Mankurad mangoes: ಅಬ್ಬಬ್ಬಾ.. ರುಚಿಯಲ್ಲಿ ಸಾಟಿಯೇ ಇಲ್ಲದ ಈ ಮಾವಿನ ಹಣ್ಣಿನ ಬರೋಬ್ಬರಿ ಬೆಲೆ 6000 ರೂ.!

Mon, 27 Feb 2023-4:02 pm,

ಗೋವಾದಲ್ಲಿ ಮಂಕುರಾಡ್ ಮಾವಿನಹಣ್ಣನ್ನು ಒಂದು ಡಜನ್’ಗೆ 6 ಸಾವಿರ ರೂಪಾಯಿಗಳಂತೆ ಮಾರಾಟ ಮಾಡಲಾಗುತ್ತಿದೆ. ಆದರೆ ಈ ಸಮಯದಲ್ಲಿ ಸಾಮಾನ್ಯ ಮನುಷ್ಯನ ಈ ಹಣ್ಣನ್ನು ಖರೀದಿಸಲು ಕಷ್ಟಪಡಬೇಕಾದೀತು. ಮಂಕುರಾಡ್ ಪ್ರಭೇದದ ಒಂದು ಡಜನ್ ಹಳದಿ ರಸಭರಿತವಾದ ಹಣ್ಣನ್ನು ಪಣಜಿ ಮಾರುಕಟ್ಟೆಯಲ್ಲಿ ಪ್ರತಿ ಡಜನ್ಗೆ 6000 ರೂ. ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಅಂದರೆ ಒಂದು ಹಣ್ಣಿಗೆ ಸುಮಾರು 500 ರೂ. ಪಾವತಿಸಬೇಕು.

ಪಣಜಿಯ ಹಣ್ಣು ಮಾರುಕಟ್ಟೆಯ ಮಾರಾಟಗಾರರು ಈಗ ಮಂಕುರಾಡ್ ಮಾವಿನ ಬೆಲೆಯು 6000 ರೂ.ನಿಂದ 5000 ರೂ.ಗೆ ಇಳಿದಿದೆ ಎಂದು ಹೇಳಿದ್ದಾರೆ. ಕಳೆದ ವಾರ, ನಾವು 6000 ರೂಪಾಯಿಗಳಿಗೆ ಮಾರಾಟ ಮಾಡುತ್ತಿದ್ದೆವು. ಈಗ ದರವು 5000 ರೂಪಾಯಿಗಳಿಗೆ ಇಳಿದಿದೆ. ಏಕೆಂದರೆ ಈಗ ಎರಡನೇ ವಿಧದ ಮಾವಿನಹಣ್ಣು ಸಹ ಮಾರುಕಟ್ಟೆಯಲ್ಲಿ ಬಂದಿದೆ” ಎಂದು ಹೇಳಿದ್ದಾರೆ.

ಕೆಲವು ಜನರು ಪ್ರಸ್ತುತ ಮಂಕುರಾಡ್ ಮಾವಿನಹಣ್ಣನ್ನು ಮಾರಾಟ ಮಾಡುತ್ತಿದ್ದಾರೆ. ಇತರ ಅನೇಕ ಸ್ಥಳೀಯ ಮಾವಿನ ಪ್ರಭೇದಗಳು ಇನ್ನೂ ಮಾರುಕಟ್ಟೆಗೆ ಬಂದಿಲ್ಲ.

ಒಂದು ಮಂಕುರಾಡ್ ಮಾವಿನಹಣ್ಣಿನ ಬೆಲೆ 400 ರೂ ನಿಂದ 500 ರೂ ವರೆಗೆ ಇರುತ್ತದೆ. “ನಾವು ಉತ್ತಮ ಮಾರಾಟವನ್ನು ಮಾಡುತ್ತೇವೆ. ಆದರೆ ಅದರ ಬೆಲೆಯನ್ನು ನೀಡುವವರನ್ನು ಮಾತ್ರ ಖರೀದಿಸಬಹುದು” ಎಂದು ಮಾರಾಟಗಾರರು ಹೇಳುತ್ತಾರೆ.

ಅಮೆರಿಕಾದಲ್ಲಿ ವಾಸಿಸುವ ಮಹಿಳೆಯೊಬ್ಬರು ಹೊರಡುವ ಮೊದಲು ಆರು ಮಂಕುರಾಡ್ ಮಾವಿನಹಣ್ಣನ್ನು ಖರೀದಿಸಿದ್ದಾರೆ. “ಮಂಕುರಾಡ್ ಗಿಂತ ಉತ್ತಮವಾದದ್ದೇನೂ ಇಲ್ಲ. ಅಮೆರಿಕಾದಲ್ಲಿ ಅದ್ಭುತವಾದ ಮಾವಿನಹಣ್ಣು ಕಂಡುಬಂದರೂ, ಮಂಕುರಾಡ್ ಮಾವಿನಹಣ್ಣನ್ನು ಅವುಗಳಿಗೆ ಹೋಲಿಸಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.

ಪ್ರಸ್ತುತ, ದುಬಾರಿ ಮಂಕುರಾಡ್ ಮಾವಿನಹಣ್ಣನ್ನು ಪ್ರತಿ ತುಂಡಿಗೆ 400 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇತರ ಪ್ರಭೇದಗಳನ್ನು ಪ್ರತಿ ಕೆಜಿಗೆ 300-500 ರೂಗೆ ಮಾರಾಟವಾಗುತ್ತಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link