Ruchak Rajyog: 09 ದಿನ ಈ ರಾಶಿಯವರಿಗೆ ಬಂಪರ್ ಧನಲಾಭ, ಸಂಪತ್ತು ವೃದ್ಧಿ

Wed, 03 Jul 2024-7:08 am,

ಜ್ಯೋತಿಷ್ಯ ಶಾಸ್ತ್ರದಲ್ಲಿ ಕಮಾಂಡರ್ ಗ್ರಹ ಎಂತಲೇ ಕರೆಯಲ್ಪಡುವ ಮಂಗಳ ಜೂನ್ 1, 2024 ರಂದು ಮೇಷ ರಾಶಿಗೆ ಪ್ರವೇಶಿಸಿದ್ದಾನೆ. ಜುಲೈ 12ರವರೆಗೆ ಮಂಗಳನು ಇದೇ ರಾಶಿಯಲ್ಲಿರುತ್ತಾನೆ. 

ಮೇಷ ರಾಶಿಯಲ್ಲಿ ಮಂಗಳನ ಪ್ರವೇಶದೊಂದಿಗೆ ಶುಭಕರ ರುಚಕ ರಾಜಯೋಗ ನಿರ್ಮಾಣವಾಗಿದೆ. 

ಇನ್ನೂ ಒಂಬತ್ತು ದಿನಗಳವರೆಗೆ ರುಚಕ ರಾಜಯೋಗ ಇರಲಿದ್ದು, ಈ ವೇಳೆ ನಾಲ್ಕು ರಾಶಿಯವರ ಬದುಕಿನಲ್ಲಿ ಅಷ್ಟೈಶ್ವರ್ಯ ಪ್ರಾಪ್ತಿಯಾಗಲಿದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ... 

ರುಚಕ ರಾಜಯೋಗದ ಫಲವಾಗಿ ಮೇಷ ರಾಶಿಯವರಿಗೆ ವೃತ್ತಿಯಲ್ಲಿ ಪ್ರಗತಿ, ವ್ಯಾಪಾರದಲ್ಲಿ ಬಂಪರ್ ಧನಲಾಭವನ್ನು ಕಾಣಲಿದ್ದಾರೆ. ಸಂಪತ್ತು ಕೂಡ ವೃದ್ಧಿಯಾಗಲಿದೆ. 

ರುಚಕ ರಾಜಯೋಗದಿಂದ ಕರ್ಕಾಟಕ ರಾಶಿಯ ಜನರಿಗೆ ನೀವು ಬಯಸಿದ ಉದ್ಯೋಗ ಪ್ರಾಪ್ತಿಯಾಗಲಿದೆ. ಆದಾಯದ ಮೂಲಗಳು ಹೆಚ್ಚಾಗುವುದರಿಂದ ಹೊಸ ವಾಹನ ಖರೀದಿ ಯೋಗವೂ ಇದೆ. 

ರುಚಕ ರಾಜಯೋಗವು ಸಿಂಹ ರಾಶಿಯವರಿಗೆ ಕೆಲಸದಲ್ಲಿ ಉನ್ನತ ಸ್ಥಾನವನ್ನು ನೀಡಿದರೆ, ವ್ಯಾಪಾರಸ್ಥರಿಗೆ ದೊಡ್ಡ ಆರ್ಡರ್ ನೀಡಬಹುದು. ಆದಾಯ ಹೆಚ್ಚಾಗುವುದರಿಂದ ಮನಸ್ಸಿಗೆ ನೆಮ್ಮದಿ. 

ಧನು ರಾಶಿಯ ಜನರು ರುಚಕ ರಾಜಯೋಗದ ಸಂಪೂರ್ಣ ಪ್ರಯೋಜನವನ್ನು ಪಡೆಯಲಿದ್ದು, ಈ ಸಂದರ್ಭದಲ್ಲಿ ವ್ಯಾಪಾರ ಯೋಜನೆಗಳಲ್ಲಿ ಯಶಸ್ವಿ, ಉದ್ಯೋಗ ರಂಗದಲ್ಲಿ ಕೀರ್ತಿ ಮನ್ನಣೆ ಜೊತೆಗೆ ಧನ ಲಾಭವನ್ನೂ ನಿರೀಕ್ಷಿಸಬಹುದು. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link