ತುಲಾ ರಾಶಿಯಲ್ಲಿ ಕೇತು-ಮಂಗಳರ ಮೈತ್ರಿ, ಅದೃಷ್ಟ ಲಕ್ಷ್ಮಿಯ ಕೃಪೆಯಿಂದ ಈ ರಾಶಿಗಳ ಜನರ ತಿಜೋರಿ ಧನ-ಸಂಪತ್ತಿನಿಂದ ತುಂಬಿ ತುಳುಕಲಿದೆ!
Mars-Ketu Yuti 2023 In Libra: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲಿಯೇ ತುಲಾ ರಾಶಿಯಲ್ಲಿ ಛಾಯಾ ಗ್ರಹ ಕೇತು ಹಾಗೂ ಗ್ರಹಗಳ ಸೇನಾಪತಿಯಾಗಿರುವ ಮಂಗಳ ದೇವನ ಮೈತ್ರಿ ನೆರವೇರಲಿದ್ದು, ಒಟ್ಟು ಮೂರು ಗ್ರಹಗಳ ಜನರ ಭಾಗ್ಯದ ಬಾಗಿಲು ತೆರೆದುಕೊಳ್ಳಲಿದೆ. ಅದೃಷ್ಟ ಲಕ್ಷ್ಮಿಯ ಕೃಪೆಯಿಂದ ಈ ಜನರ ಮನೆಯ ತಿಜೋರಿ ಹಣದಿಂದ ತುಂಬಿತುಳುಕಲಿದೆ. (Spiritual News In Kannada)
ಕನ್ಯಾ ರಾಶಿ: ನಿಮ್ಮ ಗೋಚರ ಜಾತಕದ ಧನಭಾವದಲ್ಲಿ ಈ ಮೈತ್ರಿ ಸಂಭವಿಸುತ್ತಿದೆ. ಹೀಗಾಗಿ ಇದು ನಿಮ್ಮ ಪಾಲಿಗೆ ಸಾಕಷ್ಟು ಲಾಭದಾಯಕ ಸಾಬೀತಾಗಲಿದೆ. ಈ ಅವಧಿಯಲ್ಲಿ ನಿಮಗೆ ಆಕಸ್ಮಿಕ ಧನಲಾಭ ಪ್ರಾಪ್ತಿಯಾಗಲಿದ್ದು, ಉಳಿದ ಆರ್ಥಿಕ ವಿಷಯಗಳಲ್ಲಿಯೂ ಕೂಡ ನಿಮಗೆ ಲಾಭ ಸಿಗಲಿದೆ. ಕುಟುಂಬದಲ್ಲಿ ನಡೆದುಕೊಂಡು ಬಂದಿರುವ ಒತ್ತಡದ ಪರಿಸ್ಥಿತಿಯಿಂದ ನಿಮಗೆ ಮುಕ್ತಿ ಸಿಗಲಿದೆ. ಸಿಲುಕಿಕೊಂಡ ಹಣ ಕೂಡ ನಿಮ್ಮತ್ತ ಮರಳಲಿದೆ. ಈ ಅವಧಿಯಲ್ಲಿ ಹಣಕಾಸಿನ ಹೂಡಿಕೆ ಮಾಡುವುದು ನಿಮಗೆ ಭವಿಷ್ಯದಲ್ಲಿ ಸಾಕಷ್ಟು ಲಾಭವನ್ನು ತಂದು ಕೊಡಲಿದೆ. ಕಲಾ, ಮಾಧ್ಯಮ, ನಟನೆ, ಹಾಡುಗಾರಿಕೆ ಹಾಗೂ ಮಾರ್ಕೆಟಿಂಗ್ ಗೆ ಸಂಬಂಧಿಸಿದ ಜನರಿಗೆ ಈ ಅವಧಿಯಲ್ಲಿ ಉತ್ತಮ ಲಾಭ ಸಿಗಲಿದೆ.
