Mars-Mercury Yuti 2024: ಫೆಬ್ರುವರಿಯಲ್ಲಿ ಮಕರ ರಾಶಿಯಲ್ಲಿ ಮಂಗಳ-ಬುಧ ಮೈತ್ರಿ, ಈ ಜನರಿಗೆ ಪದೋನ್ನತಿ-ಅಪಾರ ಧನಸಂಪತ್ತು ಪ್ರಾಪ್ತಿಯೋಗ!

Fri, 12 Jan 2024-4:46 pm,

Mars-Mercury Yuti 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಫೆಬ್ರುವರಿ ತಿಂಗಳಿನಲ್ಲಿ ಮಕರ ರಾಶಿಯಲ್ಲಿ ಮಂಗಳ ಹಾಗೂ ಬುಧರ ಮೈತ್ರಿಯಿಂದ ಶುಭ ಕಾಕತಾಳೀಯ ರಚನೆಯಾಗುತ್ತಿದೆ. ಇದರಿಂದ ಕೆಲ ರಾಶಿಗಳ ಜನರಿಗೆ ಬಂಪರ್ ಲಾಭ ಸಿಗಲಿದೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ, (Spiritual News In Kannada)  

ಮೇಷ ರಾಶಿ: ನಿಮ್ಮ ಗೋಚರ ಜಾತಕದ ಧನಭಾವದಲ್ಲಿ ಈ ಮೈತ್ರಿ ನೆರವೇರುತ್ತಿದೆ. ಇದರಿಂದ ನಿಮಗೆ ಆಕಸ್ಮಿಕ ಧನಲಾಭ ಸಿಗುವ ಸಾಧ್ಯತೆ ಇದೆ. ವೃತ್ತಿ ಜೀವನದಲ್ಲಿ ಅಪಾರ ಯಶಸ್ಸಿನ ಜೊತೆಗೆ ಧನಲಾಭ ಸಿಗಲಿದೆ. ವಿದೇಶದಲ್ಲಿ ನೌಕರಿ ಮಾಡುವ ನಿಮ್ಮ ಇಚ್ಛೆ ಈಡೇರಲಿದೆ. ನಿಮ್ಮ ಕೆಲಸದಲ್ಲಿ ನೀವು ಮಾಡಿದ ಕಠಿಣ ಪರಿಶ್ರಮದ ಫಲ ನಿಮಗೆ ಈಗಲಿದೆ. ನೌಕರಿ ಬದಲಾವಣೆ ಕುರಿತು ಒಂದು ವೇಳೆ ನೀವು ಯೋಚಿಸುತ್ತಿದ್ದರೇ, ಈ ಸಮಯ ಸಾಕಷ್ಟು ಅನುಕೂಲಕರವಾಗಿದೆ. ಆರ್ಥಿಕ ಸ್ಥಿತಿ ಕೂಡ ಉತ್ತಮವಾಗಿರಲಿದೆ. ಹಣ ಉಳಿತಾಯ ಮಾಡುವಲ್ಲಿಯೂ ಕೂಡ ನೀವು ಯಶಸ್ಸನ್ನು ಕಾಣುವಿರಿ. ಇದಲ್ಲದೆ ಪ್ರತಿಯೊಂದು ಕ್ಷೇತ್ರದಲ್ಲಿ ಯಶಸ್ಸು ನಿಮ್ಮದಾಗಲಿದೆ. ಆರೋಗ್ಯಕ್ಕೆ ಸಂಬಂಧಿಸಿದಂತೆ ಸ್ವಲ್ಪ ಮುನ್ನೆಚ್ಚರಿಕೆ ವಹಿಸುವ ಅವಶ್ಯಕತೆ ಕೂಡ ಇದೆ.   

ವೃಶ್ಚಿಕ ರಾಶಿ: ನಿಮ್ಮ ಗೋಚರ ಜಾತಕದ ತೃತೀಯ ಭಾವದಲ್ಲಿ ಬುಧ-ಮಂಗಳರ ಮೈತ್ರಿ ನೆರವೇರುತ್ತಿದೆ. ಹೀಗಿರುವಾಗ ಈ ರಾಶಿಗಳ ಜನರಿಗೆ ಸಾಲಬಾಧೆಯಿಂದ ಮುಕ್ತಿ ಸಿಗಲಿದೆ. ನೌಕರಿಯಲ್ಲಿ ಬಡ್ತಿ ಭಾಗ್ಯ ಪ್ರಾಪ್ತಿಯಾಗುವ ಎಲ್ಲಾ ಲಕ್ಷಣಗಳಿವೆ. ಇದರಿಂದ ನೌಕರಿ ಹಾಗೂ ವ್ಯಾಪಾರ ಎರಡರಲ್ಲಿಯೂ ಕೂಡ ಲಾಭ ನಿಮ್ಮದಾಗಲಿದೆ. ಯಾತ್ರೆಗಳ ಮಧ್ಯೆ ಸಮತೋಲನ ಕಾಯ್ದುಕೊಳ್ಳಿ. ಆರ್ಥಿಕ ಸ್ಥಿತಿಯ ಕುರಿತು ಹೇಳುವುದಾದರೆ, ಧನಲಾಭ ಮಾಡಿಕೊಳ್ಳುವ ಹಲವು ಮಾರ್ಗಗಳು ತೆರೆದುಕೊಳ್ಳಲಿವೆ. ಧನ-ಧಾನ್ಯ ಹೆಚ್ಚಾಗುವ ಸಾಧ್ಯತೆ ಇದೆ. ಮಂಗಳನ ಕೃಪೆಯಿಂದ ಹೊಸ ಅವಕಾಶಗಳು ಪ್ರಾಪ್ತಿಯಾಗಲಿವೆ.   

ಮಕರ ರಾಶಿ: ನಿಮ್ಮ ಗೋಚರ ಜಾತಕದ ಪ್ರಥಮ ಭಾವದಲ್ಲಿ ಮಂಗಳ ಹಾಗೂ ಬುಧನ ಮೈತ್ರಿ ನೆರವೇರುತ್ತಿದೆ. ಹೀಗಾಗೀ ಈ ಅವಧಿಯಲ್ಲಿ ವಿಭಿನ್ನ ಕ್ಷೇತ್ರಗಳಿಂದ ನಿಮಗೆ ಅಪಾರ ಲಾಭ ಸಿಗಲಿದೆ. ಇತರರೊಂದಿಗೆ ಮಾತನಾಡುವಾಗ ಒಂದು ವೇಳೆ ನಿಮಗೆ ನಿಮ್ಮ ಧೈರ್ಯ ಬೆಂಬಲ ನೀಡಿದರೆ, ಅದರ ಲಾಭ ನಿಮಗೆ ಸಿಗಲಿದೆ, ವೃತ್ತಿಪರವಾಗಿ ಈ ಮೈತ್ರಿ ಸಾಕಷ್ಟು ಲಾಭದಾಯಕವಾಗಿದೆ. ಹಿರಿಯರ ಮತ್ತು ಸಹೋದ್ಯೋಗಿಗಳ ಬೆಂಬಲ ನಿಮಗೆ ಸಿಗುವುದರಿಂದ ವೃತ್ತಿಯಲ್ಲಿ ಸಾಕಷ್ಟು ಸಕಾರಾತ್ಮಕ ಫಲಿತಾಂಶಗಳನ್ನು ನೀವು ನೋಡಬಹುದು.   

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)  

ZEENEWS TRENDING STORIES

By continuing to use the site, you agree to the use of cookies. You can find out more by Tapping this link