Mangal Gochar: ಇನ್ನೈದು ದಿನಗಳಲ್ಲಿ ಮಕರ ರಾಶಿಗೆ ಮಂಗಳನ ಪ್ರವೇಶ, ಈ 4 ರಾಶಿಯವರ ಜೀವನದ ಮೇಲೆ ಮಹತ್ವದ ಪರಿಣಾಮ
ಮಂಗಳ ಗೋಚರ: ಶೀಘ್ರದಲ್ಲೇ ಗ್ರಹಗಳ ಕಮಾಂಡರ್ ಮಂಗಳ ಗುರುವಿನ ರಾಶಿಚಕ್ರ ಚಿಹ್ನೆ ಧನು ರಾಶಿಯನ್ನು ತೊರೆದು ತನ್ನ ಉಚ್ಛ ರಾಶಿಯಾದ ಮಕರ ರಾಶಿಗೆ ಪ್ರವೇಶಿಸಲಿದ್ದಾನೆ.
ಮಂಗಳ ರಾಶಿ ಬದಲಾವಣೆ: ಫೆಬ್ರವರಿ 06, 2024ರಂದು ಮಕರ ರಾಶಿಗೆ ಪ್ರವೇಶಿಸಲಿರುವ ಮಂಗಳ 2024ರ ಮಾರ್ಚ್ 15 ರವರೆಗೆ ಇದೆ ರಾಶಿಯಲ್ಲಿ ಸಂಚರಿಸಲಿದ್ದಾನೆ.
ಮಂಗಳ ಸಂಚಾರದ ಪ್ರಭಾವ: ಮಂಗಳನ ರಾಶಿ ಬದಲಾವಣೆಯ ಪರಿಣಾಮವು ಎಲ್ಲಾ 12 ರಾಶಿಯವರ ಜೀವನದ ಮೇಲೆ ಪರಿಣಾಮವನ್ನು ಉಂಟು ಮಾಡುತ್ತದೆ. ಆದರೂ, ಈ ಸಮಯದಲ್ಲಿ ನಾಲ್ಕು ರಾಶಿಯವರ ಜೀವನದಲ್ಲಿ ಮಹತ್ವದ ಪರಿಣಾಮ ಕಂಡು ಬರಲಿದೆ ಎಂದು ಹೇಳಲಾಗುತ್ತಿದೆ. ಆ ರಾಶಿಗಳೆಂದರೆ...
ಮೇಷ ರಾಶಿ: ಮಂಗಳ ರಾಶಿ ಪರಿವರ್ತನೆಯು ಮೇಷ ರಾಶಿಯವರ ಜೀವನದಲ್ಲಿ ಶುಭ ಫಲಗಳನ್ನು ತರಲಿದೆ. ಈ ಸಮಯದಲ್ಲಿ ವ್ಯಾಪಾರ-ವ್ಯವಹಾರದಲ್ಲಿ ಪ್ರಗತಿ, ಹೊಸ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಉದ್ಯೋಗ ಪ್ರಾಪ್ತಿ ಯೋಗವಿದೆ.
ಮಿಥುನ ರಾಶಿ: ಮಂಗಳ ರಾಶಿ ಬದಲಾವಣೆಯು ಮಿಥುನ ರಾಶಿಯವರ ಜೀವನದಲ್ಲಿ ಅಶುಭ ಫಲಗಳನ್ನು ತರಲಿದೆ. ಅದರಲ್ಲೂ ನಿಮ್ಮ ಒಡಹುಟ್ಟಿದವರ ಕೋಪ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಇದು ನಿಮ್ಮ ಉದ್ವೇಗಕ್ಕೆ ಕಾರಣವಾಗಬಹುದು. ವಿವಾದಾತ್ಮಕ ವಿಷಯಗಳಿಂದ ದೂರವಿದ್ದರೆ ಒಳ್ಳೆಯದು. ಇದಲ್ಲದೆ, ಆರೋಗ್ಯ ಸಮಸ್ಯೆಗಳು ಕೂಡ ನಿಮ್ಮನ್ನು ಬಾಧಿಸಬಹುದು.
ತುಲಾ ರಾಶಿ: ಮಂಗಳ ಸಂಚಾರ ಬದಲಾವಣೆಯಿಂದ ತುಲಾ ರಾಶಿಯವರು ಮಂಗಳಕರ ಫಲಗಳನ್ನು ಅನುಭವಿಸುವಿರಿ. ಈ ಸಮಯದಲ್ಲಿ ನೀವು ಮನೆ, ಭೂಮಿ, ವಾಹನದಿಂದ ಲಾಭವನ್ನು ಗಳಿಸುವಿರಿ. ವೃತ್ತಿ ಬದುಕಿನಲ್ಲಿ ಪ್ರತಿಯನ್ನು ಕಾಣುವಿರಿ. ಆದಾಗ್ಯೂ, ತಿಂಗಳ ದ್ವಿತೀಯಾರ್ಧದಲ್ಲಿ ಬೆಂಕಿ ಅಪಘಾತದ ಬಗ್ಗೆ ಎಚ್ಚರಿಕೆಯಿಂದ ಇರಿ.
ಮಕರ ರಾಶಿ: ಮಕರ ರಾಶಿಯವರಿಗೆ ಮಂಗಳ ರಾಶಿ ಬದಲಾವಣೆ ಅಷ್ಟು ಶುಭಕರವಾಗಿಲ್ಲ. ಈ ಸಮಯದಲ್ಲಿ ನೀವು ನಿಮ್ಮ ಕೋಪಕ್ಕೆ ಕಡಿವಾಣ ಹಾಕಲೇಬೇಕು. ಆರೋಗ್ಯ ಸಮಸ್ಯೆಗಳಿಂದ ದೂರ ಉಳಿಯಲು ಆಹಾರ ಪದ್ಧತಿಯ ಮೇಲೆ ಹೆಚ್ಚಿನ ನಿಗಾವಹಿಸಿ. ಅಪಘಾತಗಳ ಬಗ್ಗೆ ಜಾಗರೂಕರಾಗಿರಿ. ಆದಾಗ್ಯೂ, ಸರ್ಕಾರಿ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಉತ್ತಮ ಸಮಯ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.