Angarak Yog: ಮೀನ ರಾಶಿಯಲ್ಲಿ ಮಂಗಳ ರಾಹು ಯುತಿ, 3 ರಾಶಿಯವರಿಗೆ ಭಾರೀ ನಷ್ಟ, ಹೆಜ್ಜೆ ಹೆಜ್ಜೆಗೂ ಸಂಕಷ್ಟ
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯಾವುದೇ ಒಂದು ರಾಶಿಚಕ್ರದಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚಿನ ಗ್ರಹಗಳು ಒಟ್ಟಿಗೆ ಸಂಧಿಸಿದಾಗ ಶುಭ-ಅಶುಭ ಯೋಗಗಳು ನಿರ್ಮಾಣವಾಗುತ್ತದೆ.
ಇದೀಗ ಮೀನ ರಾಶಿಯಲ್ಲಿ ಕಮಾಂಡರ್ ಗ್ರಹ ಮಂಗಳ, ನೆರಳು ಗ್ರಹ ರಾಹುವಿನೊಂದಿಗೆ ಸಂಯೋಗ ಹೊಂದಿದ್ದಾನೆ. ಇದರ ಪರಿಣಾಮವಾಗಿ ಅಂಗಾರಕ ಯೋಗ ರೂಪುಗೊಂಡಿದೆ.
ಅಂಗಾರಕ ಯೋಗ ಪರಿಣಾಮ ಎಲ್ಲಾ 12 ರಾಶಿಯವರ ಮೇಲೂ ಕಂಡು ಬರುತ್ತದೆ. ಆದರೂ, ಈ ಸಮಯದಲ್ಲಿ ಕೆಲವು ರಾಶಿಯವರು ತುಂಬಾ ಜಾಗರೂಕರಾಗಿರಬೇಕು ಎಂದು ಹೇಳಲಾಗುತ್ತಿದೆ. ಆ ರಾಶಿಗಳೆಂದರೆ...
ಅಂಗಾರಕ ಯೋಗವು ಮೇಷ ರಾಶಿಯ ಜನರಿಗೆ ಅಷ್ಟು ಉತ್ತಮವಾಗಿಲ್ಲ. ಈ ಸಮಯದಲ್ಲಿ ಮೇಷ ರಾಶಿಯವರಿಗೆ ಆರೋಗ್ಯ ಸಮಸ್ಯೆಗಳು ಉಲ್ಬಣಿಸಬಹುದು. ಹಣಕಾಸಿನ ವ್ಯವಹಾರದಲ್ಲಿ ನಷ್ಟ ಸಾಧ್ಯತೆ ಇದೆ.
ಮಂಗಳ-ರಾಹು ಸಂಯೋಗದಿಂದ ಸೃಷ್ಟಿಯಾಗಿರುವ ಅಂಗಾರಕ ಯೋಗವು ಕನ್ಯಾ ರಾಶಿಯವರ ಹಣಕಾಸಿನ ಸ್ಥಿತಿಯನ್ನು ಹದಗೆಡಿಸಬಹುದು. ಉದ್ಯೋಗ ರಂಗದಲ್ಲಿ ಸವಾಲುಗಳನ್ನ್ ಹೆಚ್ಚಿಸಬಹುದು. ದಾಂಪತ್ಯ ಜೀವನದಲ್ಲೂ ಬಿರುಕು ಮೂಡುವ ಸಾಧ್ಯತೆ ಇರುವುದರಿಂದ ಜಾಗರೂಕರಾಗಿರಿ.
ಅಂಗಾರಕ ಯೋಗವು ಮಕರ ರಾಶಿಯವರ ಜೀವನದಲ್ಲೂ ಅಲ್ಲೋಲ-ಕಲ್ಲೋಲವನ್ನು ಸೃಷ್ಟಿಸಲಿದೆ. ಈ ಸಂದರ್ಭದಲ್ಲಿ ಯಾವುದೇ ಕೆಲಸಕ್ಕೆ ಕೈ ಹಾಕುವಾಗ ಬಹಳ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು. ಅಧಿಕ ಖರ್ಚಿಗೆ ಕಡಿವಾಣ ಹಾಕದಿದ್ದರೆ, ಆರ್ಥಿಕ ಮುಗ್ಗಟ್ಟಿನಲ್ಲಿ ಮುಳುಗಬಹುದು.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.