ಹೊಸ ವರ್ಷಾರಂಭದಲ್ಲಿಯೇ ಮಂಗಳನಿಂದ ರುಚಕ ರಾಜಯೋಗ ರಚನೆ, ಈ ಜನರಿಗೆ ಅಪಾರ ಸಿರಿ-ಸಂಪತ್ತು ಪ್ರಾಪ್ತಿಯ ಯೋಗ!
Mars Transit 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಮಂಗಳ ಹೊಸ ವರ್ಷಾರಂಭದಲ್ಲಿ ಮಕರ ರಾಶಿಗೆ ಪ್ರವೇಶಿಸಲಿದ್ದು, ಇಲ್ಲಿ ಆತ ರುಚಕ ರಾಜಯೋಗವನ್ನು ನಿರ್ಮಿಸಲಿದ್ದಾನೆ. ಈ ರಾಜಯೋಗ ಹಲವು ರಾಶಿಗಳ ಜನರ ಪಾಲಿಗೆ ಸಾಕಷ್ಟು ಅದೃಷ್ಟವನ್ನು ಹೊತ್ತು ತರಲಿದೆ. (Spiritual News In Kannada)
ಮೇಷ ರಾಶಿ: ಮಂಗಳ ನಿಮ್ಮ ರಾಶಿಗೆ ರಾಷ್ಯಾಧಿಪನಾಗಿದ್ದಾನೆ. ಜೊತೆಗೆ ಮಂಗಳ ನಿಮ್ಮ ಜಾತಕದ ದಶಮ ಭಾವದಲ್ಲಿ ಗೋಚರಿಸಲಿದ್ದಾನೆ. ಈ ಅವಧಿಯಲ್ಲಿ ನಿಮಗೆ ಕೆಲಸ-ಕಾರ್ಯಗಳಲ್ಲಿ ಅಪಾರ ಉನ್ನತಿಯಾಗಲಿದೆ. ಹಣಗಳಿಕೆಯ ಸಾಕಷ್ಟು ಅವಕಾಶಗಳು ನಿಮಗೆ ಒದಗಿಬರಲಿವೆ. ಕಾರ್ಯಕ್ಷೇತ್ರದಲ್ಲಿ ಉತ್ತಮ ಫಲಿತಾಂಶಗಳು ಪ್ರಾಪ್ತಿಯಾಗಳಿವೆ. ವೃತ್ತಿಪರ ಜೀವನದಲ್ಲಿಯೂ ಕೂಡ ಉನ್ನತಿಯಾಗಲಿದೆ. ನಿರುದ್ಯೋಗಿಗಳಿಗೆ ನೌಕರಿ ಭಾಗ್ಯ ಪ್ರಾಪ್ತಿಯಾಗಲಿದೆ. ನೌಕರ ವರ್ಗದ ಜಾಂರಿಗೆ ಪದೋನ್ನತಿಯ ಭಾಗ್ಯ ಪ್ರಾಪ್ತಿಯಾಗಲಿದೆ. ವ್ಯಾಪಾರಿಗಳಿಗೆ ಈ ಅವಧಿಯಲ್ಲಿ ಉತ್ತಮ ಧನಲಾಭ ಉಂಟಾಗಲಿದೆ. ರಿಯಲ್ ಎಸ್ಟೇಟ್, ಪ್ರಾಪರ್ಟಿ ವ್ಯವಹಾರಕ್ಕೆ ಸಂಬಂಧಿಸಿದ ಜನರಿಗೆ ಭಾರಿ ಧನಲಾಭ ಉಂಟಾಗಲಿದೆ.
ವೃಷಭ ರಾಶಿ: ರುಚಕ ರಾಜಯೋಗದ ಅವಧಿಯಲ್ಲಿ ಮಂಗಳ ನಿಮ್ಮ ಗೋಚರ ಜಾತಕದ ನವಮ ಭಾವದಲ್ಲಿ ಸಂಚರಿಸಲಿದ್ದಾನೆ. ಇದರಿಂದ ಈ ಅವಧಿಯಲ್ಲಿ ನಿಮಗೆ ಅದೃಷ್ಟದ ಸಂಪೂರ್ಣ ಬೆಂಬಲ ಸಿಗಲಿದೆ. ಪ್ರತಿಯೊಂದು ಕೆಲಸದಲ್ಲಿ ಯಶಸ್ಸು ನಿಮ್ಮದಾಗಲಿದೆ. ಸಮಾಜದಲ್ಲಿ ಪ್ರತಿಷ್ಠೆ ಹೆಚ್ಚಾಗಲಿದೆ. ಈ ಅವಧಿಯಲ್ಲಿ ನಿಮ್ಮ ಎಲ್ಲಾ ಇಷ್ಟಾರ್ಥಗಳು ನೆರವೇರಲಿವೆ. ಕೆಲಸ ಕಾರ್ಯಗಳ ನಿಮಿತ್ತ ಯಾತ್ರೆ ಸಂಭವಿಸಲಿದೆ. ಈ ಯಾತ್ರೆಗಳು ನಿಮಗೆ ಶುಭ ಫಲಗಳನ್ನು ನೆಡಲಿವೆ. ವಿದೇಶಕ್ಕೆ ಹೋಗಿ ವ್ಯಾಸಂಗ ಮಾಡಲು ಬಯಸುವ ವಿದ್ಯಾರ್ಥಿಗಳ ಆಸೆ ಈಡೇರಲಿದೆ.
ತುಲಾ ರಾಶಿ: ಮಂಗಳ ನಿಮ್ಮ ಗೋಚರ ಜಾತಕದ ಚತುರ್ಥ ಭಾವದಲ್ಲಿ ಸಂಚರಿಸಲಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ಭೌತಿಕ ಸುಖಗಳು ಪ್ರಾಪ್ತಿಯಾಗಲಿವೆ. ಇದರ ಜೊತೆಗೆ ವಾಹನ ಪ್ರಾಪರ್ಟಿ ಸುಖ ಪ್ರಾಪ್ತಿಯಾಗಲಿದೆ. ಪಿತ್ರಾರ್ಜಿತ ಸಂಪತ್ತಿನ ಸುಖ ಕೂಡ ನಿಮಗೆ ಪ್ರಾಪ್ತಿಯಾಗಲಿದೆ. ಭೂಮಿ, ಆಸ್ತಿಪಾಸ್ತಿಗೆ ಸಂಬಂಧಿಸಿದ ಬಿಸ್ನೆಸ್ ಮಾಡುತ್ತಿದ್ದರೆ ಉತ್ತಮ ಲಾಭ ನಿಮ್ಮದಾಗಲಿದೆ. ಸಮಾಜದಲ್ಲಿ ನಿಮ್ಮ ಪ್ರತಿಷ್ಠೆ - ಧನಸಮ್ಮಾನ ಹೆಚ್ಚಾಗಲಿದೆ. ಕಾರ್ಯಕ್ಷೇತ್ರದಲ್ಲಿ ಉನ್ನತಿಯ ಯೋಗ ರಚನೆಯಾಗುತ್ತಿದೆ. ಮುಂಬರುವ ದಿನಗಳಲ್ಲಿ ನಿಮಗೆ ಪ್ರಮೋಷನ್ ಸಿಗುವ ಸಾಧ್ಯತೆ ಇದೆ. ಹೊಸ ನೌಕರಿಯ ಆಫರ್ ಕೂಡ ಸಿಗಬಹುದು.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)