Marriage Tips: ವಿವಾಹಕ್ಕೆ ಸಿದ್ಧರಾಗಿದ್ದೀರಾ? ಹಾಗಾದರೆ ಭಾವೀ ಸಂಗಾತಿಗೆ ಚಾಚು ತಪ್ಪದೆ ಈ ವಿಷಯಗಳನ್ನು ಕೇಳಿ!
ವೃತ್ತಿ ಮತ್ತು ಹಣದ ಬಗ್ಗೆ ಚರ್ಚಿಸಿ: ನೀವು ಮದುವೆಯಾಗಲು ಯೋಚಿಸುತ್ತಿದ್ದರೆ, ಖಂಡಿತವಾಗಿಯೂ ಹಣಕಾಸಿನ ವಿಷಯಗಳ ಬಗ್ಗೆ ಮಾತನಾಡಿ. ಇದಲ್ಲದೆ, ವೃತ್ತಿಜೀವನದ ಬಗ್ಗೆ ನಿಮ್ಮ ಸಂಗಾತಿಯೊಂದಿಗೆ ಚರ್ಚಿಸಿ.
ಕುಟುಂಬ ಯೋಜನೆ ಕುರಿತು ಚರ್ಚಿಸಿ: ವಿವಾಹದ ಮೊದಲು ನಿಮ್ಮ ಸಂಗಾತಿಯೊಂದಿಗೆ ಕುಟುಂಬ ಯೋಜನೆಯ ಕುರಿತು ಚರ್ಚಿಸುವುದು ತುಂಬಾ ಮುಖ್ಯ ಮತ್ತು ಇದು ನಾಚಿಕೆಪಟ್ಟುಕೊಳ್ಳುವ ವಿಷಯ ಅಲ್ಲ. ಎಷ್ಟು ಮಕ್ಕಳು ಬೇಕು, ಅವರನ್ನು ಹೇಗೆ ಬೆಳೆಸಬೇಕು, ಮಕ್ಕಳ ನಡುವೆ ಎಷ್ಟು ಅಂತರವಿರಬೇಕು ಇತ್ಯಾದಿಗಳನ್ನು ಚರ್ಚಿಸುವುದು ಯಾವುದಕ್ಕೂ ಉತ್ತಮ.
ಸ್ವಭಾವ-ಪ್ರಕೃತಿಯ ಬಗ್ಗೆ ಚರ್ಚಿಸಿ: ಮದುವೆಗೆ ಮೊದಲು ಪರಸ್ಪರರ ಪ್ರಕೃತಿ ಮತ್ತು ಸ್ವಭಾವದ ಬಗ್ಗೆ ಚರ್ಚೆ ನಡೆಯಬೇಕು. ಏಕೆಂದರೆ ಮದುವೆಯ ನಂತರ ಸಮಸ್ಯೆಗಳು ಎದುರಾಗಬಹುದು. ಹೀಗಾಗಿ ಸಂಗಾತಿಯ ಅಭ್ಯಾಸಗಳನ್ನು ನೀವು ತಿಳಿದಿದ್ದರೆ, ನಂತರ ಸಂಬಂಧವು ಉತ್ತಮವಾಗಿರುತ್ತದೆ.
ಕೆಲಸ ಮತ್ತು ಸಮಯದ ಬಗ್ಗೆ ಚರ್ಚಿಸಿ: ಮದುವೆಯ ನಂತರ ಉದ್ಯೋಗ ಮತ್ತು ಸಮಯದ ಸಮಸ್ಯೆ ಬಂದಾಗಲೆಲ್ಲಾ ಸಂಬಂಧದಲ್ಲಿ ಉದ್ವಿಗ್ನತೆ ಹೆಚ್ಚಾಗುತ್ತದೆ. ಇದನ್ನು ತಪ್ಪಿಸಲು, ನಿಮ್ಮ ಭಾವಿ ಸಂಗಾತಿಯ ಕೆಲಸ, ಶಿಫ್ಟ್ ಮತ್ತು ಸಮಯದ ಬಗ್ಗೆ ಮುಂಚಿತವಾಗಿ ಚರ್ಚಿಸಿಕೊಳ್ಳುವುದು ಯಾವುದಕ್ಕೂ ಉತ್ತಮ.