ಸಿಂಹ ರಾಶಿಯಲ್ಲಿ ಚಂದ್ರ-ಮಂಗಳರ ಜೊತೆ ಶುಕ್ರನ ಮೈತ್ರಿ ತ್ರಿಗ್ರಹಿ ಯೋಗದಿಂದ ಈ ಜಾತಕದವರ ಮೇಲೆ ಅಪಾರ ಧನವೃಷ್ಟಿ!
Spiritual News In Kannada: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಸಿಂಹ ರಾಶಿಯಲ್ಲಿ ತ್ರಿಗ್ರಹಿ ಯೋಗ ರೂಪುಗೊಳ್ಳಲಿದ್ದು, ಇದರಿಂದ ಕೆಲ ರಾಶಿಗಳ ಜಾತಕದವರಿಗೆ ಆಕಸ್ಮಿಕ ಧನಲಾಭದ ಜೊತೆಗೆ ವೃತ್ತಿ ಜೀವನದಲ್ಲಿ ಉನ್ನತಿಯ ಯೋಗ ಪ್ರಾಪ್ತಿಯಾಗಲಿದೆ.
ಮೇಷ ರಾಶಿ: ಸಾಮಾನ್ಯವಾಗಿ ಶುಕ್ರನನ್ನು ಧನಭಾವದ ಅಧಿಪತಿ ಎಂದು ಭಾವಿಸಲಾಗುತ್ತದೆ. ಇಂತಹ ಸಂದರ್ಭದಲ್ಲಿ ಚಂದ್ರ ಹಾಗೂ ಮಂಗಳರ ಜೊತೆಗೆ ಆತನ ಮೈತ್ರಿ ಧನ ಯೋಗ ರೂಪಿಸುತ್ತಿದೆ. ಹೀಗಾಗಿ ತ್ರಿಗ್ರಹಿ ಯೋಗ ಮೇಷ ರಾಶಿಯ ಜಾತಕದವರ ಪಾಲಿಗೆ ವಿಶೇಷ ಲಾಭದಾಯಕ ಸಿದ್ಧ ಸಾಬೀತಾಗಲಿದೆ. ಇದರಿಂದ ನಿಮಗೆ ಸಾಲಬಾಧೆಯಿಂದ ಮುಕ್ತಿ ಸಿಗುವುದರ ಜೊತೆಗೆ ಆಕಸ್ಮಿಕ ಧನಲಾಭ ಉಂಟಾಗಲಿದೆ. ಉನ್ನತಿ ಹಾಗೂ ವೃತ್ತಿ ಜೀವನದಲ್ಲಿ ಹೊಸ ಅವಕಾಶಗಳು ಸೃಷ್ಟಿಯಾಗಲಿವೆ. ಕಾರ್ಯಕ್ಷೇತ್ರದಲ್ಲಿ ನಿಮ್ಮ ಕೆಲಸಕ್ಕೆ ಸಾಕಷ್ಟು ಪ್ರಶಂಸೆ ವ್ಯಕ್ತವಾಗಲಿದೆ. ಪದೋನ್ನತಿಯ ಜೊತೆಗೆ ಹೊಸ ಜವಾಬ್ದಾರಿ ಸಿಗುವ ಸಾಧ್ಯತೆ ಇದೆ.
ಮಿಥುನ ರಾಶಿ: ಶುಕ್ರ-ಮಂಗಳ ಹಾಗೂ ಚಂದ್ರರ ಮೈತ್ರಿಯಿಂದ ನಿರ್ಮಾಣಗೊಳ್ಳುತ್ತಿರುವ ಈ ತ್ರಿಗ್ರಹಿ ಯೋಗ ನಿಮ್ಮ ಪಾಲಿಗೂ ಕೂಡ ಅತ್ಯದ್ಭುತ ಸಾಬೀತಾಗಲಿದೆ. ವೃತ್ತಿಜೀವನ ಹಾಗೂ ವ್ಯಾಪಾರದಲ್ಲಿ ಉನ್ನತಿಯ ಯೋಗ ರೂಪುಗೊಳ್ಳುತ್ತಲಿದೆ. ಭಾರಿ ಧನಲಾಭದಿಂದಾಗಿ ನೀವು ಆಸ್ತಿ-ಪಾಸ್ತಿ ಖರೀದಿಸುವ ಸಾಧ್ಯತೆ ಇದೆ. ಕೋರ್ಟ್-ಕಚೇರಿ ವ್ಯವಹಾರಗಳಲ್ಲಿ ಯಶಸ್ಸು ನಿಮ್ಮದಾಗಲಿದೆ.
ಸಿಂಹ ರಾಶಿ: ಹಾಗೆ ನೋಡಿದರೆ ಸಿಂಹ ರಾಶಿಯಲ್ಲಿ ಶುಕ್ರ-ಮಂಗಳ ಹಾಗೂ ಚಂದ್ರರ ಮೈತ್ರಿಯ ಕಾರಣ ತ್ರಿಗ್ರಹಿ ಯೋಗ ನಿರ್ಮಾಣಗೊಳ್ಳುತ್ತಿದೆ. ಹೀಗಿರುವಾಗ ನಿಮಗೂ ಕೂಡ ಈ ಯೋಗ ಆಕಸ್ಮಿಕ ಧನಲಾಭವನ್ನು ತಂದು ಕೊಡಲಿದೆ. ನೌಕರ ವರ್ಗದ ಜನರಿಗೆ ನೌಕರಿಯಲ್ಲಿ ಪ್ರಮೋಷನ್ ಭಾಗ್ಯ ಪ್ರಾಪ್ತಿಯಾಗುವ ಸಾಧ್ಯತೆ ಇದೆ. ಮಕ್ಕಳ ಕಡೆಯಿಂದ ಶುಭ ಸಮಾಚಾರ ಸಿಗುವ ಸಾಧ್ಯತೆ ಇದೆ. ಸ್ಪರ್ಧಾತ್ಮಕ ಪರೀಕ್ಷೆಯ ಸಿದ್ಧತೆ ನಡೆಸುತ್ತಿರುವವರಿಗೆ ಯಶಸ್ಸು ಸಿಗುವ ಸಾಧ್ಯತೆ ಇದೆ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)