ಈ ಹಣ್ಣಿನ ಮರದ ಎಲೆ ಬಿಳಿ ಕೂದಲನ್ನು ಮತ್ತೆ ಶಾಶ್ವತವಾಗಿ ಕಪ್ಪಾಗಿಸುವುದು!
ವಯಸ್ಸಾದಂತೆ, ದೇಹದಲ್ಲಿ ಮೆಲನಿನ್ ಎಂಬ ಅಂಶದ ಕೊರತೆಯಿಂದ ಕಪ್ಪು ಕೂದಲು ಬಿಳಿಯಾಗಲು ಪ್ರಾರಂಭಿಸುತ್ತದೆ. ಆದರೆ ಚಿಕ್ಕ ವಯಸ್ಸಿನಲ್ಲೇ ಕೂದಲು ಬಿಳಿ ಬಣ್ಣಕ್ಕೆ ತಿರುಗಲು ಪ್ರಾರಂಭಿಸಿದರೆ, ಅದು ಆಹಾರದಲ್ಲಿನ ಪೋಷಕಾಂಶಗಳ ಕೊರತೆ, ಅತಿಯಾದ ಒತ್ತಡ ಮತ್ತು ಕೆಟ್ಟ ಜೀವನಶೈಲಿಯಿಂದಾಗಿರಬಹುದು.
ಮಾವಿನ ಎಲೆಗಳು ಹಲವಾರು ರೀತಿಯ ಪೋಷಕಾಂಶಗಳನ್ನು ಹೊಂದಿದ್ದು ಅದು ಕೂದಲಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಮಾವಿನ ಎಲೆ ಕೂದಲನ್ನು ಬಿಳಿಯಾಗದಂತೆ ರಕ್ಷಿಸುತ್ತದೆ.
ಮಾವಿನ ಎಲೆಗಳನ್ನು ರುಬ್ಬಿಕೊಂಡು ಪೇಸ್ಟ್ ಮಾಡಿ, ಕೂದಲಿಗೆ ಹಚ್ಚಿ 20 ರಿಂದ 25 ನಿಮಿಷಗಳ ಕಾಲ ಬಿಡಿ. ನಂತರ ತಲೆಸ್ನಾನ ಮಾಡಿ. ವಾರಕ್ಕೊಮ್ಮೆ ಈ ಪ್ಯಾಕ್ ಬಳಸಿ. ಇದನ್ನು ಬಳಸುವುದರಿಂದ ನಿಮ್ಮ ಕೂದಲು ಕ್ರಮೇಣ ಉದ್ದ ಮತ್ತು ಕಪ್ಪಾಗುತ್ತದೆ.
15 ಮಾವಿನ ಎಲೆಗಳ ಜೊತೆಗೆ 10 ಪೇರಲ ಎಲೆಗಳನ್ನು ತೆಗೆದುಕೊಂಡು ಒಂದು ಪಾತ್ರೆಯಲ್ಲಿ ಹಾಕಿ ನೀರಿನಲ್ಲಿ ಕುದಿಸಿ. ಕ್ರಮೇಣ ನೀರಿನ ಬಣ್ಣ ಬದಲಾಗುತ್ತದೆ. ಗ್ಯಶ್ ಆಫ್ ಮಾಡಿ ತಣ್ಣಗಾಗಲು ಬಿಡಿ. ಈಗ ಹತ್ತಿಯ ಸಹಾಯದಿಂದ ಕೂದಲಿನ ಬೇರುಗಳಿಗೆ ಈ ನೀರನ್ನು ಹಚ್ಚಿ.
ಮಾವಿನ ಎಲೆಯನ್ನು ಮೇಲಿನ ಈ ಎರಡು ವಿಧಾನಗಳಲ್ಲಿ ಬಳಸುವುದರಿಂದ ಬಿಳಿ ಕೂದಲು ಬುಡದಿಂದಲೇ ಶಾಶ್ವತವಾಗಿ ಕಪ್ಪಾಗುತ್ತದೆ.