ಮಧುಮೇಹ ನಿಯಂತ್ರಣಕ್ಕೆ ಈ ಎಲೆಗಳನ್ನು ಸೇವಿಸಿ... ಅದ್ಭುತ ಪ್ರಯೋಜನ ಪಡೆಯಿರಿ

Sun, 12 Jun 2022-8:50 am,

ಮಧುಮೇಹವನ್ನು ನಿಯಂತ್ರಿಸಲು ಚೀನಾದಲ್ಲಿ ಮಾವಿನ ಎಲೆಗಳನ್ನು ಬಳಸಲಾಗುತ್ತದೆ. ಅದರ ಪೌಷ್ಟಿಕಾಂಶದ ಮೌಲ್ಯದಿಂದಾಗಿ, ಮಾವಿನ ಎಲೆಗಳ ಸಾರವು ಮಧುಮೇಹ ಮತ್ತು ಅಸ್ತಮಾವನ್ನು ಗುಣಪಡಿಸಲು ಬಹಳ ಪ್ರಯೋಜನಕಾರಿಯಾಗಿದೆ.

ಮಧುಮೇಹವನ್ನು ನಿಯಂತ್ರಿಸಲು ಮಾವಿನ ಎಲೆಗಳಿಂದ ಮನೆಮದ್ದುಗಳನ್ನು ನೀವು ಮಾಡಬಹುದು. ಮಧುಮೇಹವನ್ನು ನಿಯಂತ್ರಿಸಲು, 10 ರಿಂದ 15 ತಾಜಾ ಮಾವಿನ ಎಲೆಗಳನ್ನು ಕುದಿಸಿ ಮತ್ತು ಕುಡಿಯುವ ನೀರಿನೊಂದಿಗೆ ಸೇವಿಸಿ. ಈ ಮನೆಮದ್ದು ಉಪಯುಕ್ತತೆಯ ಬಗ್ಗೆ ಸಾಕಷ್ಟು ವೈಜ್ಞಾನಿಕ ಪುರಾವೆಗಳಿವೆ. ಆದರೆ ಈ ಸಲಹೆಯನ್ನು ತೆಗೆದುಕೊಳ್ಳುವ ಮೊದಲು, ನೀವು ವೈದ್ಯರು ಅಥವಾ ಆರೋಗ್ಯ ತಜ್ಞರನ್ನು ಸಂಪರ್ಕಿಸಬೇಕು.

ತಜ್ಞರ ಪ್ರಕಾರ, ನೀವು ದಿನಕ್ಕೆ ಒಂದು ಅಥವಾ ಎರಡು ಬಾರಿ 140-200 ಮಿಗ್ರಾಂ ಮಾವಿನ ಎಲೆಯ ಕಷಾಯ ಸೇವಿಸಬಹುದು. ನಾವು ಈಗಾಗಲೇ ಹೇಳಿದಂತೆ, ನೀವು ಅದನ್ನು ಸೇವಿಸುವ ಮೊದಲು ಆರೋಗ್ಯ ತಜ್ಞರನ್ನು ಸಂಪರ್ಕಿಸಬೇಕು. ಮಾವಿನ ಎಲೆಗಳನ್ನು ಚಹಾಕ್ಕೆ ಸೇರಿಸಬಹುದು ಅಥವಾ ಪುಡಿಯ ರೂಪದಲ್ಲಿ ಸೇವಿಸಬಹುದು.

ನೀವು ಮಾವಿನ ಎಲೆಗಳನ್ನು ಕುದಿಸಿ ಸೇವಿಸಿದರೆ ಉಸಿರಾಟದ ತೊಂದರೆಳಿಂದ ಮುಕ್ತಿ ಸಿಗುತ್ತದೆ. ಇವು ಎಲ್ಲಾ ರೀತಿಯ ಉಸಿರಾಟದ ಸಮಸ್ಯೆಗಳಿಗೆ ಒಳ್ಳೆಯದು. ವಿಶೇಷವಾಗಿ ಶೀತ, ಬ್ರಾಂಕೈಟಿಸ್ ಮತ್ತು ಅಸ್ತಮಾದಿಂದ ಬಳಲುತ್ತಿರುವವರಿಗೆ ಉತ್ತಮ. ಮಾವಿನ ಎಲೆಗಳ ಕಷಾಯವನ್ನು ಮಾಡಿ ಸ್ವಲ್ಪ ಜೇನುತುಪ್ಪದೊಂದಿಗೆ ಸೇವಿಸಿದರೆ ಕೆಮ್ಮು ಶಮನಗೊಳ್ಳುತ್ತದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link