2025ರಲ್ಲಿ ಈ ರಾಶಿಯವರಿಗೆ ಅಪಾರ ಹಣ, ಕೀರ್ತಿ, ಐಷಾರಾಮಿ ಬದುಕನ್ನು ಕರುಣಿಸಲಿದ್ದಾನೆ ಮಂಗಳ..!
ಗ್ರಹಗಳ ಕಮಾಂಡರ್ ಮಂಗಳ 2025ರ ಜನವರಿ ತಿಂಗಳಿನಲ್ಲಿ ಮಿಥುನ ರಾಶಿಗೆ ಪದಾರ್ಪಣೆ ಮಾಡಲಿದ್ದಾನೆ.
ಹೊಸ ವರ್ಷದ ಆರಂಭದಲ್ಲಿ ರಾಶಿಚಕ್ರ ಬದಲಾಯಿಸಲಿರುವ ಮಂಗಳನು ಈ ಸಂದರ್ಭದಲ್ಲಿ ಹಿಮ್ಮುಖವಾಗಿ ಚಲಿಸುತ್ತಿರುತ್ತಾನೆ. ಇದರ ಪ್ರಭಾವದಿಂದಾಗಿ ಮಂಗಳನು ಕೆಲವು ರಾಶಿಯವರ ಬದುಕನ್ನೇ ಬದಲಾಯಿಸಲಿದ್ದಾನೆ ಎಂದು ಹೇಳಲಾಗುತ್ತಿದೆ.
ಮೇಷ ರಾಶಿ: ಹೊಸ ವರ್ಷದಲ್ಲಿ ಮಂಗಳ ಗ್ರಹದ ವಿಶೇಷ ಆಶೀರ್ವಾದದಿಂದಾಗಿ ಈ ರಾಶಿಯವರು ಕೆಲಸದಲ್ಲಿ ಭಾರೀ ಕೀರ್ತಿ, ಯಶಸ್ಸನ್ನು ಗಳಿಸಲಿದ್ದಾರೆ. ಅದೃಷ್ಟದ ಬೆಂಬಲದಿಂದ ದೀರ್ಘಕಾಲದಿಂದ ಸ್ಥಗಿತಗೊಂಡಿರುವ ಕೆಲಸಗಳು ವೇಗವನ್ನು ಪಡೆದು, ಆರ್ಥಿಕವಾಗಿಯೂ ಸಮೃದ್ಧಿಯನ್ನು ತರಲಿದೆ ಎನ್ನಲಾಗುತ್ತಿದೆ.
ಸಿಂಹ ರಾಶಿ: ಮಂಗಳನ ಹಿಮ್ಮುಖ ನಡೆಯು ಈ ರಾಶಿಯವರಿಗೆ ದಿಢೀರ್ ಧನಲಾಭವನ್ನು ಕರುಣಿಸ್ಲಿದೆ. ಕೆಲಸದ ಸ್ಥಳದಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸುವಿರಿ. ಇನ್ನೂ ಮದುವೆಯಾಗದವರಿಗೆ ಕಂಕಣ ಭಾಗ್ಯ ಕೂಡಿಬರಲಿದೆ. ಹೊಸ ಕೆಲಸಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಶುಭ ಸುದ್ದಿ ದೊರೆಯಲಿದೆ.
ತುಲಾ ರಾಶಿ: ಮಂಗಳನ ಹಿಮ್ಮುಖ ನಡೆಯು ಈ ರಾಶಿಯವರಿಗೂ ಶುಭ ಫಲಗಳನ್ನು ನೀಡಲಿದೆ. ಮನೋಕಾಮನೆಗಳು ಪೂರ್ಣಗೊಂಡು ಬಯಸಿದ್ದೆಲ್ಲವನ್ನೂ ಪಡೆಯುವ ಸಕಾಲ ಇದಾಗಿದೆ. ವೃತ್ತಿ ಸಂಬಂಧಿತ ಕೆಲಸಗಳಲ್ಲಿ ನಿಮ್ಮ ನಿರೀಕ್ಷೆಗೆ ತಕ್ಕ ಫಲಗಳನ್ನು ಪಡೆಯುವಿರಿ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.