ವರ್ಷದಲ್ಲಿ ಒಮ್ಮೆಯಷ್ಟೇ ಸಿಗುವ ಈ ಹಣ್ಣನ್ನು ತಿಂದರೆ ಕಣ್ಣಿನ ದೃಷ್ಟಿ ಎಷ್ಟೇ ಮಂದವಾಗಿದ್ದರೂ ಶಾರ್ಪ್ ಆಗುತ್ತೆ! ಬ್ಲಡ್ ಶುಗರ್ ನಿಯಂತ್ರಿಸಲು ಸಹ ಇದು ರಾಮಬಾಣ
ಋತುಮಾನದಲ್ಲಷ್ಟೇ ಸಿಗುವ ಕೆಲವೊಂದು ಹಣ್ಣುಗಳ ಪಟ್ಟಿಯಲ್ಲಿ ಮಾವು ಕೂಡ ಒಂದು. ಮಾರುಕಟ್ಟೆಯಲ್ಲಿ ಕೆಲವೆಡೆ ವರ್ಷಪೂರ್ತಿ ಲಭ್ಯವಿದ್ದರೂ ಸಹ, ಅದರ ನೈಜ ರುಚಿ ಇರುವುದಿಲ್ಲ. ಇನ್ನು ಮಾವು ಇಷ್ಟವಿಲ್ಲ ಎನ್ನುವವರುಂಟೇ...! ಅದರ ರುಚಿಯೋ.. ಅದರ ಪರಿಮಳವೋ.. ಎಂಥವರನ್ನಾದರೂ ಮನೆಸೆಳೆಯದೆ ಇರದು.
ಮಾವು ರುಚಿಯಲ್ಲಿ ಮಾತ್ರವಲ್ಲದೆ ಆರೋಗ್ಯದ ದೃಷ್ಟಿಯಿಂದಲೂ ತುಂಬಾ ಒಳ್ಳೆಯದು. ಮಾವು ಹಣ್ಣುಗಳ ರಾಜ ಎಂದು ಕರೆಯಲ್ಪಡುತ್ತದೆ. ಬೇಸಿಗೆ ಋತುವಿನಲ್ಲಿ ಲಭ್ಯವಿರುವ ಮಾವು ಸಂಪೂರ್ಣವಾಗಿ ಬೇರೆಯೇ ರೀತಿಯ ರುಚಿಯನ್ನು ಹೊಂದಿರುತ್ತದೆ.
ರಸಭರಿತವಾದ ರುಚಿಕರವಾದ ಮಾವಿನ ಹಣ್ಣು, ಮೆಗ್ನೀಸಿಯಮ್, ಪೊಟ್ಯಾಸಿಯಮ್, ಪ್ರೊಟೀನ್, ವಿಟಮಿನ್ಸ್ ಮತ್ತು ಫೋಲೇಟ್ನಂತಹ ಅನೇಕ ಪೋಷಕಾಂಶಗಳನ್ನು ಹೊಂದಿರುತ್ತದೆ. ಇದು ದೇಹವನ್ನು ಅನೇಕ ಸಮಸ್ಯೆಗಳಿಂದ ರಕ್ಷಿಸಲು ಸಹಕಾರಿಯಾಗಿದೆ.
ರೋಗನಿರೋಧಕ ಶಕ್ತಿ: ಮಾವು ವಿಟಮಿನ್ ಸಿ ಯ ಉತ್ತಮ ಮೂಲವೆಂದು ಪರಿಗಣಿಸಲಾಗಿದೆ. ವಿಟಮಿನ್ ಸಿ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಬಲವಾದ ರೋಗನಿರೋಧಕ ಶಕ್ತಿಯು ದೇಹವನ್ನು ಅನೇಕ ರೋಗಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ.
ಜ್ಞಾಪಕಶಕ್ತಿ: ಮಾವಿನ ಹಣ್ಣಿನಲ್ಲಿರುವ ಗ್ಲುಟಾಮಿನ್ ಆಮ್ಲವು ಜ್ಞಾಪಕಶಕ್ತಿಯನ್ನು ಚುರುಕುಗೊಳಿಸಲು ಸಹಾಯ ಮಾಡುತ್ತದೆ. ನಿಮ್ಮ ಜ್ಞಾಪಕ ಶಕ್ತಿಯು ದುರ್ಬಲವಾಗಿದ್ದರೆ ಆಹಾರದಲ್ಲಿ ಮಾವನ್ನು ಸೇರಿಸಿಕೊಳ್ಳಬಹುದು.
ಮಧುಮೇಹ: ಮಧುಮೇಹದಲ್ಲಿ ಸಿಹಿ ಪದಾರ್ಥಗಳನ್ನು ತಿನ್ನುವುದನ್ನು ನಿಷೇಧಿಸಲಾಗಿದೆ. ಆದರೆ ಮಾವು ಆಂಥೋಸಯಾನಿಡಿನ್ಸ್ ಎಂಬ ಟ್ಯಾನಿನ್‌ಗಳನ್ನು ಹೊಂದಿರುತ್ತದೆ, ಇದು ಮಧುಮೇಹಕ್ಕೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ.
ಚರ್ಮ: ಬೇಸಿಗೆ ಕಾಲದಲ್ಲಿ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತವೆ. ತ್ವಚೆಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಆಹಾರದಲ್ಲಿ ಮಾವನ್ನು ಸೇರಿಸಿಕೊಳ್ಳಬಹುದು.
ಕಣ್ಣುಗಳು: ವಿಟಮಿನ್ ಎ ಮಾವಿನ ಹಣ್ಣಿನಲ್ಲಿ ಕಂಡುಬರುತ್ತದೆ. ಇದು ಕಣ್ಣುಗಳಿಗೆ ಒಳ್ಳೆಯದು. ದೃಷ್ಟಿ ಸುಧಾರಿಸಲು ಮತ್ತು ನಿಮ್ಮ ಕಣ್ಣುಗಳನ್ನು ಆರೋಗ್ಯವಾಗಿಡಲು ಮಾವನ್ನು ಸೇವಿಸಬಹುದು. ಇದು ಕಣ್ಣಿನ ಪೊರೆಯನ್ನು ಹೋಗಲಾಡಿಸಲು ಸಹ ಸಹಕಾರಿಯಾಗಿದೆ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಪರ್ಯಾಯವಾಗಿಲ್ಲ. ಹೆಚ್ಚಿನ ವಿವರಗಳಿಗಾಗಿ ಯಾವಾಗಲೂ ತಜ್ಞರು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಗೆ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.