ಮಾವಿನ ಹಣ್ಣಿನ ಸಿಪ್ಪೆಯಲ್ಲಿದೆ ಮಧುಮೇಹಕ್ಕೆ ಮದ್ದು.. ಇದರ ಜೊತೆ ಬೆರೆಸಿ ಸೇವಿಸಿದರೆ ಹೆಚ್ಚಾಗೋದೇ ಇಲ್ಲ ಬ್ಲಡ್ ಶುಗರ್ !
ಮಾವಿನ ಸಿಪ್ಪೆಯು ವಿಟಮಿನ್ ಎ, ಸಿ, ಕೆ, ಫೋಲೇಟ್, ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್‌ನಂತಹ ಪೋಷಕಾಂಶಗಳನ್ನು ಹೇರಳವಾಗಿ ಒಳಗೊಂಡಿದೆ. ಮಾವಿನ ಸಿಪ್ಪೆಯಲ್ಲಿ ಅದರ ಪಲ್ಪ್‌ಗಿಂತ ಹೆಚ್ಚಿನ ಪೋಷಕಾಂಶವಿದೆ.
ಯುನಿವರ್ಸಿಟಿ ಆಫ್ ಕ್ವೀನ್ಸ್‌ಲ್ಯಾಂಡ್ ಸ್ಕೂಲ್ ಆಫ್ ಫಾರ್ಮಸಿಯ ಸಂಶೋಧನೆಯ ಪ್ರಕಾರ, ಮಾವಿನ ಸಿಪ್ಪೆಯು ತೂಕ ಇಳಿಸಲು ಸಹ ಸಹಾಯ ಮಾಡುತ್ತದೆ. ಇವು ಕೊಬ್ಬಿನ ಕೋಶಗಳ ರಚನೆಯನ್ನು ಕಡಿಮೆ ಮಾಡುತ್ತದೆ.
ಮಾವಿನ ಸಿಪ್ಪೆಯಲ್ಲಿ ಶಕ್ತಿಯುತವಾದ ಉತ್ಕರ್ಷಣ ನಿರೋಧಕಗಳಾದ ಮ್ಯಾಂಗಿಫೆರಿನ್, ನೊರಾತಿರಿಯೋಲ್ ಮತ್ತು ರೆಸ್ವೆರಾಟ್ರೋಲ್ ಇವೆ. ಇದು ಕೆಲವು ರೀತಿಯ ಕ್ಯಾನ್ಸರ್ ತಡೆಗಟ್ಟಲು ಸಹಾಯಕವಾಗಿದೆ.
ಮಾವಿನ ಸಿಪ್ಪೆಯು ಹೆಚ್ಚಿನ ಪ್ರಮಾಣದ ಫೈಬರ್ ಅನ್ನು ಹೊಂದಿರುತ್ತದೆ. ಹಾರ್ವರ್ಡ್ ಅಧ್ಯಯನದ ಪ್ರಕಾರ, ಮಾವಿನ ಸಿಪ್ಪೆಯನ್ನು ಸೇವಿಸುವ ಜನರಲ್ಲಿ ಹೃದ್ರೋಗದ ಅಪಾಯ ಕಡಿಮೆಯಾಗಿದೆ.
ಮಾವಿನ ಸಿಪ್ಪೆಯ ಸೇವನೆಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹ ಸಹಾಯ ಮಾಡುತ್ತದೆ. ಮಾವಿನ ತಿರುಳನ್ನು ಸೇವಿಸುವುದರಿಂದ ಮಧುಮೇಹ ರೋಗಿಗಳಿಗೆ ಪ್ರಯೋಜನವಾಗುವುದಿಲ್ಲ. ಅದೇ ಮಾವಿನ ಹಣ್ಣಿನ ಸಿಪ್ಪೆಯ ಸೇವನೆಯು ಮಧುಮೇಹ ರೋಗಿಗಳಿಗೆ ಪ್ರಯೋಜನಕಾರಿಯಾಗಿದೆ.
ಮಾವಿನ ಸಿಪ್ಪೆಯನ್ನು ಒಣಗಿಸಿ. ಪುಡಿ ಮಾಡಿ ಇಟ್ಟುಕೊಳ್ಳಬೇಕು. ಇದನ್ನು ಮೊಸರಿನೊಂದಿಗೆ ಬೆರೆಸಿ ಫೇಸ್ ಪ್ಯಾಕ್ ಹಾಕಿಕೊಂಡರೆ ಮುಖಕ್ಕೆ ಹೊಳಪು ತರುತ್ತದೆ. ಇದು ನೈಸರ್ಗಿಕ ರೀತಿಯಲ್ಲಿ ಚರ್ಮದ ಕಲೆಗಳ ಸಮಸ್ಯೆಯನ್ನು ನಿವಾರಿಸುತ್ತದೆ.
ಮಾವಿನ ಸಿಪ್ಪೆಯನ್ನು ಚೆನ್ನಾಗಿ ತೊಳೆಯಿರಿ ರುಬ್ಬಿ. ಅದನ್ನು ನಿಮ್ಮ ನೆಚ್ಚಿನ ಸ್ಮೂಥಿ ಜೊತೆಗೆ ಬೆರೆಸಿ ಸೇವಿಸಿ. ಇದಲ್ಲದೇ ಮಾವಿನ ಸಿಪ್ಪೆಯನ್ನು ಚೆನ್ನಾಗಿ ತೊಳೆದ ನಂತರ ಅದಕ್ಕೆ ಒಂದಿಷ್ಟು ಮಸಾಲೆ ಸೇರಿಸಿ ಫ್ರೈ ಮಾಡಿಯೂ ತಿನ್ನಬಹುದು.
ಸೂಚನೆ: ಪ್ರಿಯ ಓದುಗರೇ, ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.