Blood sugar Control tips : ಈ ಎಲೆಯ ಚಿಗುರನ್ನು ಜೇನುತುಪ್ಪದೊಂದಿಗೆ ಬೆರೆಸಿ ಇದೇ ಹೊತ್ತಿನಲ್ಲಿ ಸೇವಿಸಿದರೆ ಬ್ಲಡ್ ಶುಗರ್ ಗೆ ಔಷಧಿ ಬೇಕಾಗಿಲ್ಲ !
ಮಾವಿನ ಎಲೆಗಳಲ್ಲಿ ದೇಹಕ್ಕೆ ಅಗತ್ಯವಾದ ಹಲವಾರು ವಿಟಮಿನ್ ಗಳು ಸಿಗುತ್ತವೆ. ಇದರಲ್ಲಿ ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಬಿ ಮತ್ತು ಆಂಟಿಆಕ್ಸಿಡೆಂಟ್‌ಗಳಾದ ಫ್ಲೇವನಾಯ್ಡ್‌ಗಳು ಮತ್ತು ಫೀನಾಲ್‌ಗಳು ಸಹ ಕಂಡುಬರುತ್ತವೆ.
ಮಾವಿನ ಎಲೆಗಳನ್ನು ಸೇವಿಸುವುದರಿಂದ ನೀವು ಅನೇಕ ರೋಗಗಳನ್ನು ಬುಡದಿಂದಲೇ ನಿವಾರಿಸಬಹುದು. ಅದರಲ್ಲಿ ಒಂದು ಮಧುಮೇಹ. ಮಧುಮೇಹ ಇದ್ದವರು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣಕ್ಕೆ ತರಲು ಮಾವಿನ ಎಲೆಯನ್ನು ಬಳಸಬಹುದು.
ಇದಕ್ಕಾಗಿ ಮಾವಿನ ಎಲೆಯ ಚಿಗುರು ತೆಗೆದುಕೊಳ್ಳಬೇಕು. ಬಲಿತ ಎಲೆಗಳನ್ನು ತೆಗೆದುಕೊಳ್ಳಬಾರದು. ಈ ಚಿಗುರನ್ನು ಬಳಸುವ ಮೂಲಕ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡಬಹುದು.
ಒಂದು ಪಾತ್ರೆಯಲ್ಲಿ ಎರಡು ಲೋಟ ತೆಗೆದುಕೊಳ್ಳಿ. ಇದನ್ನು ಗ್ಯಾಸ್ ಮೇಲಿಟ್ಟು ಅದೇ ನೀರಿಗೆ 2 ರಿಂದ 4 ಮಾವಿನ ಎಲೆಗಳನ್ನು ಸೇರಿಸಿ. ಈ ನೀರನ್ನು ಚೆನ್ನಾಗಿ ಕುದಿಸಿ. ಹೀಗೆ ಕುದಿಸಿದ ನೀರು ಅರ್ಧ ಇಳಿದ ಮೇಲೆ ಶೋಧಿಸಿ ತಣ್ಣಗಾಗಲು ಬಿಡಿ. ಈಗ ಅದಕ್ಕೆ ಜೇನುತುಪ್ಪ ಸೇರಿಸಿ ಸೇವಿಸಿ.
ಪ್ರತಿದಿನ ಬೆಳಗ್ಗೆ ಮೇಲೆ ಹೇಳಿದ ವಿಧಾನವನ್ನು ಅನುಸರಿಸಿ ಮಾವಿನ ಚಿಗುರಿನ ನೀರು ಸೇವಿಸುತ್ತಾ ಬಂದರೆ ರಕ್ತದಲ್ಲಿನ ಸಕ್ಕರೆ ಅಂಶ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬರುತ್ತದೆ.
ಮಧುಮೇಹ ಮಾತ್ರವಲ್ಲದೆ, ಹೊಟ್ಟೆಯ ಹುಣ್ಣು, ಬಿಪಿ, ಅಸ್ತಮಾ, ಕ್ಯಾನ್ಸರ್ ನಂಥಹ ರೋಗಗಳ ಅಪಾಯವನ್ನು ಕೂಡಾ ಇದು ಕಡಿಮೆ ಮಾಡುತ್ತದೆ. ಮಾತ್ರವಲ್ಲ ಕೂದಲಿಣ ಆರೋಗ್ಯಕ್ಕೂ ಇದು ಪ್ರಯೋಜನಕಾರಿ. (ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.)