ಥೇಟ್‌ ಅಪ್ಪುವಿನಂತೆ ಇದ್ದಾನೆ ಈ ಬಾಲಕ! ಅದೇ ಧ್ವನಿ.. ಅದೇ ನಗು.. ಪುನೀತ್‌ ರಾಜ್‌ಕುಮಾರ್‌ ಪ್ರತಿರೂಪ ಈ ಯುವಕ..!

Sun, 24 Nov 2024-7:13 am,

Puneeth rajkumar: ಪ್ರಪಂಚದಲ್ಲಿ ಒಬ್ಬ ವ್ಯಕ್ತಿಯನ್ನೆ ಹೋಲುವಂತೆ 7 ಜನರು ಇರುತ್ತಾರೆ ಎನ್ನುವುದನ್ನು ನಾವು ಕೇಳಿರುತ್ತೇವೆ, ಆದರೆ ನೀವು ಎಂದಾದರೂ ಒಬ್ಬ ವ್ಯಕ್ತಿಯನ್ನೆ ಹೋಲುವ ಮೊತ್ತೊಬ್ಬ ವ್ಯಕ್ತಿಯನ್ನಯ ನೋಡಿ ಕನ್‌ಫ್ಯೂಸ್‌ ಆಗಿದ್ದೀರಾ..? ಇಂತಹದ್ದೆ ಒಂದು ಘಟನೆ ಇದೀಗ ಸಾಮಾಜಿಕ ಜಾಲಾತಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.  

ಸೆಲೆಬ್ರಿಟಿಗಳಲ್ಲಿಯೂ ಒಬ್ಬರನ್ನು ಹೋಲುವ ಮತ್ತೊಬ್ಬರು ಸಾಕಷ್ಟು ಮಂದಿ ಇದ್ದಾರೆ, ಒಬ್ಬರಿಗೊಬ್ಬರು ಸಂಬಂಧವಿಲ್ಲದಿದ್ದರು ಹಲವಾರು ಸೆಲೆಬ್ರಿಟಿಗಳು ಥೇಟ್‌ ಒಂದೇ ರೀತಿ ಕಾಣುತ್ತಾರೆ.   

ಅಷ್ಟೇ ಯಾಕೆ ಥೇಟ್‌ ಸೆಲೆಬ್ರಿಟಿಗಳನ್ನು ಹೋಲುವ ಅದೆಷ್ಟೋ ಸಾರ್ವಜನಿಕರು ನಮ್ಮ ನಿಮ್ಮ ಮಧ್ಯೆ ಇದ್ದಾರೆ, ಅಂಬಿ, ವಿಷ್ಣು ದಾದಾ, ರವಿಚಂದ್ರನ್‌ ಹೀಗೆ ಹಲವರ ರೀತಿ ಇರುವ ಅನೇಕರು. ಅವರ ವೇಷ ಧರಿಸಿ ಅವರ ಡೈಲಾಗ್ಸ್‌ ಹೊಡೆಯುತ್ತಾ ಸಣ್ಣ ಪುಟ್ಟ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾ ಹಣ ಸಂಪಾದನೆಗಾಗಿ ಜನರನ್ನು ರಂಜಿಸುತ್ತಾ ಇರುತ್ತಾರೆ.  

ಆದರೆ, ಇಲ್ಲೊಬ್ಬ ಪುಟ್ಟ ಬಾಲಕ ಥೇಟ್‌ ಅಪ್ಪುವಿನಂತೆ ಇದ್ದಾನೆ, ಅಪ್ಪು ಬೆಟ್ಟದ ಹೂ ಎಂಬ ಸಿನಿಮಾದಲ್ಲಿ ಬಾಲ ನಟನಾಗಿ ಮಿಂಚಿದ್ದರು, ಈ ಸಿನಿಮಾದಲ್ಲಿನ ಅವರ ಆಕ್ಟಿಂಗ್‌ ಅವರ ನಗು ಇನ್ನೂ ಕಣ್ಣ ಮುಂದೆ ಇದೆ. ಆದರೆ ಅಪ್ಪುವಿನ ಈ ಪಾತ್ರಕ್ಕೆ ಹೋಲುವ ಪುಟಾಣಿ ಬಾಲಕನೊಬ್ಬ ಇದ್ದಾನೆ, ಇದೀಗ ಈತನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.  

