Mars Transit 2024: ವೃಷಭದಲ್ಲಿ ಮಂಗಳ ಸಂಕ್ರಮಣ, ಈ ರಾಶಿಯವರಿಗೆ ಭರ್ಜರಿ ಲಾಭ!
ಮಂಗಳ ಗ್ರಹವು 18 ತಿಂಗಳ ನಂತರ ಜುಲೈ 12ರಂದು ಸಂಜೆ 7.3ಕ್ಕೆ ವೃಷಭ ರಾಶಿಯಲ್ಲಿ ಸಾಗುತ್ತಿದೆ. ಮಂಗಳ ಗ್ರಹದ ಈ ಪ್ರಮುಖ ಸಂಚಾರವು 18 ತಿಂಗಳ ನಂತರ ನಡೆಯುತ್ತಿರುವುದರಿಂದ ಕೆಲವು ರಾಶಿಗಳು ಭರ್ಜರಿ ಪ್ರಯೋಜನವನ್ನು ಪಡೆಯುತ್ತಾರೆ. ಅದೇ ರೀತಿ ಕೆಲವು ರಾಶಿಗಳು ಪ್ರತಿಕೂಲ ಪರಿಣಾಮ ಅನುಭವಿಸುತ್ತಾರೆ. ಮಂಗಳ ಗ್ರಹದ ಈ ಸಂಚಾರದಿಂದ ಉತ್ತಮ ಫಲಿತಾಂಶ ಪಡೆಯಲಿರುವ ರಾಶಿಗಳು ಯಾವುವು ಎಂದು ತಿಳಿಯಿರಿ.
ಮಂಗಳನ ಸಂಚಾರವು ಮೇಷ ರಾಶಿಯಲ್ಲಿ ಜನಿಸಿದವರಿಗೆ ಉತ್ತಮ ಲಾಭ ತರಲಿದೆ. ಮೇಷ ರಾಶಿಯ ಅಧಿಪತಿ ಮಂಗಳವಾಗಿದ್ದು, ಅದರ ಸಂಚಾರದಿಂದ ಈ ರಾಶಿಯವರಿಗೆ ಸರ್ಕಾರಿ ಕೆಲಸ ಸಿಗುವ ಸಾಧ್ಯತೆಗಳಿವೆ. ಪ್ರಸ್ತುತ ಸರ್ಕಾರಿ ಸೇವೆಯಲ್ಲಿರುವವರೂ ನಂತರ ಉನ್ನತ ಹುದ್ದೆ ಪಡೆಯುತ್ತಾರೆ. ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಿಸಲಿದ್ದು, ವರ್ತಕರು ಕಳೆದುಕೊಂಡ ಹಣವನ್ನು ಮರಳಿ ಪಡೆಯುತ್ತಾರೆ.
ವೃಷಭ ರಾಶಿಯು ಸಹ ಮಂಗಳ ಗ್ರಹದ ಸಂಚಾರದಿಂದ ಭರ್ಜರಿ ಲಾಭ ಪಡೆಯುತ್ತದೆ. ಈ ಗ್ರಹದ ಸಂಚಾರದ ಸಮಯದಲ್ಲಿ ವೃಷಭ ರಾಶಿಯವರ ಜೀವನದಲ್ಲಿ ಧೈರ್ಯ ಮತ್ತು ಶೌರ್ಯವು ಹೆಚ್ಚಾಗುತ್ತದೆ. ಸಂಪತ್ತು ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ವ್ಯಾಪಾರದಲ್ಲಿರುವವರಿಗೆ ಲಾಭ, ಕಚೇರಿಯಲ್ಲಿರುವವರು ಯಶಸ್ವಿಯಾಗುತ್ತಾರೆ. ಕೆಲಸದಲ್ಲಿ ಬಡ್ತಿಗಾಗಿ ಕಾಯುತ್ತಿರುವ ಜನರಿಗೆ ಈ ಅವಧಿಯಲ್ಲಿ ಅವಕಾಶ ಸಿಗಲಿದೆ.
ಮಂಗಳ ಸಂಚಾರದಿಂದ ಕರ್ಕಟಕ ರಾಶಿಯವರು ಸಹ ಉತ್ತಮ ಲಾಭ ಗಳಿಸಲಿದ್ದಾರೆ. ಈ ರಾಶಿಯವರು ಮಂಗಳ ಗ್ರಹದ ಸಂಚಾರದಿಂದ ಹೆಚ್ಚು ಪ್ರಯೋಜನ ಪಡೆಯುತ್ತಾರೆ. ಈ ಅವಧಿಯಲ್ಲಿ ಕರ್ಕಾಟಕ ರಾಶಿಯವರು ಹೆಚ್ಚು ಹಣವನ್ನು ಗಳಿಸುತ್ತಾರೆ. ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ಇವರ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗಲಿದ್ದು, ವ್ಯಾಪಾರಸ್ಥರಿಗೆ ಲಾಭವಾಗಲಿದೆ. ಈ ಅವಧಿಯಲ್ಲಿ ನಿಮ್ಮ ಹೂಡಿಕೆಗಳು ದೊಡ್ಡ ಲಾಭ ನೀಡುತ್ತದೆ.