Mars Transit Effect: ಮೇ 10 ರವರೆಗೆ ಈ 4 ರಾಶಿಯವರು ತುಂಬಾ ಜಾಗರೂಕರಾಗಿರಬೇಕು
ಜ್ಯೋತಿಷ್ಯಶಾಸ್ತ್ರದ ಪ್ರಕಾರ, 2023 ರಲ್ಲಿ ಮೊದಲ ಮಂಗಳ ಸಂಕ್ರಮಣವು ಮಾರ್ಚ್ 13, 2023 ರಂದು ಬೆಳಿಗ್ಗೆ 05:33 ಕ್ಕೆ ಮಿಥುನ ರಾಶಿಯಲ್ಲಿ ನಡೆದಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯಾವುದೇ ವ್ಯಕ್ತಿಯ ಜಾತಕದಲ್ಲಿ ಮಂಗಳನ ವಿಶೇಷ ಮಹತ್ವವನ್ನು ಹೇಳಲಾಗುತ್ತದೆ. ಮಂಗಳನ ಸ್ಥಾನವು ಬಲವಾಗಿದ್ದರೆ, ವ್ಯಕ್ತಿಯು ಜೀವನದಲ್ಲಿ ಎಲ್ಲವೂ ಚೆನ್ನಾಗಿರುತ್ತದೆ. ಮಂಗಳ ವಕ್ರ ದೃಷ್ಟಿ ಇದ್ದರೆ ವ್ಯಕ್ತಿ ಪ್ರತಿ ಹಂತದಲ್ಲಿಯೂ ನಾನಾ ರೀತಿಯ ಸಂಕಷ್ಟಗಳನ್ನು ಎದುರಿಸಬೇಕಾಗಬಹುದು ಎಂದು ಹೇಳಲಾಗುತ್ತದೆ. ಇದೀಗ ಮೇ 10ರವರೆಗೆ ಕೆಲವು ರಾಶಿಯವರು ತುಂಬಾ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಲಾಗುತ್ತಿದೆ. ಆ ರಾಶಿಗಳು ಯಾವುವು ಎಂದು ತಿಳಿಯೋಣ...
ಐದು ತಿಂಗಳುಗಳ ಕಾಲ ವೃಷಭ ರಾಶಿಯಲ್ಲೇ ಸಂಚರಿಸುತ್ತಿದ್ದ ಮಂಗಳನು ಇದೀಗ ವೃಷಭ ರಾಶಿಯನ್ನು ತೊರೆದು ಮಿಥುನ ರಾಶಿಯನ್ನು ಪ್ರವೇಶಿಸಿದ್ದಾನೆ. ಈ ಸಮಯವನ್ನು ವೃಷಭ ರಾಶಿಯವರಿಗೆ ಒಳ್ಳೆಯ ಅಥವಾ ಶುಭ ಎಂದು ಹೇಳಲಾಗುವುದಿಲ್ಲ. ಈ ಸಮಯಲ್ಲಿ ನೀವು ಮಾತಿನ ಮೇಲೆ ಹಿಡಿತ ಸಾಧಿಸದಿದ್ದರೆ ತೊಂದರೆಗೆ ಸಿಲುಕಬಹುದು ಎಚ್ಚರ.
ಮಿಥುನ ರಾಶಿಯಲ್ಲಿ ಮಂಗಳ ಸಂಚಾರವು ಕರ್ಕಾಟಕ ರಾಶಿಯವರ ಮೇಲೂ ಪ್ರತಿಕೂಲ ಪರಿಣಾಮ ಬೀರುತ್ತದೆ. ಈ ಸಮಯದಲ್ಲಿ ಕರ್ಕಾಟಕ ರಾಶಿಯವರಿಗೆ ಬೇಡದ ಊರುಗಳಿಗೆ ವರ್ಗಾವಣೆ ಸಾಧ್ಯತೆ ಇದೆ. ನಿಮ್ಮ ಆದಾಯಕ್ಕಿಂತ ಖರ್ಚು ಹೆಚ್ಚಾಗಲಿದೆ. ಇದರಿಂದ ಒತ್ತಡ ಹೆಚ್ಚಾಗಬಹುದು.
ವೃಶ್ಚಿಕ ರಾಶಿಯ ಅಧಿಪತಿಯಾದ ಮಂಗಳನು ಬುಧ ಆದಿಪತ್ಯದ ಮಿಥುನ ರಾಶಿಗೆ ಪ್ರವೇಶಿಸಿರುವುದು ಈ ರಾಶಿಯವರಿಗೂ ಸಹ ಅಷ್ಟು ಶುಭಕರವಾಗಿಲ್ಲ. ಈ ಸಮಯದಲ್ಲಿ ನಿಮ್ಮ ಆರೋಗ್ಯದ ಬಗ್ಗೆ ಬಹಳ ಎಚ್ಚರಿಕೆಯಿಂದ ಇರುವುದು ಅಗತ್ಯ. ನಿಮ್ಮ ಮಾತಿನ ಮೇಲೆ ಸಂಯಮ ಕಾಯ್ದುಕೊಂಡರೆ ಮುಂದಾಗಬಹುದಾದ ಅನಾಹುತವನ್ನು ತಪ್ಪಿಸಬಹುದಾಗಿದೆ.
ಮಂಗಳನ ರಾಶಿ ಪರಿವರ್ತನೆಯನ್ನು ಧನು ರಾಶಿಯವರಿಗೂ ಸಹ ಅಷ್ಟು ಶುಭಕರ ಎಂದು ಪರಿಗಣಿಸಲಾಗುವುದಿಲ್ಲ. ಇದು ನಿಮ್ಮ ಸಂಗಾತಿಯೊಂದಿಗಿನ ನಿಮ್ಮ ಸಂಬಂಧದ ಮೇಲೆ ಪರಿಣಾಮ ಬೀರುತ್ತದೆ. ಕೆಲಸದ ಸ್ಥಳದಲ್ಲಿ ವಾದ-ವಿವಾದಗಳಿಂದ ದೂರ ಉಳಿದರೆ ಒಳಿತು. ಇಲ್ಲವೇ ಭಾರೀ ನಷ್ಟ ಸಾಧ್ಯತೆ ಇದೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.