ಸಿಂಹ ರಾಶಿ: ಮಂಗಳ ಹಾಗೂ ಕೇತು ಯುತಿ ಸಿಂಹ ರಾಶಿಯ ಜಾತಕದವರಿಗೆ ಸಾಕಷ್ಟು ಅನುಕೂಲತೆಗಳನ್ನು ಸೃಷ್ಟಿಸಿದಲಿದೆ. ಏಕೆಂದರೆ ಈ ಯುತಿ ನಿಮ್ಮ ಗೋಚರ ಜಾತಕದ ತೃತೀಯ ಭಾವದಲ್ಲಿ ಸಂಭವಿಸುತ್ತಿದ್ದು, ನಿಮ್ಮ ಸಾಹಸ ಪರಾಕ್ರಮವನ್ನು ಹೆಚ್ಚಿಸಲಿದೆ. ವಿದೇಶಗಳ ಜೊತೆಗೆ ವ್ಯಾಪಾರ ಸಂಬಂಧ ಹೊಂದಿಯವರಿಗೆ ಅವರಿಗೆ ಅಪಾರ ಲಾಭದ ಸಾಧ್ಯತೆಗಳಿವೆ. ಈ ಅವಧಿಯಲ್ಲಿ ನಿಮ್ಮ ಮಾತಿನ ಶೈಲಿ, ನಡುವಳಿಕೆಯಲ್ಲಿ ಅಪಾರ ಸುಧಾರಣೆಯನ್ನು ನೀವು ಗಮನಿಸಬಹುದು. ಜನರ ಜೊತೆ ನಿಮ್ಮ ಸಂಬಂಧ ಮೊದಲಿಗಿಂತ ಉತ್ತಮವಾಗಿರಲಿದೆ. ವೃತ್ತಿ ರಂಗದಲ್ಲಿ ನಿಮಗೆ ಅಪಾರ ಲಾಭ ಸಿಗಲಿದೆ. ಈ ಅವಧಿಯಲ್ಲಿ ನಿಮ್ಮ ದೈನಂದಿನ ಆದಾಯ ಹೆಚ್ಚಾಗಲಿದೆ. ರಾಜಕೀಯ ರಂಗದಲ್ಲಿ ಗುರುತಿಸಿಕೊಂಡವರ ಪ್ರಭಾವ ಹೆಚ್ಚಾಗಲಿದೆ.
ಮಕರ ರಾಶಿ: ನಿಮ್ಮ ಪಾಲಿಗೆ ಮಂಗಳ-ಕೇತು ಮೈತ್ರಿ ಅತ್ಯಂತ ಲಾಭದಾಯಕ ಸಾಬೀತಾಗಲಿದೆ. ಏಕೆಂದರೆ ಈ ಮೈತ್ರಿ ನಿಮ್ಮ ಗೋಚರ ಜಾತಕದ ಕರ್ಮಭಾವದಲ್ಲಿ ರೂಪುಗೊಳ್ಳುತ್ತಿದೆ. ಹೀಗಾಗಿ ಈ ಅವಧಿಯಲ್ಲಿ ನಿಮ್ಮ ಜೀವನೋಪಾಯದ ಸೌಕರ್ಯಗಳಲ್ಲಿ ವೃದ್ಧಿಯಾಗಲಿದೆ. ನೌಕರವರ್ಗದ ಜನರು ಒಂದು ವೇಳೆ ನೌಕರಿ ಬದಲಾವಣೆ ಕುರಿತು ಆಲೋಚಿಸುತ್ತಿದ್ದರೆ, ಅವರಿಗೆ ಉತ್ತಮ ಅವಕಾಶಗಳು ಸಿಗಲಿವೆ. ತಂದೆಯ ಜೊತೆಗೆ ನಿಮ್ಮ ಸಂಬಂಧದಲ್ಲಿ ಸುಧಾರಣೆ ಕಂಡುಬರಲಿದೆ. ವ್ಯಾಪಾರ ವರ್ಗದ ಜನರಿಗೆ ಉತ್ತಮ ಆರ್ಡರ್ ಗಳು ಸಿಗುವ ಎಲ್ಲಾ ಲಕ್ಷಣಗಳಿವೆ ಮತ್ತು ಅದರಿಂದ ಅವರಿಗೆ ಭಾರಿ ಲಾಭ ಸಿಗಲಿದೆ. ವಾಹನ, ಆಸ್ತಿ ಪಾಸ್ತಿ ಇತ್ಯಾದಿಗಳನ್ನು ನೀವು ಖರೀದಿಸಬಹುದು.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)