Mangal Gochar: ಮೇಷ ರಾಶಿಯಲ್ಲಿ ಮಂಗಳನ ಸಂಚಾರ, 3 ರಾಶಿಯವರಿಗೆ ಭಾಗ್ಯೋದಯ, ಪ್ರತಿ ಹೆಜ್ಜೆಗೂ ಯಶಸ್ಸು

Wed, 15 May 2024-7:05 am,

ನವಗ್ರಹಗಳಲ್ಲಿ ಕಮಾಂಡರ್ ಗ್ರಹ ಎಂದು ಬಣ್ಣಿಸಲ್ಪಡುವ ಮಂಗಳನು ಜ್ಯೂನ್ ಮೊದಲ ದಿನವೇ ತನ್ನ ರಾಶಿಚಕ್ರವನ್ನು ಬದಲಾಯಿಸಲಿದ್ದಾನೆ. ಜುಲೈ 12ರ ವರೆಗೆ ಮೇಷ ರಾಶಿಯಲ್ಲಿಯೇ ಸಂಚರಿಸಲಿದ್ದಾನೆ. 

ಮೇಷ ರಾಶಿಯಲ್ಲಿ ಮಂಗಳನ ಸಂಚಾರದ ಪ್ರಭಾವ ಎಲ್ಲಾ 12 ರಾಶಿಯವರ ಮೇಲೆ ಕಂಡು ಬರುತ್ತದೆ. ಆದರೂ, ಮೂರು ರಾಶಿಯ ಜನರಿಗೆ ಇದನ್ನು ಭಾಗ್ಯೋದಯದ ಸಮಯ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ... 

ಸ್ವ ರಾಶಿಯಲ್ಲಿ ಮಂಗಳನ ಪ್ರವೇಶದಿಂದಾಗಿ ಈ ಮೇಷ ರಾಶಿಯ ಉದ್ಯಮಿಗಳು ಹೂಡಿಕೆಯಿಂದ ಉತ್ತಮ ಲಾಭ ಗಳಿಸಬಹುದು. ವೃತ್ತಿ ಬದುಕಿನಲ್ಲಿ ಯಶಸ್ಸು ನಿಮ್ಮದಾಗಲಿದೆ. ದಾಂಪತ್ಯ ಜೀವನದಲ್ಲಿ ಮೂಡಿದ್ದ ಮುನಿಸು ಕರಗಲಿದೆ. 

ಮಂಗಳ ಸಂಚಾರದಿಂದ ಧನು ರಾಶಿಯವರಿಗೆ ಒತ್ತಡದಿಂದ ಮುಕ್ತಿಯನ್ನು ನೀಡಲಿದೆ. ಉದ್ಯೋಗಸ್ಥರಿಗೆ ಮೇಲಾಧಿಕಾರಿಗಳಿಂದ ಪ್ರಶಂಸೆ ಜೊತೆಗೆ ಬಡ್ತಿ ಸಾಧ್ಯತೆಯೂ ಇದೆ. ಕುಟುಂಬಸ್ಥರೊಂದಿಗೆ ಪ್ರವಾಸ ಕೈಗೊಳ್ಳಬಹುದು. 

ಮಂಗಳ ರಾಶಿ ಪರಿವರ್ತನೆಯು ಮೀನ ರಾಶಿಯವರಿಗೆ ಆರ್ಥಿಕ ಸ್ಥಿತಿಯನ್ನು ಸುಧಾರಿಸಲಿದೆ. ಆದಾಯದ ಹೊಸ ಮೂಲಗಳು ನಿಮ್ಮ ಹಣಕಾಸಿನ ಬಿಕ್ಕಟ್ಟನ್ನು ನಿವಾರಿಸಲಿದೆ. ಪತಿ-ಪತ್ನಿಯರ ನಡುವೆ ಮೂಡಿದ್ದ ಭಿನ್ನಾಭಿಪ್ರಾಯಗಳು ಕಡಿಮೆಯಾಗಳಿವೆ. ವ್ಯಾಪಾರಸ್ಥರಿಗೆ ದೊಡ್ಡ ಆರ್ಡರ್ ದೊರೆಯುವ ಸಾಧ್ಯತೆ ಇದೆ.

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link