Mars Transit 2023: ಮೇ 10 ರಂದು ಚಂದಿರನ ಅಂಗಳಕ್ಕೆ ಮಂಗಳನ ಪ್ರವೇಶ, 3 ರಾಶಿಗಳ ಜನರ ಜೀವನದಲ್ಲಿ ಕಾಂಚಾಣದ ಭಾರಿ ಝಣಝಣ!

Thu, 13 Apr 2023-6:50 pm,

ಸಿಕುಂಭ ರಾಶಿ: ನಿಮ್ಮ ಗೋಚರ ಜಾತಕದ ಷಷ್ಟಮ ಭಾವದಲ್ಲಿ ಮಂಗಳನ ಈ ಸಂಕ್ರಮಣ ನಡೆಯಲಿದೆ. ಹೀಗಿರುವಾಗ ಈ ರಾಶಿಯ ಸ್ಥಳೀಯರಿಗೆ ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ಸು ಸಿಗಲಿದೆ. ನಿಮ್ಮ ಎದುರಾಳಿಗಳು ಕೂಡ ಈ ಅವಧಿಯಲ್ಲಿ ವಿಫಲರಾಗಲಿದ್ದಾರೆ. ಕಾರ್ಯಕ್ಷೇತ್ರದಲ್ಲಿ ನಿಮ್ಮ ಕೆಲಸಕ್ಕೆ ಪ್ರಶಂಸೆ ವ್ಯಕ್ತವಾಗಲಿದೆ. ಈ ಹಿನ್ನೆಲೆ ನಿಮಗೆ ಇಂಕ್ರಿಮೆಂಟ್ ಹಾಗೂ ಬಡ್ತಿಯ ಭಾಗ್ಯ ಒದಗಿ ಬರಲಿದೆ. ಆದರೆ, ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ. ಬಿಸ್ನೆಸ್ ಗೆ ಸಂಬಂಧಿಸಿದಂತೆ ನೀವು ಯಾವುದಾದರೊಂದು ಯಾತ್ರೆ ನಡೆಸಬಹುದಾದೀತು. ಕುಟುಂಬಸ್ಥರ ಜೊತೆಗೆ ಉತ್ತಮ ಸಮಯ ಕಳೆಯುವಲ್ಲಿ ಯಶಸ್ವಿಯಾಗುವಿರಿ. 

ಮೀನ ರಾಶಿ: ನಿಮ್ಮ ಜಾತಕದ ಪಂಚಮ ಭಾವದಲ್ಲಿ ಮಂಗಳನ ಈ ಗೋಚರ ನೆರೆವೆರುತ್ತಿದೆ. ಹೀಗಾಗಿ ನಿಮಗೆ ಈ ಅವಧಿಯಲ್ಲಿ ಅಪಾರ ಧನ-ಧಾನ್ಯ ಪ್ರಾಪ್ತಿಯಾಗಲಿದೆ. ದೀರ್ಘಾವಧಿಯಿಂದ ನೆನೆಗುದಿಗೆ ಬಿದ್ದ ಕೆಲಸಗಳು ಪೂರ್ಣಗೊಳ್ಳಲಿವೆ. ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುವ ಜನರಿಗೆ ಯಶಸ್ಸು ಸಿಗಲಿದೆ.   

ಕನ್ಯಾ ರಾಶಿ- ಮಂಗಳನ ಈ ಗೋಚರ ನಿಮ್ಮ ಜಾತಕದ ಏಕಾದಶ ಭಾವದಲ್ಲಿ ನಡೆಯುತ್ತಿದೆ. ಹೀಗಿರುವಾಗ ನಿಮ್ಮ ಎಲ್ಲಾ ಮನೋಕಾಮನೆಗಳು ಪೂರ್ಣಗೊಳ್ಳಲಿವೆ. ನಿಂತುಹೋದ ಕೆಲಸಗಳಿಗೂ ಕೂಡ ಮತ್ತೆ ಗತಿ ಸಿಗುವ ಸಾಧ್ಯತೆ ಇದೆ. ಆರ್ಥಿಕ ಸ್ಥಿತಿ ಉತ್ತಮಗೊಳ್ಳಲಿದೆ. ಬಿಸ್ನೆಸ್ ನಲ್ಲಿಯೂ ಕೂಡ ಉತ್ತಮ ಲಾಭ ನಿಮ್ಮದಾಗಲಿದೆ. ವೈವಾಹಿಕ ಜೀವನದಲ್ಲಿ ಅಡೆತಡೆಗಳು ಎದುರಾಗುವ ಸಾಧ್ಯತೆ ಇದ್ದರೂ ಕೂಡ ಸಮಯ ಇರುವಾಗಲೇ ನೀವು ಅವುಗಳನ್ನು ನಿಭಾಯಿಸುವಲ್ಲಿ ಯಶಸ್ವಿಯಾಗುವಿರಿ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)  

ZEENEWS TRENDING STORIES

By continuing to use the site, you agree to the use of cookies. You can find out more by Tapping this link