Mangal Rise 2024: ಇನ್ನೂ ಕೆಲವೇ ಗಂಟೆಗಳಲ್ಲಿ ಮೇಷ ಸೇರಿದಂತೆ ಈ ರಾಶಿಗಳ ಜನರ ಜೀವನದಲ್ಲಿ ಗೋಲ್ಡನ್ ಟೈಮ್ ಆರಂಭ, ಕುಬೇರ ನಿಧಿ ಪ್ರಾಪ್ತಿ ಯೋಗ!
Mangal Rise 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ಸೇನಾಪತಿ ಮತ್ತು ಸಾಹಸ ಹಾಗೂ ಶೌರ್ಯ ಕಾರಕ ಮಂಗಳನ ಉದಯ ನೆರವೇರಲಿದೆ. ಇದರಿಂದ ಕೆಲ ರಾಶಿಗಳ ಜನರ ಜೀವನದಲ್ಲಿ ಗೋಲ್ಡನ್ ಟೈಮ್ ಆರಂಭಗೊಳ್ಳಲಿದ್ದು, ಜೀವನದಲ್ಲಿ ಅಪಾರ ಯಶಸ್ಸು ಮತ್ತು ಉನ್ನತಿಯ ಎಲ್ಲಾ ಸಂಕೇತಗಳು ಕಾಣಿಸುತ್ತಿವೆ. (Spiritual News In Kannada)
ಮೇಷ ರಾಶಿ: ಮಂಗಳ ನಿಮ್ಮ ರಾಶಿಯ ರಾಶ್ಯಾಧಿಪನಾಗಿದ್ದಾನೆ, ಹೀಗಾಗಿ ಮಂಗಳನ ಈ ಉದಯ ನಿಮ್ಮ ಪಾಲಿಗೆ ವರದಾನ ಸಾಬೀತಾಗಲಿದೆ. ಏಕೆಂದರೆ ಮಂಗಳ ನಿಮ್ಮ ಗೋಚರ ಜಾತಕದ ನವಮ ಭಾವದಲ್ಲಿ ಉದಯಿಸಲಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನಿಮ್ಮ ಭಾಗ್ಯೋದಯವಾಗಲಿದೆ. ಕೆಲಸ ಕಾರ್ಯಗಳ ನಿಮಿತ್ತ ಯಾತ್ರೆ ಸಂಭವಿಸುವ ಸಾಧ್ಯತೆ ಇದೆ. ಮತ್ತು ಈ ಯಾತ್ರೆ ನಿಮ್ಮ ಪಾಲಿಗೆ ಶುಭ ಸಾಬೀತಾಗಲಿದೆ. ಈ ಅವಧಿಯಲ್ಲಿ ಧನ ಪ್ರಾಪ್ತಿಯ ನಿಮ್ಮ ಇಚ್ಛೆ ಈಡೇರಲಿದೆ ಹಾಗೂ ವ್ಯಾಪಾರದಲ್ಲಿ ಲಾಭಾಂಶ ಹೆಚ್ಚಾಗಲಿದೆ. ಈ ಅವಧಿಯಲ್ಲಿ ನೀವು ಸ್ಥಿರಾಸ್ತಿ ಅಥವಾ ಚರಾಸ್ತಿ ಖರೀದಿಸುವ ಸಾಧ್ಯತೆ ಇದೆ. ಯಾವುದಾದರೊಂದು ಧಾರ್ಮಿಕ ಅಥವಾ ಮಂಗಳ ಕಾರ್ಯದಲ್ಲಿ ನೀವು ಭಾಗವಹಿಸುವಿರಿ.
