Mars Transit: ಅಕ್ಟೋಬರ್ 3ರವರೆಗೆ ಈ ರಾಶಿಯವರಿಗೆ ತುಂಬಾ ಎಚ್ಚರಿಕೆ ಅಗತ್ಯ

Tue, 22 Aug 2023-7:31 am,

ನಾಲ್ಕು ದಿನಗಳ ಹಿಂದಷ್ಟೇ ಆಗಸ್ಟ್ 18, 2023ರಂದು ಕನ್ಯಾ ರಾಶಿಯನ್ನು ಪ್ರವೇಶಿಸಿರುವ ಮಂಗಳನು ಮುಂದಿನ ಅಕ್ಟೋಬರ್ 03, 2023ರವರೆಗೆ ಇದೆ ರಾಶಿಯಲ್ಲಿ ಸಂಚರಿಸುತ್ತಾನೆ. ಮಂಗಳನ ಈ ರಾಶಿ ಪರಿವರ್ತನೆಯು ಕೆಲವು ರಾಶಿಯವರ ಜೀವನದಲ್ಲಿ ಸಂಕಷ್ಟಗಳ ಸರಮಾಲೆಯನ್ನೇ ತಂದೊಡ್ಡಲಿದ್ದು, ಮುಂದಿನ 40 ದಿನಗಳವರೆಗೆ ಈ ರಾಶಿಯವರು ತುಂಬಾ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಲಾಗುತ್ತದೆ. ಆ ರಾಶಿಗಳು ಯಾವುವು ಎಂದು ತಿಳಿಯೋಣ... 

ಮಂಗಳನ ರಾಶಿ ಪರಿವರ್ತನೆಯು ವೃಷಭ ರಾಶಿಯವರಿಗೆ ಅಷ್ಟು ಮಂಗಳಕರವಾಗಿಲ್ಲ. ಈ ಸಮಯದಲ್ಲಿ ವೃಷಭ ರಾಶಿಯ ಜನರು ಆರ್ಥಿಕವಾಗಿ ಭಾರೀ ನಷ್ಟವನ್ನು ಎದುರಿಸಲಿದ್ದು, ಇದು ನಿಮ್ಮ ಆರೋಗ್ಯದ ಮೇಲೂ ನಕಾರಾತ್ಮಕ ಪರಿಣಾಮವನ್ನು ಬೀರಬಹುದು. ಹಾಗಾಗಿ, ಹಣಕಾಸಿನ ವಿಷಯದಲ್ಲಿ ತುಂಬಾ ಎಚ್ಚರಿಕೆಯಿಂದ ಮುಂದುವರೆಯಿರಿ. 

ಮಂಗಳನ ಪ್ರಭಾವದಿಂದ ಸಿಂಹ ರಾಶಿಯವರ ಜೀವನದಲ್ಲಿಯೂ ನಾನಾ ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಈ ಸಂದರ್ಭದಲ್ಲಿ ಕೆಲಸ ಕಾರ್ಯಗಳಲ್ಲಿ ಸ್ವಲ್ಪ ಆಜಾಗರೂಕತೆಯೂ ಸಹ ನಿಮ್ಮ ಕೆಲಸಗಳನ್ನು ಹಾಳುಮಾಡಬಹುದು. ಇದು ಕೈಗೆ ಬಂದ ತುತ್ತು, ಬಾಯಿಗೆ ಇಲ್ಲ ಎಂಬಂತೆ ಮಾಡಬಹುದು. ಇದಲ್ಲದೆ, ವ್ಯಾಪಾರ-ವ್ಯವಹಾರದಲ್ಲಿಯೂ ಮೈಯೆಲ್ಲಾ ಕಣ್ಣಾಗಿರಬೇಕು. 

ಸ್ವ ರಾಶಿಯಲ್ಲಿ ಮಂಗಳ ಸಂಚಾರವು ಈ ರಾಶಿಯವರಿಗೂ ಕೂಡ ಅಷ್ಟು ಶುಭಕರವಾಗಿಲ್ಲ. ಈ ಸಮಯದಲ್ಲಿ ನಿಮ್ಮ ಆಕ್ರಮಣಕಾರಿ ಸ್ವಭಾವದಿಂದಾಗಿ ನೀವು ನಷ್ಟವನ್ನು ಅನುಭವಿಸಬೇಕಾಗಬಹುದು. ಈ ಸಮಯದಲ್ಲಿ ಯಾರೊಂದಿಗೂ ಕೂಡ ಅನಾವಶ್ಯಕ ವಾದಗಳನ್ನು ತಪ್ಪಿಸಿ. ಇಲ್ಲದಿದ್ದರೆ, ಇದೇ ನಿಮ್ಮ ಸಂಕಷ್ಟಗಳನ್ನು ಹೆಚ್ಚಿಸಲಿದೆ. ಹಾಗಾಗಿ, ಅಕ್ಟೋಬರ್ 3ರವರೆಗೆ ಪ್ರತಿ ವಿಷಯದಲ್ಲೂ ತುಂಬಾ ಜಾಗರೂಕರಾಗಿರಿ. 

ಮಂಗಳ ರಾಶಿ ಪರಿವರ್ತನೆಯಿಂದ ಕುಂಭ ರಾಶಿಯವರು ನಿಮ್ಮ ಪೂರ್ವಜರಾ ಆಸ್ತಿಗೆ ಸಂಬಂಧಿಸಿದಂತೆ ವ್ಯಾಜ್ಯಗಳನ್ನು ಎದುರಿಸಬೇಕಾಗಬಹುದು. ಈ ಸಮಯದಲ್ಲಿ ಭಾರೀ ಹಣಕಾಸಿನ ನಷ್ಟ ಸಾಧ್ಯತೆ ಇರುವುದರಿಂದ ತುಂಬಾ ಹುಷಾರಾಗಿರಿ. ಇದು ನಿಮ್ಮ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link