Mars Transit In Gemini 2021: ರಾಹು ತೊರೆದು ಮಿಥುನ ತಲುಪಿದ ಮಂಗಳ, ಅಂಗಾರಕ ಯೋಗ ಅಂತ್ಯ, ಯಾವ ರಾಶಿಯ ಮೇಲೆ ಏನು ಪ್ರಭಾವ?

Wed, 14 Apr 2021-7:42 pm,

1. ವೃಷಭ ತೊರೆದು ಮಿಥುನ ರಾಶಿ ಪ್ರವೇಶಿಸಿದ ಮಂಗಳ - ಭೂಮಿಯ ರೀತಿಯೇ ಇದೆ ಎಂದು ಭಾವಿಸಲಾಗುವ ಭೂಮಿಯ ಹತ್ತಿರದ ಗ್ರಹ ಮಂಗಳದೇವ ಏಪ್ರಿಲ್ 14, 2021ರ ಬೆಳಗಿನ ಜಾವ 1 ಗಂಟೆ 14 ನಿಮಿಷಕ್ಕೆ ಮಿಥುನ ರಾಶಿಗೆ ಪ್ರವೇಶಿಸಿದ್ದಾನೆ. ಸೌರಮಂಡಲದಲ್ಲಿ ಕೆಂಪು ಗ್ರಹ ಹೇರರಿನಿಂದ ಖ್ಯಾತಿ ಪಡೆದ ಮಂಗಳ ಇದುವರೆಗೆ ವೃಷಭ ರಾಶಿಯಲ್ಲಿ ರಾಹುವಿನ ಜೊತೆಗೆ ಸಂಚರಿಸುತ್ತಿದ್ದ. ರಾಹು ಹಾಗೂ ಮಂಗಳನ ಈ ಯೋಗದಿಂದ ಅಂಗಾರಕ ಯೋಗ ನಿರ್ಮಾಣಗೊಂಡಿತ್ತು.

2. ಅಂಗಾರಕ ಯೋಗದ (Angaraka Yog) ಪ್ರಭಾವ ಏನು  - ಅಂಗಾರಕ ಯೋಗ ಪ್ರಭಾವ ರಾಸಾಯನಿಕ ತತ್ವಗಳ ಮೇಲೆ ಸಕ್ರೀಯತೆಯನ್ನು ತರುತ್ತದೆ. ಜೋತಿಷ್ಯ ಲೆಕ್ಕಾದಾರದ ಪ್ರಕಾರ, ಪ್ರಸ್ತುತ ಸಾಂಕ್ರಾಮಿಕ ರೋಗ ಹರಡುವಲ್ಲಿ ಈ ಯೋಗವೇ ಕಾರಣ ಎಂದು ಭಾವಿಸಲಾಗಿದೆ. ಹೀಗಿರುವಾಗ ಮಂಗಳನ ಮಿಥುನ ರಾಶಿ ಗೋಚರ ರಾಸಾಯನಿಕ ಚಟುವಟಿಕೆಗಳಲ್ಲಿನ ಸಕ್ರಿಯತೆಯಲ್ಲಿ ಇಳಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

3. ಮಂಗಳನ ಈ ರಾಶಿ ಪರಿವರ್ತನೆ ಬೇರೆ ರಾಶಿಗಳ ಮೇಲೆ ಪ್ರಭಾವವೇನು? - ಮಂಗಳ ದೇವನ Astrology Predictions - ಪ್ರಭಾವದಿಂದ ಮೇಷ, ಸಿಂಹ, ಕನ್ಯಾ, ತುಲಾ, ಮಕರ ಹಾಗೂ ಕುಂಭ ರಾಶಿಯ ಜಾತಕದವರಿಗೆ ಲಾಭ ತರಲಿದೆ. ಈ ಆರು ರಾಶಿಗಳನ್ನು ಹೊರತುಪಡಿಸಿ, ಅನ್ಯರಾಶಿಗಳಿಗೆ ಮಂಗಳನ ಸಾಧಾರಣ ಅಥವಾ ನಿಮ್ನ ಪ್ರಭಾವ ಪ್ರಾಪ್ತಿಯಾಗಲಿದೆ.  

4. ಮಂಗಳ ಪ್ರವೇಶಿಸುವ ಮುಂದಿನ ರಾಶಿ ಯಾವುದು? - ಮಂಗಳದೇವ ಜೂನ್ 2, 2021 ರ ಬೆಳಗ್ಗೆ 6 ಗಂಟೆ 51 ನಿಮಿಷಕ್ಕೆ ಮಿಥುನ ರಾಶಿಯನ್ನು ತೊರೆದು ಕರ್ಕ ರಾಶಿಗೆ ಪ್ರವೆಶಿಸಲಿದ್ದಾನೆ. ಆದರೆ, ಇಲ್ಲಿ ವಿಶೇಷತೆ ಎಂದರೆ ಕರ್ಕ ರಾಶಿ ಮಂಗಳನ ಪಾಲಿಗೆ ನೀಚ ರಾಶಿಯಾಗಿದೆ. ಅರ್ಥಾತ್, ಮಂಗಳನಿಗೆ ಸಂಬಂಧಿಸಿದ ಭೂಮಿ, ಭವನ, ವಾಹನ ಹಾಗೂ ಅಸ್ತ್ರಗಳಿಗೆ ಸಂಬಂಧಿಸಿದ ಕೆಲಸಗಳನ್ನು ಜೂನ್ 2 ರೊಳಗೆ ಪೂರ್ಣಗೊಳಿಸುವುದು ಉತ್ತಮ.

5. ಮಂಗಳನ ಪ್ರಭಾವ ಹೆಚ್ಚಿಸಲು ಏನು ಮಾಡಬೇಕು -ಮಂಗಳದೇವನ ಪ್ರಭಾವವನ್ನು ಹೆಚ್ಚಾಗಿಸಲು ದೇವಾಧಿದೇವ ಶಿವನ ಅಂಶ ಎಂದೇ ಹೇಳಲಾಗುವ ಪವನಸುತ ಆಂಜನೇಯನ ಆರಾಧನೆ ಮಾಡಲಾಗುತ್ತದೆ. ಮಂಗಳವಾರ ಹನುಮನಿಗೆ ವಸ್ತ್ರ ಅರ್ಪಿಸಿ, ಬೆಳೆ-ಬೆಲ್ಲದ ಪ್ರಸಾದ ನೈವೇದ್ಯ ತೋರಿಸಿ. ಹವಳದ ಮಾಲೆ ಧರಿಸಿ, ಕೆಂಪುವಸ್ತ್ರ ಹಾಗೂ ಕೆಂಪು ವಸ್ತುಗಳ ದಾನ ಮಾಡಿ, ಹನುಮಾನ ಚಾಲಿಸಾ, ಬಜರಂಗ ಬಾಣ ಹಾಗೂ ಸುಂದರಕಂಡ ಪಠಿಸಿ, ಮಂಗಳವಾರ ಹನುಮನಿಗೆ ಗೋದಿ ರೊಟ್ಟಿ ತಯಾರಿಸಿ ಅರ್ಪಿಸಿ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link