ಅಭಿಷೇಕ್‌ ತೀರ್ಥಹಳ್ಳಿ ಎಂಬುವವರು ಈ ಪುಟ್ಟ ಬಾಲಕನ ಜೊತೆ ಮಾತಿಗಿಳಿದ್ದಿದ್ದು, ವಿಡಿಯೋವನ್ನು ರೆಕಾರ್ಡ್‌ ಮಾಡಿದ್ದಾರೆ, ಈ ವಿಡಿಯೋದಲ್ಲಿರುವ ಬಾಲಕನ ನಗು, ಧ್ವನಿ ಹಾಗೂ ನೋಟ ಎಲ್ಲವೂ ಅಪ್ಪುವನ್ನು ಬೆಟ್ಟದ ಹೂ ಸಿನಿಮಾದಲ್ಲಿ ನೋಡಿದಂತೆ ಭಾಸವಾಗುತ್ತದೆ.  

ಈ ಪುಟ್ಟ ಬಾಲಕನ ಜೊತೆ ಮಾತನಾಡುತ್ತಾ ಸಾಮಜಿಕ ಜಾಲತಾಣ ಬಳಕೆದಾರರು ಈ ವಿಡಿಯೋವನ್ನು ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ, ಈ ವಿಡಿಯೋವನ್ನು ಪೋಸ್ಟ್‌ ಮಾಡಿದ್ದೇ ತಡ, ಜನರು ಕಾಮೆಂಟ್‌ಗಳ ಮಹಾಪೂರವನ್ನೆ ಹರಿಸುತ್ತಿದ್ದಾರೆ.  

ಅಭಿಷೇಕ್‌ ತೀರ್ಥಹಳ್ಳಿ ಅವರು ಗ್ರಾಮೀಣ ಭಾಗದ ಮಕ್ಕಳಿಗೆ ಕಲೆಯನ್ನು ತಿಳಿಸುವ ಪ್ರಾಜೆಕ್ಟ್‌ಗಾಗಿ ಕುಂದಾಪುರ ಬಳಿಯ ರಟ್ಟಾಡಿಗೆ ಆಗಮಿಸಿದ್ದರು, ಈ ವೇಳೆ ಪುಟ್ಟ ಹುಡುಗನೊಬ್ಬ ಅವರಿಗೆ ಥೇಟ್‌ ಅಪ್ಪು ಅವರಂತೆ ಕಾಣಿಸಿದ್ದಾನೆ, ಇದನ್ನು ನೋಡಿ ಅಚ್ಚರಿಗೊಂದ ಅವರು ಆ ಪುಟ್ಟ ಬಾಲಕನ ಜೊತೆ ಮಾತಿಗಿಳಿದಿದ್ದಾರೆ.  

ಸದ್ಯ ವೈರಲ್‌ ಆಗುತ್ತಿರುವ ಈ ಪುಟ್ಟ ಹುಡುಗನ ಹೆಸರು ಮಣಿಕಂಠ.. ವಿಡಿಯೋವನ್ನು ರೆಕಾರ್ಡ್‌ ಮಾಡಿದ ಅಭಿಷೇಕ್‌ ಅವರು ಅಪ್ಪು ಅವರನ್ನು ಹೋಲುವಂತಹ ಈ ಹುಡುಗನ ವಿಡಿಯೋವನ್ನು ಸೆರೆ ಹಿಡಿದಿದ್ದು, ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಸದ್ಯ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link