ಮುಂದಿನ 20 ದಿನಗಳವರೆಗೆ 3 ರಾಶಿಗಳ ಜನರ ಜೀವನದಲ್ಲಿ ಐಶ್ವರ್ಯಲಕ್ಷ್ಮಿ ಕೃಪೆಯಿಂದ ಅಪಾರ ಕನಕವೃಷ್ಟಿ ಯೋಗ!

Fri, 27 Oct 2023-3:02 pm,

ಸಾಮಾನ್ಯವಾಗಿ ತುಲಾ ರಾಶಿ ನ್ಯಾಯ, ಸುಂದರತೆ ಹಾಗೂ ಸೌಹಾರ್ದತೆಯ ದ್ಯೋತಕವಾಗಿದೆ. ಹೀಗಿರುವಾಗ ಮಂಗಳನ ತುಲಾ ರಾಶಿ ಗೋಚರ ಹಲವು ರಾಶಿಗಳ ಜೀವನದಲ್ಲಿ ಭಾರಿ ಬದಲಾವಣೆಗೆ ಕಾರಣವಾಗಲಿದೆ. ಸಾಮಾನ್ಯವಾಗಿ ವೈವಾಹಿಕ ಜೀವನ, ಕಾನೂನು ಹೋರಾಟ, ಬಿಸ್ನೆಸ್ ಇತ್ಯಾದಿಗಳಲ್ಲಿ ನೀವು ಭಾರಿ ಬದಲಾವಣೆಯನ್ನು ಗಮನಿಸಬಹುದು. ಗುರಿಗಳತ್ತ ತಲುಪಲು ಇದು ತುಂಬಾ ಸಹಕಾರ ಮಾಡುತ್ತದೆ. ತುಲಾ ರಾಶಿಯಲ್ಲಿ ಮಂಗಳನ ಪ್ರವೇಶದಿಂದ ವ್ಯಕ್ತಿ ಕುಟುಂಬ ಹಾಗೂ ಬಂಧು ಮಿತ್ರರಿಗೋಸ್ಕರ ಯಾವುದೇ ಹಂತಕ್ಕೆ ಹೋಗಲು ಸಿದ್ಧನಾಗುತ್ತಾನೆ. ಹಾಗಾದರೆ ಮಂಗಳನ ಈ ತುಲಾ ಗೋಚರ ಯಾವ ರಾಶಿಗಳ ಜನರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರಲಿದೆ ತಿಳಿದುಕೊಳ್ಳೋನ ಬನ್ನಿ,

ವೃಷಭ ರಾಶಿ: ಮಂಗಳನ ತುಲಾ ಗೋಚರ ನಿಮ್ಮ ಪಾಲಿಗೆ ಸಾಕಷ್ಟು ಲಾಭದಾಯಕ ಸಾಬೀತಾಗಲಿದೆ. ಏಕೆಂದರೆ ಈ ಅವಧಿಯಲ್ಲಿ ಮಂಗಳ ನಿಮ್ಮ ಜಾತಕದ ಶಷ್ಟಮ ಭಾವದಲ್ಲಿ ವಿರಾಜಮಾನನಾಗಿದ್ದಾನೆ. ಇದರಿಂದ ನಿಮಗೆ ಬಿಸ್ನೆಸ್ ಹಾಗೂ ನೌಕರಿಯಲ್ಲಿ ಅಪಾರ ಲಾಭ ಸಿಗಲಿದೆ. ಕೆಲಸದ ನಿಮಿತ್ತ ವಿದೇಶಕ್ಕೆ ಯಾತ್ರೆ ಸಂಭವಿಸುವ ಸಾಧ್ಯತೆ ಇದೆ. ಆದರೆ, ಅನಾವಶ್ಯಕ ವೆಚ್ಚದಿಂದ ತೊಂದರೆಗೊಳಗಾಗುವಿರಿ. ಉನ್ನತ ವ್ಯಾಸಂಗ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗುವಿರಿ. ನೀವು ಆತ್ಮವಿಶ್ವಾಸದತ್ತ ಸಾಗುವಿರಿ

