ನವೆಂಬರ್ 16 ರವರೆಗೆ ಈ ರಾಶಿಗಳ ಜನರು ಮುಟ್ಟಿದ್ದೆಲ್ಲಾ ಚಿನ್ನ, ಧನ-ಕುಬೇರ ಕೃಪೆಯಿಂದ ಅಪಾರ ಧನ-ಸಂಪತ್ತು ಪ್ರಾಪ್ತಿಯೋಗ!
Mars Transit In Libra: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಪ್ರಸ್ತುತ ಗ್ರಹಗಳ ಸೇನಾಪತಿ ಹಾಗೂ ಭೂಮಿ ಪುತ್ರ ಎಂದೇ ಖ್ಯಾತ ಮಂಗಳ ತುಲಾ ರಾಶಿಯಲ್ಲಿ ವಿರಾಜಮಾನನಾಗಿದ್ದಾನೆ. ಇದರಿಂದ ನವೆಂಬರ್ 16ರವರೆಗೆ ಕೆಲ ರಾಶಿಗಳ ಜನರಿಗೆ ಅಪಾರ ಸಿರಿ-ಸಂಪತ್ತು ಪ್ರಾಪ್ತಿಯಾಗಲಿದೆ.
ಧನು ರಾಶಿ: ನಿಮ್ಮ ಜಾತಕದ ಆದಾಯಭಾವದಲ್ಲಿ ಮಂಗಳನ ಈ ಗೋಚರ ನೆರವೇರಿದೆ. ಹೀಗಾಗಿ ಈ ಅವಧಿಯಲ್ಲಿ ನಿಮ್ಮ ಆದಾಯದಲ್ಲಿ ಅಪಾರ ಹೆಚ್ಚಳ ಸಂಭವಿಸುವ ಸಾಧ್ಯತೆ ಇದೆ. ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ಹೊಸ ಅವಕಾಶಗಳು ನಿಮಗೆ ಪ್ರಾಪ್ತಿಯಾಗಳಿವೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಆದಾಯದ ಹೊಸ ಮೂಲಗಳು ತೆರೆದುಕೊಳ್ಳಲಿವೆ. ಇಂಪೋರ್ಟ್ ಎಕ್ಸ್ಪೋರ್ಟ್ಗೆ ಸಂಬಂಧಿಸಿದ ವ್ಯಾಪಾರ ಮಾಡುವವರಿಗೆ ಅಪಾರ ಲಾಭ ಸಿಗಲಿದೆ. ಷೇರುಪೇಟೆ. ಲಾಟರಿಗಳಂತಹ ವಹಿವಾಟಿನಲ್ಲಿ ನಿಮಗೆ ಲಾಭದ ಸಂಕೇತಗಳಿವೆ.
ತುಲಾ ರಾಶಿ: ತುಲಾ ರಾಶಿಯಲ್ಲಿಯೇ ಮಂಗಳನ ಈ ಗೋಚರ ನೆರೆವೇರಿದ ಕಾರಣ ಇದು ನಿಮ್ಮ ಪಾಲಿಗೆ ಅಪಾರ ಲಾಭದಾಯಕ ಸಾಬೀತಾಗಲಿದೆ. ಈ ಅವಧಿಯಲ್ಲಿ ನಿಮ್ಮ ಸಾಹಸ ಪರಾಕ್ರಮ ಹೆಚ್ಚಾಗಲಿದೆ. ಆತ್ಮವಿಶ್ವಾಸ ಸಾಕಷ್ಟು ಹೆಚ್ಚಾಗಲಿದೆ. ಸೇನೆ, ಪೊಲೀಸ್ ಹಾಗೋ ಕ್ರೀಡಾ ಕ್ಷೇತ್ರಕ್ಕೆ ಸಂಬಂಧಿಸಿದ ಜನರಿಗೆ ಈ ಸಮಯ ಅದ್ಭುತವಾಗಿರಲಿದೆ. ಈ ಅವಧಿಯಲ್ಲಿ ನಿಮ್ಮ ಘನತೆ-ಗೌರವ-ಪ್ರತಿಷ್ಠೆ ಹೆಚ್ಚಾಗಲಿದೆ. ಬಾಳಸಂಗಾತಿಯ ಜೊತೆಗಿನ ನಿಮ್ಮ ಬಿಗಡಾಯಿಸಿದ ಸಂಬಂಧ ಸುಧಾರಿಸಲಿದೆ. ಪಾಟ್ನರ್ಶಿಪ್ ವ್ಯವಹಾರದಲ್ಲಿ ನಿಮಗೆ ಲಾಭ ಸಿಗಲಿದೆ.
ಸಿಂಹ ರಾಶಿ: ಮಂಗಳನ ಈ ಗೋಚರ ನಿಮ್ಮ ಜಾತಕದ ತೃತೀಯ ಭಾವದಲ್ಲಿ ನೆರವೇರಿದೆ. ಹೀಗಾಗಿ ಈ ಅವಧಿಯಲ್ಲಿ ನಿಮ್ಮ ಸಾಹಸ ಪರಾಕ್ರಮ ಹೆಚ್ಚಾಗಲಿದೆ. ಹಣ ಹೂಡಿಕೆಯಿಂದ ನೀವು ಮಾಡಿದ ಯೋಜನೆಗಳು ಹೊಸ ಎತ್ತರಕ್ಕೆ ನಿಮ್ಮನ್ನು ಕೊಂಡೊಯ್ಯಲಿವೆ. ವಿದೇಶ ವ್ಯಾಪಾರಕ್ಕೆ ಸಂಬಂಧ ಹೊಂದಿದವರಿಗೆ ಉತ್ತಮ ಲಾಘ ಸಿಗಲಿದೆ. ಕೆಲಸದ ನಿಮಿತ್ತ ವಿದೇಶ ಯಾತ್ರೆ ಸಂಭವಿಸುವ ಸಾಧ್ಯತೆ ಇದೆ. ಇನ್ನೊಂದೆಡೆ ಮಂಗಳ ನಿಮ್ಮ ಜಾತಕದ ಚತುರ್ಥ ಹಾಗೂ ನವಮಭಾವದ ಅಧಿಪತಿಯಾದ ಕಾರಣ ಈ ಅವಧಿಯಲ್ಲಿ ನಿಮಗೆ ಅದೃಷ್ಟದ ಸಂಪೂರ್ಣ ಬೆಂಬಲ ಸಿಗಲಿದ್ದು, ನೀವು ವಾಹನ-ಆಸ್ತಿಪಾಸ್ತಿ ಖರೀದಿಸುವ ಸಾಧ್ಯತೆ ಇದೆ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)