Mangal Budh Yuti: ಹದಿನೆಂಟು ತಿಂಗಳುಗಳ ಬಳಿಕ ಪರಸ್ಪರ ಹತ್ತಿರಕ್ಕೆ ಬರಲಿದ್ದಾರೆ ಮಂಗಳ-ಬುಧ, ಈ ಜನರ ಜೀವನದಲ್ಲಿ ಸುವರ್ಣಕಾಲ ಆರಂಭ!
ಕರ್ಕ ರಾಶಿ: ಬುಧ ಮಂಗಳರ ಈ ಮೈತ್ರಿ ನಿಮ್ಮ ಪಾಲಿಗೆ ಸಾಕಷ್ಟು ಲಾಭದಾಯಕ ಸಾಬೀತಾಗಲಿದೆ. ಏಕೆಂದರೆ, ಈ ಯುತಿ ನಿಮ್ಮ ಗೋಚರ ಜಾತಕದ ನವಮ ಭಾವದಲ್ಲಿ ರಚನೆಯಾಗಲಿದೆ. ಇದರಿಂದ ನಿಮ್ಮ ಭಾಗ್ಯೋದಯವಾಗುವ ಸಾಧ್ಯತೆ ಇದೆ. ವೃತ್ತಿ ಜೀವನ ಹೊಳೆಯಲಿದೆ
ಇನ್ನೊಂದೆಡೆ ಕರ್ಕ ಜಾತಕದ ಸರ್ಕಾರಿ ನೌಕರಿಯ ಸಿದ್ಧತೆಯಲ್ಲಿ ತೊಡಗಿರುವ ಜನರಿಗೆ ಅವರ ಪರಿಶ್ರಮದ ಬಲದಿಂದ ಸರ್ಕಾರಿ ನೌಕರಿ ಸಿಗುವ ಎಲ್ಲಾ ಸಾಧ್ಯತೆಗಳಿವೆ. ಅರ್ಥಾತ್ ವಿದ್ಯಾರ್ಥಿಗಳಿಗೆ ಈ ಸಮಯ ಸಾಕಷ್ಟು ಅನುಕೂಲಕರವಾಗಿದೆ. ಈ ಅವಧಿಯಲ್ಲಿ ಧಾರ್ಮಿಕ ಅಥವಾ ಮಂಗಳ ಕಾರ್ಯಗಳಲ್ಲಿ ನೀವು ಪಾಲ್ಗೊಳ್ಳುವಿರಿ. ಈ ಅವಧಿಯಲ್ಲಿ ನಿಮ್ಮ ನಿಂತುಹೋದ ಕೆಲಸಗಳು ಪೂರ್ಣಗೊಳ್ಳಲಿವೆ ಮತ್ತು ನಿಮ್ಮ ಪರಿಶ್ರಮಕ್ಕೆ ತಕ್ಕ ಫಲ ಸಿಗಲಿದೆ.
ಮಿಥುನ ರಾಶಿ: ಬುಧ ಹಾಗೂ ಮಂಗಳರ ಸಂಯೋಜನೆ ನಿಮ್ಮ ಪಾಲಿಗೂ ಕೂಡ ಸಾಕಷ್ಟು ಅನುಕೂಲಕರ ಸಿದ್ಧ ಸಾಬೀತಾಗಲಿದೆ. ಏಕೆಂದರೆ ಅವರ ಈ ಮೈತ್ರಿ ನಿಮ್ಮ ಕುಂಡಲಿಯ ಕರ್ಮ ಭಾವದಲ್ಲಿ ರಚನೆಯಾಗುತ್ತಿದೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ಕೆಲಸ ಮತ್ತು ಕಾರ್ಯಗಳಲ್ಲಿ ಅಪಾರ ಯಶಸ್ಸು ಸಿಗಲಿದೆ
ಇನ್ನೊಂದೆಡೆ ಮಿಥುನ ರಾಶಿಯ ಜಾತಕದವರಿಗೆ ಈ ಅವಧಿಯಲ್ಲಿ ಜೀವನದಲ್ಲಿ ಸುಖ ಸೌಕರ್ಯಗಳು ಹೆಚ್ಚಾಗಲಿವೆ. ಇದರಿಂದ ನಿಮ್ಮ ಮನಸ್ಸು ಪ್ರಸನ್ನವಾಗಿರಲಿದೆ. ನಿಮ್ಮ ಆಸೆ ಆಕಾಂಕ್ಷೆಗಳು ಈಡೇರಲಿದ್ದು, ವ್ಯಾಪಾರಿಗಳಿಗೆ ಉತ್ತಮ ಧನಲಾಭ ಸಿಗಲಿದೆ. ಹೊಸ ಆರ್ಡರ್ ಗಳು ಸಿಗಲಿವೆ. ಈ ಅವಧಿಯಲ್ಲಿ ನಿಮಗೆ ಪಿತ್ರಾರ್ಜಿತ ಸಂಪತ್ತು ಸಿಗುವ ಎಲ್ಲಾ ಸಾಧ್ಯತೆಗಳಿವೆ.
ಕುಂಭ ರಾಶಿ: ಕುಂಭ ಜಾತಕದವರಿಗೆ ಈ ಮೈತ್ರಿ ಸಾಕಷ್ಟು ಶುಭ ಫಲಗಳನ್ನು ನೀಡಲಿದೆ. ಏಕೆಂದರೆ ಈ ಯುತಿ ನಿಮ್ಮ ಜಾತಕದ ಧನ ಹಾಗೂ ವಾಣಿಯ ಭಾವದಲ್ಲಿ ನೆರವೇರುತ್ತಿದೆ. ಇದರಿಂದ ನಿಮಗೆ ಕಾಲಕಾಲಕ್ಕೆ ಆಕಸ್ಮಿಕ ಧನಲಾಭ ಉಂಟಾಗಲಿದೆ. ನಿಮ್ಮ ಮಾತಿನ ಪ್ರಭಾವ ಹೆಚ್ಚಾಗಲಿದೆ.
ಕುಂಭ ರಾಶಿಯ ಜನರ ಮಾತಿನಿಂದ ಇತರರನ್ನು ಇಂಪ್ರೆಸ್ ಮಾಡುವ ಸಾಧ್ಯತೆ ಇದ್ದು, ಸಮಾಜದಲ್ಲಿ ಘನತೆ ಗೌರವ ಹಾಗೂ ಪ್ರತಿಷ್ಠೆ ಹೆಚ್ಚಾಗಲಿದೆ. ವೃತ್ತಿಯಲ್ಲಿ ನಿಮಗೆ ಮುಂದುವರೆಯುವ ಅವಕಾಶ ಸಿಗಲಿದೆ. ಈ ಅವಧಿಯಲ್ಲಿ ನಿಮ್ಮ ಆಸೆ ಆಕಾಂಕ್ಷೆಗಳು ಈಡೇರಿ, ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಂಡುಬರಲಿದೆ.
(Disclaimer- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)