ಕರ್ಕ ರಾಶಿ: ಹಾಗೆ ನೋಡಿದರೆ ಮಂಗಳ ನಿಮ್ಮ ರಾಶಿಯ ಯೋಗಕಾರಕನಾಗಿದ್ದಾನೆ ಮತ್ತು ಆತ ನಿಮ್ಮ ಗೋಚರ ಜಾತಕದ ಚತುರ್ಥ ಭಾವದಲ್ಲಿ ಸಂಚರಿಸುತ್ತಿದ್ದಾನೆ. ಇದರಿಂದ ನಿಮಗೆ ಅದೃಷ್ಟದ ಸಂಪೂರ್ಣ ಬೆಂಬಲ ಸಿಗಲಿದೆ. ಮನೆ, ವಾಹನ, ಸಂಪತ್ತು ಖರೀದಿಸುವ ಎಲ್ಲಾ ಸಾಧ್ಯತೆಗಳಿವೆ. ಇದರಿಂದ ಭವಿಷ್ಯದಲ್ಲಿ ನಿಮಗೆ ಸಾಕಷ್ಟು ಲಾಭ ಸಿಗಲಿದೆ ವ್ಯಾಪಾರದಲ್ಲಿಯೂ ಕೂಡ ಲಾಭದ ಸಂಕೇತಗಳಿವೆ. ಅಧಿಕ ಲಾಭದ ಕಾರಣ ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಅಪಾರ ವೃದ್ಧಿಯಾಗಲಿದೆ. 

ತುಲಾ ರಾಶಿ: ನಿಮ್ಮ ಜಾತಕದ ಪ್ರಥಮ ಭಾವದಲ್ಲಿ ಮಂಗಳನ ಈ ಗೋಚರ ನೆರವೇರಿದೆ. ಇದರಿಂದ ನಿಮಗೆ ವಿಶೇಷ ಲಾಭಸಿಗಲಿದೆ. ಇದರಿಂದ ನಿಮ್ಮಲ್ಲಿ ಉಂಟಾಗುವ ಸಕಾರಾತ್ಮಕ ಶಕ್ತಿಯ ಕಾರಣ ನೀವು ಪ್ರತಿಯೊಂದು ಕ್ಷೇತ್ರದಲ್ಲಿ ಯಶಸ್ಸನ್ನು ಸಾಧಿಸುವಿರಿ. ವಾಹನ-ಸಂಪತ್ತು ಖರೀದಿಸುವ ಅವಕಾಶ ಒದಗಿಬರಲಿದೆ. ನಿಮ್ಮ ಜಾತಕದ ಚತುರ್ಥ ಭಾವದ ಮೇಲೆ ಮಂಗಳ ತನ್ನ ದೃಷ್ಟಿ ನೆಟ್ಟಿರುವ ಕಾರಣ ಬಿಸ್ನೆಸ್ ನಲ್ಲಿ ನಿಮಗೆ ಅಪಾರ ಯಶಸ್ಸು ಸಿಗಲಿದೆ. ವಾಹನ ಖರೀದಿ ಹಾಗೂ ಮಾರಾಟದಿಂದ ನಿಮಗೆ ಅಪಾರ ಧನಲಾಭ ಸಿಗಲಿದೆ. ಒಂಟಿಯಾಗಿರುವವರಿಗೆ ಮದುವೆಯ ಪ್ರಸ್ತಾಪ ಬರುವ ಸಾಧ್ಯತೆ ಇದೆ. ವಿವಾಹಿತರಿಗೆ ಸಂಗಾತಿಯ ಸಂಪೂರ್ಣ ಬೆಂಬಲ ಪ್ರಾಪ್ತಿಯಾಗಲಿದೆ.

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)

ZEENEWS TRENDING STORIES

By continuing to use the site, you agree to the use of cookies. You can find out more by Tapping this link