Marriage Horoscope 2022: ಈ 5 ರಾಶಿಯವರಿಗೆ ಮದುವೆಯ ಯೋಗವಿದೆ, ನೀವೂ ಇದ್ದೀರಾ ನೋಡಿ
ಜೀವನ ಸಂಗಾತಿಯನ್ನು ಪಡೆಯಲು ಕಾಯುತ್ತಿರುವ ಕರ್ಕ ರಾಶಿಯವರಿಗೆ 2022 ಅದ್ಭುತವಾಗಿರಲಿದೆ. ಅವರು ಜೀವನ ಸಂಗಾತಿಯನ್ನು ಭೇಟಿಯಾಗುವುದು ಮಾತ್ರವಲ್ಲ, ಮದುವೆಯಾಗುತ್ತಾರೆ. ಏಪ್ರಿಲ್ ತಿಂಗಳ ನಂತರ ಈ ರಾಶಿಯವರು ವೈವಾಹಿಕ ಜೀವನಕ್ಕೆ ಕಾಲಿಡುವ ಸಾಧ್ಯತೆಗಳು ಹೆಚ್ಚಿದೆ.
ಸಿಂಹ ರಾಶಿಯವರ ಮದುವೆಯಲ್ಲಿ ಇದುವರೆಗೆ ಬರುತ್ತಿದ್ದ ಅಡೆತಡೆಗಳು ಈಗ ನಿವಾರಣೆಯಾಗಲಿವೆ. ಶನಿಯ ರಾಶಿ ಬದಲಾದ ತಕ್ಷಣ ಮದುವೆಯ ಸಾಧ್ಯತೆಗಳು ರೂಪುಗೊಳ್ಳುತ್ತವೆ ಮತ್ತು ಏಪ್ರಿಲ್ ಮತ್ತು ಜುಲೈ ನಡುವೆ ಮದುವೆಯಾಗುವ ಹೆಚ್ಚಿನ ಅವಕಾಶಗಳಿವೆ.
ಕನ್ಯಾ ರಾಶಿಯ ಜನರಿಗೆ ಹೊಸ ವರ್ಷದಲ್ಲಿ ಮದುವೆಯ ಸಂಭ್ರಮ ಜೋರಾಗಿರಲಿದೆ. ಜೀವನ ಸಂಗಾತಿಯ ಹುಡುಕಾಟ ಮುಗಿದು ಹೊಂದಾಣಿಕೆ, ಮದುವೆಯಂತಹ ಪರಿಸ್ಥಿತಿ ನಿರ್ಮಾಣವಾಗಲಿದೆ. ಇವರು ಖುಷಿ ಖುಷಿಯಿಂದ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.
ವೃಶ್ಚಿಕ ರಾಶಿಯ ಜನರು ಜೀವನ ಸಂಗಾತಿಯನ್ನು ಹುಡುಕಲು ಕೆಲವು ಪ್ರಯತ್ನಗಳನ್ನು ಮಾಡಬೇಕಾಗಬಹುದು ಆದರೆ ಯಶಸ್ಸು ಖಂಡಿತವಾಗಿಯೂ ಸಿಗುತ್ತದೆ. ಇದರೊಂದಿಗೆ ಈ ಸಂಬಂಧವು ನಿಮ್ಮ ಜೀವನದಲ್ಲಿ ಅದೃಷ್ಟವನ್ನು ತರುತ್ತದೆ. ಖುಷಿ ಖುಷಿಯಿಂದ ಈ ರಾಶಿಯವರು ಜೀವನ ಸಂಗಾತಿ ಜೊತೆಗೆ ಸಹಬಾಳ್ವೆಯನ್ನು ನಡೆಸುತ್ತಾರೆ.
ಮೀನ ರಾಶಿಯವರ ಮದುವೆಯನ್ನು ಈ ವರ್ಷ ನಿಶ್ಚಿತವೆಂದು ಪರಿಗಣಿಸಬಹುದು. ಅವರು ವರ್ಷದ ಮೊದಲಾರ್ಧದಲ್ಲಿ ಜೀವನ ಸಂಗಾತಿಯನ್ನು ಪಡೆಯುತ್ತಾರೆ ಮತ್ತು ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.