Mangal Gochar: ಮಾರ್ಚ್‌ನಲ್ಲಿ ಕುಂಭ ರಾಶಿಗೆ ಮಂಗಳನ ಸಂಚಾರ, ನಾಲ್ಕು ರಾಶಿಯವರಿಗೆ ಬಂಪರ್
ಜ್ಯೋತಿಷ್ಯಶಾಸ್ತ್ರದಲ್ಲಿ ಗ್ರಹಗಳ ಕಮಾಂಡರ್ ಎಂದು ಕರೆಯಲ್ಪಡುವ ಮಂಗಳನು ಮಾರ್ಚ್ ಮಾಸದಲ್ಲಿ ತನ್ನ ರಾಶಿಚಕ್ರವನ್ನು ಬದಲಾಯಿಸಲಿದ್ದಾನೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಯಾರ ಜಾತಕದಲ್ಲಿ ಮಂಗಳ ಬಲವಿದೆಯೋ ಅವರು ಧೈರ್ಯಶಾಲಿ ಮತ್ತು ನಿರ್ಭೀತರು ಆಗಿರುತ್ತಾರೆ.
ಮಾರ್ಚ್ 15, 2024ರಂದು ಮಂಗಳನು ಮಕರ ರಾಶಿಯನ್ನು ತೊರೆದು ಕುಂಭ ರಾಶಿಗೆ ಪ್ರವೇಶಿಸಲಿದ್ದಾನೆ.
ಈಗಾಗಲೇ ಕುಂಭ ರಾಶಿಯಲ್ಲಿ ಶನಿ ಮಹಾತ್ಮ ಉಪಸ್ಥಿತನಿರುವುದರಿಂದ ಕುಂಭ ರಾಶಿಯಲ್ಲಿ ಮಂಗಳನ ಪ್ರವೇಶದೊಂದಿಗೆ ಈ ರಾಶಿಯಲ್ಲಿ ಮಂಗಳ ಶನಿ ಯುತಿ ಸಂಭವಿಸುತ್ತದೆ.
ಶನಿ ಮತ್ತು ಮಂಗಳರ ಸಂಯೋಗವು ಎಲ್ಲಾ 12 ರಾಶಿಯವರ ಜೀವನದಲ್ಲಿ ಮಹತ್ವದ ಪರಿಣಾಮವನ್ನು ಬೀರುತ್ತದೆ. ಆದರೂ, ಈ ಸಮಯವನ್ನು ನಾಲ್ಕು ರಾಶಿಯವರ ದೃಷ್ಟಿಯಿಂದ ತುಂಬಾ ಮಂಗಳಕರ ಸಮಯ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ...
ಮೇಷ ರಾಶಿ: ಕುಂಭ ರಾಶಿಗೆ ಮಂಗಳನ ಪ್ರವೇಶದಿಂದಾಗಿ ಮೇಷ ರಾಶಿಯವರಿಗೆ ಕೆಲಸ ಕಾರ್ಯಗಳಲ್ಲಿ ಉಂಟಾಗಿದ್ದ ಅಡೆತಡೆಗಳು ನಿವಾರಣೆಯಗಳಿವೆ. ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ಶುಭ ಸುದ್ದಿ ಪ್ರಾಪ್ತಿಯಾಗಲಿದೆ. ಕೌಟುಂಬಿಕ ಜೀವನ ಆನಂದದಾಯಕವಾಗಿರಲಿದೆ.
ಸಿಂಹ ರಾಶಿ: ಕುಂಭ ರಾಶಿಯಲ್ಲಿ ಮಂಗಳ-ಶನಿ ಸಂಯೋಗವು ಸಿಂಹ ರಾಶಿಯವರಿಗೆ ವೃತ್ತಿ ಜೀವನದಲ್ಲಿ ಪ್ರಗತಿಯನ್ನು ತರಲಿದೆ. ಹಣಕಾಸಿನ ಮೂಲಗಳು ಹೆಚ್ಚಾಗಲಿದ್ದು, ಆರ್ಥಿಕ ಸ್ಥಿತಿ ಮೊದಲಿಗಿಂತ ಸುಧಾರಿಸಲಿದೆ. ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ದೊರೆಯಲಿದೆ.
ಮಕರ ರಾಶಿ: ಮಂಗಳನ ರಾಶಿ ಪರಿವರ್ತನೆಯು ಮಕರ ರಾಶಿಯವರಿಗೂ ಫಲಪ್ರದವಾಗಿರಲಿದೆ. ದೀರ್ಘಕಾಲದವರೆಗೆ ಅನಾರೋಗ್ಯದಿಂದ ಬಳಲುತ್ತಿರುವವರು ಈ ಸಮಯದಲ್ಲಿ ಪರಿಹಾರವನ್ನು ಪಡೆಯಲಿದ್ದಾರೆ. ಹೊಸ ಆರ್ಥಿಕ ಮೂಲಗಳು ಸೃಷ್ಟಿಯಾಗಲಿದ್ದು, ಆರ್ಥಿಕ ಬಿಕ್ಕಟ್ಟಿನಿಂದ ಮುಕ್ತಿ ದೊರೆಯಲಿದೆ.
ಕುಂಭ ರಾಶಿ: ಸ್ವ ರಾಶಿಯಲ್ಲಿ ಮಂಗಳನ ಪ್ರವೇಶ, ಶನಿ-ಮಂಗಳ ಯುತಿಯಿಂದ ಕುಂಭ ರಾಶಿಯವರ ಅದೃಷ್ಟ ಬೆಳಗಲಿದೆ. ಈ ಸಮಯದಲ್ಲಿ ನೀವು ಕೆಲಸದಲ್ಲಿ ಯಶಸ್ಸು, ಉದ್ಯಮ ರಂಗದಲ್ಲಿ ಭಾರೀ ಲಾಭವನ್ನು ತರಲಿದೆ. ಇದರಿಂದಾಗಿ ಹಣಕಾಸಿನ ಸ್ಥಿತಿ ಸುಧಾರಿಸಲಿದ್ದು, ಮನಸ್ಸಿನಲ್ಲಿ ಸಕಾರಾತ್ಮಕ ಭಾವನೆ ಮೂಡಲಿದೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.