Mangal-Shukra Yuti: ಮಂಗಳ ಶುಕ್ರ ಯುತಿಯಿಂದ ಮೂರು ರಾಶಿಯವರಿಗೆ ಬಂಗಾರದ ಸಮಯ
ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರತಿಯೊಂದು ಗ್ರಹವೂ ಕೂಡ ನಿಗದಿತ ವೇಳೆಯಲ್ಲಿ ರಾಶಿಚಕ್ರವನ್ನು ಬದಲಾಯಿಸುತ್ತದೆ. ಈಗಾಗಲೇ ಮಕರ ರಾಶಿಯಲ್ಲಿ ನೆಲೆಸಿರುವ ಗ್ರಹಗಳ ಕಮಾಂಡರ್ ಮಂಗಳನು ಮಾರ್ಚ್ 15ರವರೆಗೆ ಇದೇ ರಾಶಿಯಲ್ಲಿ ಸಂಚರಿಸಲಿದ್ದಾನೆ. ಈ ಸಮಯದಲ್ಲಿ ಮಂಗಳ ಗ್ರಹವು ಉತ್ಕೃಷ್ಟವಾಗಿದ್ದು ರುಚಕ್ ಮಹಾಪುರುಷ ರಾಜಯೋಗವನ್ನು ರೂಪಿಸುತ್ತಿದೆ.
ಇತ್ತೀಚೆಗಷ್ಟೇ ಮಕರ ರಾಶಿಯನ್ನು ಪ್ರವೇಶಿಸಿರುವ ಐಷಾರಾಮಿ ಜೀವನಕಾರಕ ಶುಕ್ರ ಮಾರ್ಚ್ 7 ರವರೆಗೆ ಮಕರ ರಾಶಿಯಲ್ಲಿ ಸಂಚರಿಸಲಿದ್ದಾನೆ.
ಮಕರ ರಾಶಿಯಲ್ಲಿ ಮಂಗಳ-ಶುಕ್ರ ಒಟ್ಟಿಗೆ ಕೂಡಿರುವುದರಿಂದ ಮಂಗಳ-ಶುಕ್ರ ಯುತಿ ನಿರ್ಮಾಣವಾಗಿದೆ.
ಎರಡೂ ಗ್ರಹಗಳ ಸಂಯೋಗವು ದ್ವಾದಶ ರಾಶಿಯವರ ಮೇಲೆ ಶುಭ-ಅಶುಭ ಪರಿಣಾಮಗಳನ್ನು ಉಂಟು ಮಾಡಲಿದೆ. ಆದರೂ, ಮಾರ್ಚ್ 07, 2024ರವರೆಗೆ ಮೂರು ರಾಶಿಯ ಜನರು ವಿಶೇಷ ಲಾಭವನ್ನು ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ...
ಮೇಷ ರಾಶಿ : ಮಂಗಳ ಶುಕ್ರರ ಸಂಯೋಗವು ಮೇಷ ರಾಶಿಯ ಜನರಿಗೆ ವಿಶೇಷ ಪ್ರಯೋಜನವನ್ನು ನೀಡಲಿದೆ. ಈ ಸಮಯದಲ್ಲಿ ವ್ಯಾಪಾರ-ವ್ಯವಹಾರ ವೃದ್ಧಿಯಾಗುವುದರಿಂದ ಆರ್ಥಿಕ ಪ್ರಯೋಜನವನ್ನು ಪಡೆಯುವಿರಿ. ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ತೆರಳಲು ಬಯಸುವವರಿಗೆ ಶುಭ ಸಮಯ.
ಕರ್ಕಾಟಕ ರಾಶಿ: ಮಂಗಳ ಶುಕ್ರರ ಯುತಿಯು ಕರ್ಕಾಟಕ ರಾಶಿಯವರಿಗೆ ವ್ಯಾಪಾರದಿಂದ ಲಾಭ, ವಿದೇಶಿ ವ್ಯವಹಾರದಿಂದ ಬಂಪರ್ ಪ್ರಯೋಜನವನ್ನು ಕರುಣಿಸಲಿದೆ. ಈ ಸಮಯದಲ್ಲಿ ರಿಯಲ್ ಎಸ್ಟೇಟ್ ಸಂಬಂಧಿತ ವ್ಯವಹಾರದಲ್ಲಿರುವವರಿಗೆ ವಿಶೇಷವಾಗಿ ಶುಭ ಫಲಗಳು ದೊರೆಯಲಿವೆ.
ತುಲಾ ರಾಶಿ: ಮಂಗಳ ಶುಕ್ರರ ಸಂಯೋಗವು ತುಲಾ ರಾಶಿಯವರಿಗೆ ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿದೆ. ಈ ಸಮಯದಲ್ಲಿ ನೀವು ಕೈ ಹಾಕುವ ಪ್ರತಿ ಕೆಲಸದಲ್ಲೂ ಧನಾತ್ಮಕ ಶಕ್ತಿಯಿಂದಾಗಿ ಕೆಲಸಗಳು ಯಶಸ್ವಿಯಾಗಿ ಪೂರ್ಣಗೊಳ್ಳಲಿವೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.