ಶೀಘ್ರದಲ್ಲೇ ತನ್ನ ಸ್ವರಾಶಿಗೆ ಮಂಗಳನ ಪ್ರವೇಶ, ಈ ರಾಶಿಗಳ ಜನರ ಮೇಲಿರಲಿದೆ ತಾಯಿ ಲಕ್ಷ್ಮಿಯ ವಿಶೇಷ ಕೃಪೆ!
Mangal Gochar In Vruschik Rashi 2023: ವೈದಿಕ ಜೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ಸೇನಾಪತಿ ಎಂದೇ ಕರೆಯಲಾಗುವ ಮಂಗಳ ಶೀಘ್ರದಲ್ಲಿಯೇ ತನ್ನ ಸ್ವರಾಶಿಯಾಗಿರುವ ವೃಶ್ಚಿಕ ರಾಶಿಗೆ ಪ್ರವೇಶಿಸಲಿದ್ದಾನೆ. ಮಂಗಳನ ಈ ಗೋಚರ ಒಟ್ಟು ಮೂರು ಜಾತಕದವರಿಗೆ ಅಪಾರ ಧನಸಂಪತ್ತು ಕರುಣಿಸಲಿದೆ. (Spiritual News In Kannada)
ಮೀನ ರಾಶಿ: ಈ ಅವಧಿಯಲ್ಲಿ ಮಂಗಳ ನಿಮ್ಮ ಭಾಗ್ಯ ಸ್ಥಾನದಲ್ಲಿ ಸಂಚರಿಸಲಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ಭಾಗ್ಯದ ಸಂಪೂರ್ಣ ಬೆಂಬಲ ಪ್ರಾಪ್ತಿಯಾಗಲಿದೆ. ದೇಶ ವಿದೇಶಗಳಿಗೆ ಯಾತ್ರೆ ಸಂಭವಿಸುವ ಸಾಧ್ಯತೆ ಇದೆ ಮತ್ತು ಅವು ನಿಮ್ಮ ಪಾಲಿಗೆ ಶುಭ ಫಲಗಳನ್ನು ನೀಡಲಿವೆ. ವೃತ್ತಿ-ವ್ಯಾಪಾರದಲ್ಲಿ ಹೊಸ ಅವಕಾಶಗಳು ಸಿಗಲಿವೆ. ಮಂಗಳ ನಿಮ್ಮ ಗೋಚರ ಜಾತಕದ ದ್ವಾದಶ ಭಾವಕ್ಕೆ ಅಧಿಪತಿಯಾಗಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನೀವು ಸಾಕಷ್ಟು ಹಣ ಸಂಪಾದಿಸುವಲ್ಲಿ ಮತ್ತು ಸಂಗ್ರಹಿಸುವಲ್ಲಿ ಯಶಸ್ಸನ್ನು ಸಾಧಿಸುವಿರಿ. ಆದರೆ, ಇಮ್ಮ ಮೇಲೆ ಶನಿಯ ಸಾಡೇಸಾತಿ ನಡೆಯುತ್ತಿರುವ ಕಾರಣ ಆರೋಗ್ಯದ ಬಗ್ಗೆ ಕಾಳಜಿವಹಿಸಿ.
ಸಿಂಹ ರಾಶಿ: ಈ ಅವಧಿಯಲ್ಲಿ ಮಂಗಳ ನಿಮ್ಮ ಗೋಚರ ಜಾತಕದ ಚತುರ್ಥ ಭಾವದಲ್ಲಿ ಸಂಚರಿಸಲಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನೀವು ಆಸ್ತಿಪಾಸ್ತಿ ಖರೀದಿಸುವ ಸಾಧ್ಯತೆ ಇದೆ. ಆಸ್ತಿ-ನಿವೇಶನ ಖರೀದಿ ಮಾರಾಟದಿಂದ ನಿಮಗೆ ಲಾಭ ಸಿಗಲಿದೆ. ಇದಲ್ಲದೆ ಪಿತ್ರಾರ್ಜಿತ ಸಂಪತ್ತಿನಿಂದ ನಿಮಗೆ ಲಾಭ ಸಿಗಲಿದೆ. ಮಂಗಳ ನಿಮ್ಮ ಜಾತಕದ ಭಾಗ್ಯ ಸ್ಥಾನದ ಅಧಿಪತಿಯಾಗಿದ್ದಾನೆ, ಹೀಗಾಗಿ ಈ ಅವಧಿಯಲ್ಲಿ ನಿಮಗೆ ಭಾಗ್ಯದ ಸಂಪೂರ್ಣ ಬೆಂಬಲ ಪ್ರಾಪ್ತಿಯಾಗಲಿದ್ದು, ಧನ ಪ್ರಾಪ್ತಿಯ ಪ್ರಬಲ ಯೋಗ ಕೂಡ ರೂಪುಗೊಳ್ಳುತ್ತಿದೆ.
ತುಲಾ ರಾಶಿ: ಮಂಗಳ ನಿಮ್ಮ ಗೋಚರ ಜಾತಕದ ಧನ ಭಾವದಲ್ಲಿ ಸಂಚರಿಸಲಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ಆಕಸ್ಮಿಕ ಧನಲಾಭ ಉಂಟಾಗುವ ಸಾಧ್ಯತೆ ಇದೆ. ಸಾಹಸ ಪರಾಕ್ರಮ ಹೆಚ್ಚಾಗಲಿದೆ. ದಾಂಪತ್ಯ ಜೀವನದಲ್ಲಿ ಸುಖ ಸಮೃದ್ಧಿ ಇರಲಿದೆ. ಬಾಳಸಂಗಾತಿಯ ಜೊತೆಗಿನ ನಿಮ್ಮ ಸಂಬಂಧ ಸುಮಧುರವಾಗಿರಲಿದೆ, ಮಂಗಳ ನಿಮ್ಮ ಜಾತಕದ ಏಳನೇ ಭಾವಕ್ಕೆ ಅಧಿಪತಿಯಾಗಿದ್ದು, ಪಾಟ್ನರ್ಶಿಪ್ ವ್ಯವಹಾರಗಳಿಂದ ನಿಮಗೆ ಲಾಭ ಸಿಗಲಿದೆ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)