ಬ್ಲಡ್ ಶುಗರ್ ಎಷ್ಟೇ ಹೈ ಇದ್ದರೂ ದಿಢೀರ್ ಅಂತ ನಾರ್ಮಲ್‌ಗೊಳಿಸುತ್ತೆ ಈ ಸೊಪ್ಪು: ಕಿಡ್ನಿ ಸ್ಟೋನ್, ಬೊಜ್ಜು ಕರಗಿಸಲು ಸಹ ಇದು ರಾಮಬಾಣವಿದ್ದಂತೆ
ಔಷಧೀಯ ಗುಣಗಳನ್ನು ಹೊಂದಿರುವ ಅನೇಕ ಮರಗಳು ಮತ್ತು ಸಸ್ಯಗಳಿವೆ. ಅದರಲ್ಲಿ ಕೆಲವು ಎಲೆಗಳು, ತೊಗಟೆಗಳು ಮತ್ತು ಬೀಜಗಳು ದೇಹದ ಒಂದಲ್ಲ ಒಂದು ಕಾಯಿಲೆಯನ್ನು ಗುಣಪಡಿಸುತ್ತವಂತಹ ಶಕ್ತಿಯನ್ನು ಹೊಂದಿರುತ್ತವೆ, ಅಂತಹ ಸಸ್ಯಗಳಲ್ಲಿ ಮಿಮೋಸಾ ಅಥವಾ ನಾಚಿಕೆ ಮುಳ್ಳು ಕೂಡ ಒಂದು.
ನಾಚಿಕೆ ಮುಳ್ಳನ್ನು ಇಂಗ್ಲೀಷ್ ಭಾಷೆಯಲ್ಲಿ ಟಚ್ ಮಿ ನಾಟ್ ಎಂದು ಕರೆಯಲಾಗುತ್ತದೆ. ನೋಡೋದಕ್ಕೆ ಪುಟ್ಟ ಸಸ್ಯ. ಆದರೆ ಇದರ ಪ್ರಭಾವ ಅಗಾಧವಾಗಿದೆ.
ಪೈಲ್ಸ್, ಮಧುಮೇಹ, ಒತ್ತಡದಂತಹ ಅನೇಕ ಪ್ರಮುಖ ಕಾಯಿಲೆಗಳನ್ನು ದೂರವಿಡಲು ಇದು ಸಹಾಯ ಮಾಡುತ್ತದೆ. ಹೆಚ್ಚಿನ ಜನರಿಗೆ ಇದರ ಆರೋಗ್ಯ ಪ್ರಯೋಜನದ ಬಗ್ಗೆ ತಿಳಿದಿಲ್ಲ. ಈ ವರದಿಯಲ್ಲಿ ಮುಟ್ಟಿದರೆ ಮುನಿ ಸಸ್ಯದ ಆರೋಗ್ಯ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ.
ಮಿಮೋಸಾ ಸಸ್ಯವು ಮಧುಮೇಹ ವಿರೋಧಿ ಗುಣಗಳನ್ನು ಹೊಂದಿದೆ. ಇದರ ಸೇವನೆಯು ಮಧುಮೇಹವನ್ನು ನಿಯಂತ್ರಿಸುತ್ತದೆ ಎಂದು ಅನೇಕ ಅಧ್ಯಯನಗಳಲ್ಲಿ ಅಂಗೀಕರಿಸಲ್ಪಟ್ಟಿದೆ. ಇದು ರಕ್ತದಲ್ಲಿನ ಗ್ಲೂಕೋಸ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಇದು ಆತಂಕ-ವಿರೋಧಿ ಔಷಧೀಯ ಗುಣಗಳನ್ನು ಹೊಂದಿದೆ. ಆದ್ದರಿಂದ ಈ ಸಸ್ಯವನ್ನು ಸ್ಪರ್ಶಿಸಿದರೂ ಸಹ ಒತ್ತಡದಿಂದ ಮುಕ್ತರಾಗುತ್ತಾರೆ ಎಂದು ಹೇಳಲಾಗುತ್ತದೆ.
ಗಾಯವನ್ನು ಗುಣಪಡಿಸಲು ಸಹಾಯ ಮಾಡುತ್ತದೆ ಮತ್ತು ಕೀಲು ನೋವಿನಿಂದ ಪರಿಹಾರವನ್ನು ನೀಡಲು ಸಹ ಈ ಸಸ್ಯ ಸಹಕಾರಿ. ಜೊತೆಗೆ ಮುಟ್ಟಿನ ಸಮಯದಲ್ಲಿ ಹೊಟ್ಟೆ ನೋವಿನಿಂದ ಪರಿಹಾರವನ್ನು ನೀಡುತ್ತದೆ.
ಮಿಮೋಸಾವನ್ನು ಮೂರು ರೀತಿಯಲ್ಲಿ ಸೇವಿಸಬಹುದು. ಅದರ ಪುಡಿ ಮಾಡುವ ಮೂಲಕ, ಅದರ ಎಲೆಗಳನ್ನು ಜಗಿಯುವ ಮೂಲಕ ಅಥವಾ ಅದರಿಂದ ಕಷಾಯ ತಯಾರಿಸುವ ಮೂಲಕ.
ಸೂಚನಡ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ದೃಢೀಕರಿಸುವುದಿಲ್ಲ.