Mars Transit 2023: ಇಂದಿನಿಂದ ಈ 4 ರಾಶಿಯವರಿಗೆ ಬುಧ-ಕುಜನ ಅಭಯ; ಧನ – ಯಶಸ್ಸಿಗೆ ಬರಲ್ಲ ಕಿಂಚಿತ್ತೂ ಬರ!

Wed, 10 May 2023-6:01 am,

ಜ್ಯೋತಿಷ್ಯದಲ್ಲಿ, ಗ್ರಹಗಳು ಆಗಾಗ್ಗೆ ತಮ್ಮ ಗ್ರಹ ಸ್ಥಾನವನ್ನು ಬದಲಾಯಿಸುತ್ತವೆ. ಮೇ 10 ರಂದು ಮಂಗಳ ತನ್ನ ಸ್ಥಾನವನ್ನು ಬದಲಾಯಿಸುತ್ತದೆ. ಇನ್ನು ಜ್ಯೋತಿಷ್ಯದಲ್ಲಿ ಗ್ರಹಗಳ ನಕ್ಷತ್ರಪುಂಜಗಳಲ್ಲಿನ ಬದಲಾವಣೆಯನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ.

ಬುಧ ಮೇ 10 ರಂದು ಕರ್ಕ ರಾಶಿಯನ್ನು ಪ್ರವೇಶಿಸಿ, 1 ಜುಲೈ 2023 ರವರೆಗೆ ಅಲ್ಲಿಯೇ ಇರಲಿದ್ದಾನೆ. ಗ್ರಹಗಳ ಸಂಚಾರದಿಂದಾಗಿ, 4 ರಾಶಿಗಳ ಜೀವನವು ಸಂಪೂರ್ಣವಾಗಿ ಬದಲಾಗುತ್ತದೆ. ಒಂದು ತಿಂಗಳ ಕಾಲ ನಾಲ್ಕು ರಾಶಿಯವರಿಗೆ ಹಣದ ಮಳೆಯಾಗುತ್ತದೆ.

ವೃಷಭ ರಾಶಿ: ಬುಧ-ಕುಜನ ಗೋಚರದಿಂದ ಈ ರಾಶಿಯಲ್ಲಿ ಧೈರ್ಯ ಮತ್ತು ಶಕ್ತಿ ಹೆಚ್ಚುತ್ತದೆ. ಇಂದು ಪ್ರಯಾಣ ಕೈಗೊಳ್ಳುವ ಸಾಧ್ಯತೆ ಇದೆ. ಅನಗತ್ಯ ಚರ್ಚೆಗಳು ಮತ್ತು ವಿವಾದಗಳನ್ನು ತಪ್ಪಿಸಲು ಪ್ರಯತ್ನಿಸಿ. ಇಂದು ಈ ರಾಶಿಯವರಿಗೆ ದಿಢೀರ್ ಲಾಭವಾಗಲಿದೆ.

ಸಿಂಹ: ಅಧ್ಯಯನಕ್ಕಾಗಿ ವಿದೇಶಕ್ಕೆ ಹೋಗುವ ಕನಸು ಹೊಂದಿರುವ ಈ ರಾಶಿಯ ವಿದ್ಯಾರ್ಥಿಗಳಿಗೆ ಇಂದು ಶುಭಸುದ್ದಿ ಕೇಳಬಹುದು. ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳು ಇತ್ಯರ್ಥವಾಗಿ, ತೀರ್ಪು ನಿಮ್ಮ ಪರವಾಗಿ ಬರಲಿದೆ. ಕೆಲಸಕ್ಕಾಗಿ ಸಾಕಷ್ಟು ಪ್ರಯಾಣ ಮಾಡಬೇಕಾಗಬಹುದು

ಕನ್ಯಾ: ಕುಜ ಮತ್ತು ಬುಧ ಗ್ರಹಗಳ ಸ್ಥಾನಪಲ್ಲಟದಿಂದಾಗಿ ಈ ರಾಶಿಯವರು ಕೈಗೊಂಡ ಎಲ್ಲಾ ಆರ್ಥಿಕ ಯೋಜನೆಗಳು ಯಶಸ್ವಿಯಾಗುತ್ತವೆ. ಭಾರಿ ಲಾಭ ಪಡೆಯುತ್ತೀರಿ. ಉದ್ಯೋಗ ಮತ್ತು ವ್ಯಾಪಾರದಲ್ಲಿ ಅನಿರೀಕ್ಷಿತ ಪ್ರಗತಿ. ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ. ಆದಾಯದ ಮೂಲಗಳು ಹೆಚ್ಚಾಗುತ್ತವೆ.

ಕುಂಭ: ಬುಧನ ಸಂಚಾರದಿಂದಾಗಿ ಉದ್ಯೋಗಿಗಳು ತಮ್ಮ ಕಾರ್ಯಕ್ಷಮತೆಗಾಗಿ ಮೆಚ್ಚುಗೆಯನ್ನು ಪಡೆಯುತ್ತಾರೆ. ಉತ್ತಮ ಇನ್‌ಕ್ರಿಮೆಂಟ್ ಮತ್ತು ಬಡ್ತಿ ಸಿಗುವ ಸಾಧ್ಯತೆ ಇದೆ. ವ್ಯಾಪಾರ ಸಂಬಂಧಿತ ಹಠಾತ್ ಪ್ರಯಾಣ ಕೈಗೊಳ್ಳಬಹುದು. ಖರ್ಚು ಸ್ವಲ್ಪ ಹೆಚ್ಚಾಗಲಿದೆ. ಉತ್ತಮ ಆರ್ಥಿಕ ಪರಿಸ್ಥಿತಿಯಿಂದಾಗಿ ಹೆಚ್ಚಿನ ತೊಂದರೆಗಳನ್ನು ಎದುರಿಸಬೇಕಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link