ಧನು ರಾಶಿ: ನಿಮ್ಮ ಗೋಚರ ಜಾತಕದ ಲಗ್ನ ಭಾವದಲ್ಲಿ ಮಂಗಳನ ಈ ಉದಯ ನೆರವೇರಲಿದೆ. ಹೀಗಾಗಿ ಈ ಅವಧಿಯಲ್ಲಿ ನಿಮ್ಮ ಸಾಹಸ ಪರಾಕ್ರಮ ಹೆಚ್ಚಾಗಲಿದೆ. ಆತ್ಮ ವಿಶ್ವಾಸ ಕೂಡ ಹೆಚ್ಚಾಗಲಿದೆ. ಇದರಿಂದ ಸರಿಯಾದ ನಿರ್ಣಯ ಕೈಗೊಳ್ಳುವ ನಿಮ್ಮ ಕ್ಷಮತೆ ಹೆಚ್ಚಾಗಲಿದೆ. ಕುಟುಂಬದಲ್ಲಿಯೂ ಕೂಡ ಎಲ್ಲರ ಜೊತೆಗೆ ನಿಮ್ಮ ಸಂಬಂಧ ಸುಧಾರಿಸಲಿದೆ ಹಾಗೂ ಶುಖ ಶಾಂತಿ ನೆಲೆಸಲಿದೆ. ಈ ಅವಧಿಯಲ್ಲಿ ನಿಮ್ಮ ಬಾಳಸಂಗಾತಿಯ ಉನ್ನತಿಯಾಗಲಿದೆ. ಮಂಗಳ ನಿಮ್ಮ ಗೋಚರ ಜಾತಕದ ದ್ವಾದಶ ಹಾಗೂ ಪಂಚಮ ಭಾವಗಳಿಗೆ ಅಧಿಪತಿಯಾಗಿದ್ದಾನೆ. ಹೀಗಿರುವಾಗ ಮಕ್ಕಳಿಗೆ ಸಂಬಂಧಿಸಿದಂತೆ ಶುಭ ಸಮಾಚಾರಗಳು ನಿಮಗೆ ಸಿಗಲಿವೆ, ಈ ಅವಧಿಯಲ್ಲಿ ನೀವು ಅಪಾರ ಹಣ ಕೂಡಿಹಾಕುವಲ್ಲಿ ಯಶಸ್ಸನ್ನು ಸಾಧಿಸುವಿರಿ.
ಮೀನ ರಾಶಿ: ಮಂಗಳ ನಿಮ್ಮ ಗೋಚರ ಜಾತಕದ ಕರ್ಮ ಭಾವದಲ್ಲಿ ಉದಯಿಸಲಿದ್ದಾನೆ. ಹೀಗಾಗಿ ಒಂದು ವೇಳೆ ನೀವು ವ್ಯಾಪಾರಿಗಳಾಗಿದ್ದರೆ, ವ್ಯಾಪಾರದಲ್ಲಿ ಲಾಭಾಂಶ ದ್ವಿಗುಣಗೊಳ್ಳಲಿದೆ. ಈ ಅವಧಿಯಲ್ಲಿ ಹಣ ಹೂಡಿಕೆಯ ಒಳ್ಳೆಯ ಅವಕಾಶಗಳು ನಿಮಗೆ ಪ್ರಾಪ್ತಿಯಾಗಲಿವೆ. ಆರ್ಥಿಕ ಸ್ಥಿತಿ ಸಾಕಷ್ಟು ಬಲಿಷ್ಠವಾಗಲಿದೆ. ನಿರುದ್ಯೋಗಿಗಳಿಗೆ ನೌಕರಿಯ ಉತ್ತಮ ಅವಕಾಶಗಳು ಒದಗಿ ಬರಲಿವೆ. ಈ ಅವಧಿಯಲ್ಲಿ ನೀವು ಪ್ರಾಪಾರ್ಟಿ ಅಥವಾ ವಾಹನ ಖರೀದಿಸುವ ಸಾಧ್ಯತೆ ಇದೆ. ಆದರೆ, ಪ್ರಸ್ತುತ ನಿಮ್ಮ ಮೇಲೆ ಶನಿಯ ಸಾಡೇಸಾತಿ ನಡೆಯುತ್ತಿದ್ದು, ಆರೋಗ್ಯದ ವಿಷಯದಲ್ಲಿ ಎಚ್ಚರಿಕೆಯಿಂದ ಇರಿ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)