅಪರೂಪದ ತ್ರಿಗ್ರಹಿ ಯೋಗ ನಿರ್ಮಾಣ, ಈ ಜನರಿಗೆ ಸುಖ-ಸೌಭಾಗ್ಯ-ಪದೋನ್ನತಿಯ ಭಾಗ್ಯ ಪ್ರಾಪ್ತಿ!
ಮೇಷ ರಾಶಿ: ಮೇಷ ರಾಶಿಯವರ ಗೋಚರ ಜಾತಕದ ಪಂಚಮಭಾವದಲ್ಲಿ ಈ ಮೈತ್ರಿ ನೆರವೇರಿದ ಕಾರಣ, ತ್ರಿಗ್ರಹಿ ಯೋಗ ನಿಮಗೆ ಸಾಕಷ್ಟು ಲಾಭಕಾರಿ ಸಿದ್ಧ ಸಾಬೀತಾಗಲಿದೆ. ಕಾರ್ಯಸ್ಥಳದಲ್ಲಿ ಅಧಿಕಾರಿಗಳ ಬೆಂಬಲ ಸಿಗಲಿದೆ ಮತ್ತು ಸಮಾಜದಲ್ಲಿ ಘನತೆ-ಗೌರವ-ಸ್ಥಾನಮಾನ ಹೆಚ್ಚಾಗಲಿದೆ. ಅದೃಷ್ಟದ ಸಂಪೂರ್ಣ ಬೆಂಬಲ ನಿಮಗೆ ದೊರೆತು, ಆರ್ಥಿಕ ಸ್ಥಿತಿ ಬಲಿಷ್ಠವಾಗಲಿದೆ. ವ್ಯಾಪಾರಿಗಳಿಗೂ ಕೂಡ ವ್ಯಾಪಾರದಲ್ಲಿ ಲಾಭದ ಎಲ್ಲಾ ಸಾಧ್ಯತೆಗಳಿವೆ.
ವೃಷಭ ರಾಶಿ: ವೃಷಭ ರಾಶಿಯ ಜಾತಕದವರಿಗೂ ಕೂಡ ತ್ರಿಗ್ರಹಿ ಯೋಗ ಸಾಕಷ್ಟು ಲಾಭವನ್ನು ತಂದು ಕೊಡಲಿದೆ. ಏಕೆಂದರೆ ನಿಮ್ಮ ಗೋಚರ ಜಾತಕದ ಚತುರ್ಥ ಭಾವದಲ್ಲಿ ಈ ಮೈತ್ರಿ ರೂಪುಗೊಳ್ಳುತ್ತಿದೆ. ಇದರಿಂದ ನಿಮಗೆ ಭಾಗ್ಯದ ಸಂಪೂರ್ಣ ಸಾಥ್ ಸಿಗಲಿದೆ. ಹೊಸ ನೌಕರಿಯ ಹುಡುಕಾಟದಲ್ಲಿರುವವರಿಗೆ ಯಶಸ್ಸು ಸಿಗಲಿದೆ. ಬಿಸ್ನೆಸ್ ನಲ್ಲಿಯೂ ಕೂಡ ಅಪಾರ ಯಶಸ್ಸು ನಿಮ್ಮದಾಗುವ ಎಲ್ಲಾ ನಿರೀಕ್ಷೆಗಳಿವೆ.
ಮಿಥುನ ರಾಶಿ: ನಿಮ್ಮ ಗೋಚರ ಜಾತಕದ ತೃತೀಯ ಭಾವದಲ್ಲಿ ಈ ತ್ರಿಗ್ರಹಿ ಯೋಗ ನಿರ್ಮಾಣಗೊಳ್ಳುತ್ತಿದೆ. ಹೀಗಿರುವಾಗ ನೌಕರಿ, ಬಿಸ್ನೆಸ್ ನಲ್ಲಿ ನಿಮಗೆ ಅಪಾರ ಯಶಸ್ಸು ಸಿಗುವ ನಿರೀಕ್ಷೆ ಇದೆ. ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಹೂಡಿಕೆಗಾಗಿ ಯೋಜನೆ ರೂಪಿಸುತ್ತಿದ್ದರೆ, ಸಮಯ ತುಂಬಾ ಅನುಕೂಲಕರವಾಗಿದೆ. ಇದರಿಂದ ನಿಮಗೆ ಸಾಕಷ್ಟು ಧನಲಾಭ ಉಂಟಾಗುವ ಸಾಧ್ಯತೆ ಇದೆ. ಕುಟುಂಬದ ಸಂಪೂರ್ಣ ಬೆಂಬಲ ನಿಮಗಿರಲಿದೆ.
ಸಿಂಹ ರಾಶಿ: ಸಿಂಹ ರಾಶಿಯ ಜಾತಕದವರ ಪಾಲಿಗೂ ಕೂಡ ತ್ರಿಗ್ರಹಿ ಯೋಗ ಅತ್ಯಂತ ಅನುಕೂಲಕರ ಸಿದ್ಧ ಸಾಬೀತಾಗಲಿದೆ. ಏಕೆಂದರೆ ನಿಮ್ಮ ಗೋಚರ ಜಾತಕದ ಪ್ರಥಮ ಭಾವದಲ್ಲಿ ಈ ಯುತಿ ನೆರವೇರುತ್ತಿದೆ. ಇದರಿಂದ ನಿಮಗೆ ಹಲವು ಒಳ್ಳೆಯ ಸುದ್ದಿಗಳು ಸಿಗುವ ಸಾಧ್ಯತೆಗಳಿವೆ. ಆರ್ಥಿಕ ವೇದಿಕೆಯಲ್ಲಿಯೂ ಕೂಡ ನಿಮಗೆ ಸಾಕಷ್ಟು ಧನ ಪ್ರಾಪ್ತಿಯಾಗುವ ನಿರೀಕ್ಷೆ ಇದೆ.
ತುಲಾ ರಾಶಿ: ನಿಮ್ಮ ಗೋಚರ ಜಾತಕದ ಏಕಾದಶ ಭಾವದಲ್ಲಿ ಈ ತ್ರಿಗ್ರಹಿ ಯೋಗ ನಿರ್ಮಾಣಗೊಳ್ಳುತ್ತಿದೆ. ಇದರಿಂದ ನಿಮ್ಮ ಪಾಲಿಗೆ ಧನಯೋಗ ರೂಪುಗೊಳ್ಳುತ್ತಿದೆ. ಇದರಿಂದ ಸಮಾಜದಲ್ಲಿ ನಿಮ್ಮ ಘನತೆ-ಗೌರವ-ಸ್ಥಾನಮಾನ ಹೆಚ್ಚಾಗಲಿದೆ. ಸುಖ-ಸಮೃದ್ಧಿ ಪ್ರಾಪ್ತಿಯಾಗ್ಲಿದೆ. ವಿದೇಶಕ್ಕೆ ಹೋಗುವ ಅವಕಾಶ ಕೂಡ ಒದಗಿಬರಲಿದೆ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)